ETV Bharat / sitara

'ನೀನು ದೇವರ ಮನೆಗೆ ಹೋಗಿ ವರ್ಷವಾಯಿತು...'ಮೇಘನಾ ಭಾವನಾತ್ಮಕ ಮಾತು - ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅಗಲಿ ಇಂದಿಗೆ ಒಂದು ವರ್ಷ

ಕನ್ನಡ ಚಿತ್ರರಂಗದ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅಗಲಿ ಇಂದಿಗೆ ಒಂದು ವರ್ಷ. ಪತ್ನಿ ಮೇಘನಾರಾಜ್ ಚಿರು ನೆನೆದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

Chiranjeevi Sarja
ಚಿರಂಜೀವಿ ಸರ್ಜಾ ಅಗಲಿ ಇಂದಿಗೆ ಒಂದು ವರ್ಷ
author img

By

Published : Jun 7, 2021, 11:25 AM IST

ಕನ್ನಡ ಚಿತ್ರರಂಗದ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅಗಲಿ ಇಂದಿಗೆ ಒಂದು ವರ್ಷ. ಸ್ಯಾಂಡಲ್​ವುಡ್​ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿದ್ದ ಚಿರು 2020ರ ಜೂನ್ 7ರಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಚಿರಂಜೀವಿ ಸರ್ಜಾ ಒಂದನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಕನಕಪುರ ರಸ್ತೆ ನೆಲಗುಳಿ ಬಳಿಯಿರುವ ಬೃಂದಾವನ ಫಾರ್ಮ್ ಹೌಸ್‌ನಲ್ಲಿ ಇಂದು ಕುಟುಂಬಸ್ಥರು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.

Chiranjeevi Sarja
ಮೇಘನಾರಾಜ್ ಭಾವನಾತ್ಮಕ ಪೋಸ್ಟ್​

ಪತಿ ಬಗ್ಗೆ ಮೇಘನಾ ರಾಜ್ ಭಾವನಾತ್ಮಕ ನುಡಿ

'ನೀನು ದೇವರ ಮನೆಗೆ ಹೋಗಿ ವರ್ಷವಾಯಿತು. ಎಷ್ಟು ಬೇಗ ಒಂದು ವರ್ಷ. ಈ 365 ದಿನಗಳಲ್ಲಿ ನಿನ್ನ ನೆನೆಯದ ದಿನಗಳೇ ಇಲ್ಲ. ಕನಸಿನಲ್ಲಿ ನಿನ್ನ ಕಾಣದ ರಾತ್ರಿಗಳೇ ಇಲ್ಲ. ಮರೆಯಲಾಗದ ಚಿರು ನೆನಪುಗಳು. ಕುಟುಂಬದ ಮೇಲೆ ನಿನಗಿದ್ದ ಅಪಾರ ಗೌರವ. ಜನರಿಗೆ ನೀನು ತೋರಿಸುತ್ತಿದ್ದ ಪ್ರೀತಿ, ಪ್ರೇಮ, ಸ್ನೇಹ, ಉದಾರಗುಣ ಮತ್ತು ಅಜಾತ ಶತ್ರುಗಿದ್ದ ನಿನ್ನ ನೆನಪುಗಳೇ ಈಗ ನಮ್ಮ ಕರಗಲಾರದ ಆಸ್ತಿ. ನೀನೆಲ್ಲಿದ್ದರೂ ಅಲ್ಲಿ ನಗು ತುಂಬಿರಬೇಕು. ನಿನ್ನ ಆತ್ಮ ಸದಾ ಶಾಂತಿಯಿಂದಿರಬೇಕು. ಆ ಪ್ರಾರ್ಥನೆಯಲ್ಲೇ ಎಂದೆಂದೂ ನಿನ್ನ ನೆನಪಿನಲ್ಲೇ ಎಂದು ಮೇಘನಾ ಬರೆದುಕೊಂಡಿದ್ದಾರೆ.

Chiranjeevi Sarja
ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್

ಚಿರು ಜೊತೆಗಿರುವ ಕ್ಯಾಂಡಿಡ್ ಫೋಟೋ ಹಂಚಿಕೊಂಡಿರುವ ಮೇಘನಾ 'Us Mine' ಎಂದು ಬರೆದುಕೊಂಡಿದ್ದಾರೆ. ಮೇಘನಾ ಮಾತುಗಳಿಗೆ ಚಿತ್ರರಂಗದ ಸ್ನೇಹಿತರು ಹಾಗು ಅಭಿಮಾನಿಗಳು ಇವರಿಬ್ಬರೂ ಎಷ್ಟು ಪ್ರೀತಿಸುತ್ತಿದ್ದರೆಂದು ಎಂದು ಕಾಮೆಂಟ್ ಮಾಡಿದ್ದಾರೆ.

Chiranjeevi Sarja
ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್

ಇದನ್ನೂ ಓದಿ: ಹೊಂಬಾಳೆ ಫಿಲಂಸ್​ಗೆ ಸಿನಿಮಾ ಮಾಡ್ತಾರಾ ಸಿಂಪಲ್​ ಸ್ಟಾರ್ ರಕ್ಷಿತ್ ಶೆಟ್ಟಿ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.