ETV Bharat / sitara

ರಾಘವ ಸಮಾಜ ಕಾರ್ಯಕ್ಕೆ ಮೆಗಾ ಮೆಚ್ಚುಗೆ: ಹತ್ತು ಲಕ್ಷ ರೂಪಾಯಿ ದೇಣಿಗೆ ನೀಡಿದ ಚಿರು - RAghava

ಬಹಳಷ್ಟು ಜನರಿಗೆ ಸಹಾಯ ಮಾಡುವ ಮೂಲಕ ರಿಯಲ್ ಹೀರೋ ಎನಿಸಿಕೊಂಡಿರುವ ನಟ ರಾಘವ ಲಾರೆನ್ಸ್ ಚಾರಿಟೆಬಲ್ ಟ್ರಸ್ಟ್​​​ಗೆ ಮೆಗಾ ಸ್ಟಾರ್ ಚಿರಂಜೀವಿ 10 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.

ರಾಘವ, ಚಿರಂಜೀವಿ
author img

By

Published : Apr 19, 2019, 8:15 AM IST

ತಮಿಳು ನಟ ರಾಘವ ಲಾರೆನ್ಸ್ ತಮ್ಮ ಸಿನಿಮಾಗಳಿಂದ ಮಾತ್ರವಲ್ಲ ಸಮಾಜಮುಖಿ ಕಾರ್ಯಗಳಿಗೆ ಕೂಡಾ ಹೆಸರಾಗಿದ್ದಾರೆ. ಒಬ್ಬ ಸಿನಿಮಾ ಹೀರೋ ನಿಜ ಜೀವನದಲ್ಲೂ ಹೀರೋ ಆಗಲು ಸಾಧ್ಯ ಎಂದು ತೋರಿಸಿಕೊಟ್ಟವರು ರಾಘವ ಲಾರೆನ್ಸ್.

kanchana 3
ಕಾಂಚನ 3 ಪ್ರೀ ರಿಲೀಸ್ ಕಾರ್ಯಕ್ರಮ

ಚಾರಿಟೆಬಲ್ ಟ್ರಸ್ಟ್ ನಡೆಸುತ್ತಿರುವ ರಾಘವ ಆ ಮೂಲಕ ಎಷ್ಟೋ ವಿದ್ಯಾರ್ಥಿಗಳ ವಿದ್ಯಾಭ್ಯಾಸ, ಆರೋಗ್ಯ ಹಾಗೂ ಇನ್ನಿತರ ಖರ್ಚುಗಳನ್ನು ನಿಭಾಯಿಸಿದ್ದಾರೆ. ಕೆಲವು ಬಡವರಿಗೆ ಮನೆಗಳನ್ನೂ ಕಟ್ಟಿಸಿಕೊಟ್ಟಿದ್ದಾರೆ. ಇದೀಗ ರಾಘವ ಹೈದರಾಬಾದ್​​ನಲ್ಲಿ ಕೂಡಾ ಚಾರಿಟೆಬಲ್ ಸಂಸ್ಥೆಯ ಬ್ರಾಂಚ್ ತೆರೆದಿದ್ದಾರೆ. ರಾಘವ ಅವರ ಈ ಕಾರ್ಯಕ್ಕೆ ಇತರ ಸೆಲಬ್ರಿಟಿಗಳು ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೆಗಾ ಸ್ಟಾರ್ ಚಿರಂಜೀವಿ ರಾಘವ ಟ್ರಸ್ಟ್​​​ಗೆ ಹತ್ತು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಇಂದು ರಾಘವ ನಿರ್ದೇಶಿಸಿ ನಟಿಸಿರುವ ಕಾಂಚನ-3 ಬಿಡುಗಡೆಯಾಗುತ್ತಿದೆ. ಮೊನ್ನೆ ನಡೆದ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಚಿರಂಜೀವಿ ಪರವಾಗಿ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ರಾಘವ ಕೈಗೆ ಲಕ್ಷ ರೂಪಾಯಿ ಚೆಕ್ ನೀಡಿದ್ದಾರೆ.

raghava
ಕಾಂಚನ -3

ಕಾಂಚನ -3 ಸಿನಿಮಾವನ್ನು ರಾಘವ , ಸನ್​ ಪಿಕ್ಚರ್ಸ್ ಸಂಸ್ಥೆ ಜೊತೆ ಸೇರಿ ನಿರ್ಮಿಸಿದ್ದಾರೆ. ಕೋವೈ ಸರಳ, ವೇದಿಕ, ಓವಿಯಾ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ.

raghava
ರಾಘವ ಚಾರಿಟೆಬಲ್ ಟ್ರಸ್ಟ್​​​​​

Intro:Body:

RAghava

Conclusion:

For All Latest Updates

TAGGED:

RAghava
ETV Bharat Logo

Copyright © 2025 Ushodaya Enterprises Pvt. Ltd., All Rights Reserved.