ETV Bharat / sitara

ಶಿವಾಜಿ ಸುರತ್ಕಲ್ ಚಿತ್ರಕ್ಕೆ ಎಂಟ್ರಿ ಕೊಟ್ಟ ಮೇಘನಾ​​.. ವಿಶೇಷ ಪಾತ್ರದಲ್ಲಿ ಚಾರ್ ಮಿನಾರ್ ಬೆಡಗಿ..! - meghana gaonkar

ರಮೇಶ್ ಅರವಿಂದ್ ಡಿಟೆಕ್ಟಿವ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದ, 'ಶಿವಾಜಿ ಸುರತ್ಕಲ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆ ಗಳಿಕೆ ಮಾಡಿ ಹಿಟ್ ಸಿನಿಮಾ ಅನಿಸಿಕೊಂಡಿತ್ತು‌. ಈಗ ಶಿವಾಜಿ ಸುರತ್ಕಲ್ ಸಿನಿಮಾದ ಪಾರ್ಟ್ 2 ಬರ್ತಾ ಇದೆ. ಮುಂದುವರಿದ ಭಾಗದಲ್ಲಿ ಗ್ಲಾಮರ್​ ಗೊಂಬೆ ಮೇಘನಾ ಗಾಂವ್ಕರ್‌ ಖಡಕ್​ ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

meghana-gaonkar
ಮೇಘನಾ ಗಾಂವ್ಕರ್
author img

By

Published : Oct 25, 2021, 5:15 PM IST

2020ಕ್ಕೆ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿದ್ದ 'ಶಿವಾಜಿ ಸುರತ್ಕಲ್‌' ಸಿನಿಮಾದ ಮುಂದುವರೆದ ಭಾಗ ಸದ್ಯದಲ್ಲೇ ಆರಂಭವಾಗಲಿದ್ದು, ಈ ಸಿನಿಮಾ ತಂಡಕ್ಕೆ ಈಗ ಮೇಘನಾ ಗಾಂವ್ಕರ್‌ ಸೇರಿಕೊಂಡಿದ್ದಾರೆ. ಇದರಲ್ಲಿ ಅವರು ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ನಟಿಸುತ್ತಿದ್ದಾರೆ.

meghana-gaonkar-acting-in shivaji-surathkal
ಶಿವಾಜಿ ಸುರತ್ಕಲ್ ವಿಶೇಷ ಪಾತ್ರದಲ್ಲಿ ಚಾರ್ ಮಿನಾರ್ ಬೆಡಗಿ

ರಮೇಶ್ ಅರವಿಂದ್ ಡಿಟೆಕ್ಟಿವ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದ, 'ಶಿವಾಜಿ ಸುರತ್ಕಲ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆ ಗಳಿಕೆ ಮಾಡಿ ಹಿಟ್ ಸಿನಿಮಾ ಅನಿಸಿಕೊಂಡಿತ್ತು‌. ಈಗ ಶಿವಾಜಿ ಸುರತ್ಕಲ್ ಸಿನಿಮಾದ ಪಾರ್ಟ್ 2 ಬರ್ತಾ ಇದೆ. ಮುಂದುವರಿದ ಭಾಗದಲ್ಲಿ ಶಿವಾಜಿ ಸುರತ್ಕಲ್ ಆಗಿ ಕಾಣಿಸಿಕೊಂಡ ರಮೇಶ್ ಅರವಿಂದ್ ಅವರ ಜೊತೆ ರಾಧಿಕಾ ನಾರಾಯಣ್, ರಾಘು ರಮಣಕೊಪ್ಪ, ವಿದ್ಯಾ ಮೂರ್ತಿಯವರು ಅವರವರ ಪಾತ್ರದಲ್ಲಿ ಮುಂದುವರಿಯಲಿದ್ದಾರೆ.

ಶಿವಾಜಿ ಸುರತ್ಕಲ್​ 2 ಚಿತ್ರದಲ್ಲಿ ಮೇಘನಾ ಗಾಂವ್ಕರ್​​ ನಟನೆ

ಇದೀಗ ಚಾರ್ ಮಿನಾರ್ ಬೆಡಗಿ ಮೇಘನಾ ಗಾವ್ಕಂರ್ ಈ ಚಿತ್ರದಲ್ಲಿ ಒಂದು ಮುಖ್ಯವಾದ ಪಾತ್ರ ಮಾಡ್ತಾ ಇದ್ದಾರೆ. ಈ ಚಿತ್ರದಲ್ಲಿದ್ದು, ಅದರಲ್ಲಿ ಡಿಸಿಪಿ ದೀಪಾ ಕಾಮತ್ ಕೂಡ ಒಂದು. ಬೆಂಗಳೂರ್ ಸೆಂಟ್ರಲ್ ಕ್ರೈಂ ಬ್ರಾಂಚ್ ಡಿಸಿಪಿ ಪಾತ್ರಧಾರಿಯಾಗಿ ಮೇಘನಾ ಗಾಂವ್ಕರ್ ಕಾಣಿಸಿಕೊಳ್ಳಲಿದ್ದಾರೆ. ಇಷ್ಟು ದಿನ ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮೇಘನಾ ಗಾಂವ್ಕರ್ ಅವರು ಮೊದಲ ಬಾರಿಗೆ ಟಫ್ ಕಾಪ್ ಆಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಗ್ಲಾಮರ್ ಗೊಂಬೆ ಮೇಘನಾ ಗಾಂವ್ಕರ್​​

ಚಿತ್ರದಲ್ಲಿ ಪ್ರಮುಖ ಪಾತ್ರವಾದ ಡಿಸಿಪಿ ದೀಪ ಕಾಮತ್, ಶಿವಾಜಿ ಸುರತ್ಕಲ್ ಅವರಿಗೆ ಬೆನ್ನೆಲುಬಾಗಿ ನಿಲ್ಲುವ ಮತ್ತು ಮೇಲಧಿಕಾರಿಯ ಪಾತ್ರವಾಗಿರುತ್ತದೆ. ಇನ್ನಷ್ಟು ಹೊಸ ತಾರಾಗಣ ಚಿತ್ರತಂಡ ಸೇರಲಿದ್ದು, ಚಿತ್ರದ ನಿರ್ಮಾಣದ ಕೆಲಸವು ಈಗಾಗಲೇ ನಡೆಯುತ್ತಿದೆ, ಕೆಲವೇ ದಿನದಲ್ಲಿ ಮುಹೂರ್ತ ಮಾಡಿ ಚಿತ್ರೀಕರಣಕ್ಕೆ ಹೋಗುವುದಾಗಿ ಚಿತ್ರತಂಡ ತಿಳಿಸಿದೆ. ರಮೇಶ್ ಅರವಿಂದ್ ಅವರ 103ನೇ ಚಿತ್ರ ಇದಾಗಿದ್ದು, ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ಆಕಾಶ್ ಶ್ರಿವತ್ಸ ಅವರು ನಿರ್ದೇಶನ‌ ಮಾಡ್ತಾ ಇದ್ದಾರೆ.

ಶಿವಾಜಿ ಸುರತ್ಕಲ್ ಚಿತ್ರಕ್ಕೆ ಎಂಟ್ರೀ ಕೊಟ್ಟ ಮೇಘನಾ ಗಾಂವ್ಕರ್

ನಿರ್ದೇಶಕ ಆಕಾಶ್ ಶ್ರೀವತ್ಸ ಹೇಳುವ ಹಾಗೇ ಶಿವಾಜಿ ಸುರತ್ಕಲ್ ಎರಡು ಕಾಲಘಟ್ಟದಲ್ಲಿ ನಡೆಯುವ ಚಿತ್ರವಾಗಿತ್ತು, ಆದರೆ, ಭಾಗ-2 ಬಹುಕೋನಗಳಿರುವ ಚಿತ್ರಕಥೆ ಹೊಂದಿದ್ದು, ಪತ್ತೇದಾರಿ ಕತೆ ಆಗಿರುವುದರಿಂದ ಕೊಲೆಗಾರನ ಹುಡುಕಾಟದ ಮಾರ್ಗದಲ್ಲಿ ಈ ಕಥೆ ಸಾಗಲಿದೆ. ಗುರುಪ್ರಸಾದ್ M.G. ಛಾಯಾಗ್ರಾಹಕರಾಗಿ ಮುಂದುವರಿಯಲಿದ್ದು, ಉಳಿದಂತೆ ತಾಂತ್ರಿಕ ತಂಡ ವಿವರ ಸದ್ಯದಲ್ಲೇ ಗೊತ್ತಾಗಲಿದೆ. ರೇಖಾ.ಕೆ.ಎನ್ ಮತ್ತು ಅನುಪ್ ಗೌಡ ಶಿವಾಜಿ ಸುರತ್ಕಲ್ 2 ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.