ETV Bharat / sitara

ಇದು ಹುಬ್ಬಳ್ಳಿ ಹುಡುಗಿಯರ 'ಮೌನಂ'.. ಕೃಷ್ಣ'ಲೀಲಾ' ಮಯೂರಿ ಮತ್ತೆ ಬಂದ್ರೂರೀ..

ಮಯೂರಿ ಅಭಿನಯದ ‘ಮೌನಂ’ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದ್ದು ಶೀಘ್ರವೇ ಸಿನಿಮಾ ಸೆನ್ಸಾರ್ ಮುಂದೆ ಹಾಜರಾಗಲಿದೆ. ಚಿತ್ರದಲ್ಲಿ ಮಯೂರಿ ಎರಡು ವಿಭಿನ್ನ ಶೇಡ್​​​​​​​ಗಳಲ್ಲಿ ನಟಿಸಿದ್ದಾರೆ.

author img

By

Published : May 15, 2019, 1:52 PM IST

ಮಯೂರಿ ಕ್ಯಾತರಿ

ಹುಬ್ಬಳ್ಳಿ ಹುಡುಗಿ ಮಯೂರಿ ಕ್ಯಾತರಿ ‘ಅಶ್ವಿನಿ ನಕ್ಷತ್ರ ‘ ಧಾರವಾಹಿ ಮೂಲಕ ಬೆಳಕಿಗೆ ಬಂದ ನಕ್ಷತ್ರ. ಈ ಧಾರವಾಹಿ ನಂತರ ಸಿನಿಮಾಗಳಲ್ಲೂ ನಟಿಸಲು ಅವಕಾಶ ಪಡೆದ ಮಯೂರಿ ‘ಕೃಷ್ಣಲೀಲ‘ ಸಿನಿಮಾ ಮೂಲಕ ಸ್ಯಾಂಡಲ್ವುಡ್​ಗೆ ಕೂಡಾ ಕಾಲಿಟ್ಟರು.

mounam
‘ಮೌನಂ ‘ ಸಿನಿಮಾ ದೃಶ್ಯ

ಆ ನಂತರ ನಟರಾಜ ಸರ್ವೀಸ್, ಕರಿಯ-2, ರ್‍ಯಾಂಬೋ-2, ನನ್ನ ಪ್ರಕಾರ, ರುಸ್ತುಂ, ಆಟಕ್ಕುಂಟು ಲೆಕ್ಕಕ್ಕಿಲ್ಲ, ಪೊಗರು ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಅವರು ನಟಿಸಿದರು. ‘ಇಷ್ಟ ಕಾಮ್ಯ’ ಚಿತ್ರದ ಅಭಿನಯಕ್ಕೆ ಮೆಚ್ಚುಗೆ ಪಡೆದ ಮಯೂರಿ, ನವರಸ ನಾಯಕ ಜಗ್ಗೇಶ್ ಅಭಿನಯದ 8 ಎಂಎಂ ಸಿನಿಮಾದಲ್ಲೂ ಕೂಡಾ ಮಿಂಚಿದರು. ಇದೀಗ ಅವರು ‘ಮೌನಕ್ಕೆ’ ಜಾರಿದ್ದಾರೆ. ಹೌದು, ಮಯೂರಿ ಅಭಿನಯದ ‘ಮೌನಂ’ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದೆ. ಎರಡು ವಿಭಿನ್ನ ಶೇಡ್​​ಗಳಲ್ಲಿ ಮಯೂರಿ ಈ ಚಿತ್ರದಲ್ಲಿ ಮಿಂಚಿದ್ದಾರೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ ಹಿರಿಯ ನಟ ಅವಿನಾಶ್​​​​​ ಆರು ಶೇಡ್​​​​​​​​​​​​​​​​​​​​​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ರೀತಿಯ ಪಾತ್ರ ಅವಿನಾಶ್ ವೃತ್ತಿ ಬದುಕಿನಲ್ಲೇ ಮೊದಲು.

mounam
ನಟ ಅವಿನಾಶ್​

‘ಮೌನಂ’ ಒಂದು ಹೋರಾಟದ ಸಿನಿಮಾ. ಹೋರಾಟ ಎಂಬುದು ಮನುಷ್ಯನಲ್ಲೇ ಮೊದಲು ಆಗಬೇಕು. ಮನುಷ್ಯನಲ್ಲಿರುವ ಶತ್ರುತ್ವ ಮೊದಲು ತೊಲಗಬೇಕು ಎಂದು ಸಾರುವ ಸಿನಿಮಾ ಇದು. ನಿಹಾರಿಕಾ ಮೂವೀಸ್ ಬ್ಯಾನರ್‌ನಡಿ ಈ ಸಿನಿಮಾವನ್ನು ರಾಜ್ ಪಂಡಿತ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಶಂಕರ್ ಛಾಯಾಗ್ರಹಣ ಮತ್ತು ಗುರುಮೂರ್ತಿ ಹೆಗ್ಗಡೆ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಆರಾವ್ ರಿಶಿಕ್ ಸಂಗೀತ ನೀಡಿದ್ದು ಶ್ರೀಘ್ರವೇ ಸೆನ್ಸಾರ್ ಮುಂದೆ ಹೋಗಲಿದೆ.

mounam
ಮಯೂರಿ, ಬಾಲಾಜಿ ಶರ್ಮಾ

ಮಯೂರಿ ಮೌನಂ ಸಿದ್ದವಾಯಿತು

ಹುಬ್ಬಳ್ಳಿಯ ಕಿಲಾಡಿ ಹುಡುಗಿ ಮಯೂರಿ ಕ್ಯಾಟರಿ ಕೃಷ್ಣ ಲೀಲ ಮುಖಾಂತರ ಕನ್ನಡ ಸಿನಿಮಾದಲ್ಲಿ ನೆನೆಯುರಿದರು. ಅದಕ್ಕೂ ಮುಂಚೆ ಅಶ್ವಿನಿ ನಕ್ಷತ್ರ ಧಾರಾವಾಹಿ ಇಂದ ಮನೆ ಮಾತದರು. ಪಟಪಟನೆ ಮಾತು ಇವರ ಭಂಡವಾಳ, ಸುಂದರ ನಗೆ ಇವರ ಆಸ್ತಿ ಸಹ.

 ನಟರಾಜ ಸೇರ್ವಿಸ್, ಕರಿಯ 2, ರಂಬೊ 2, ನನ್ನ ಪ್ರಾಕಾರ, ರುಸ್ತುಂ, ಆಟಕ್ಕುಂಟು ಲೆಕ್ಕಕ್ಕಿಲ್ಲ, ಪೊಗರು, ಅನಾದ್ಯತ....ಹೀಗೆ ಸಾಲು ಸಾಲು ಸಿನಿಮಗಳು ಇವರ ಪಟ್ಟಿಯಲ್ಲಿದೆ. ಆದರೆ ಇಷ್ಟ ಕಾಮ್ಯ ಚಿತ್ರದ ಅಭಿನಯಕ್ಕೆ ಮೆಚ್ಚುಗೆ ಪಡೆದ ಮಯೂರಿ ತೀರ್ಪುಗಾರರಾಗಿ ಕಂಡರು, ನವರಸ ನಾಯಕ ಜಗ್ಗೇಶ್ ಅಭಿನಯದ 8 ಎಂ ಎಂ ಸಿನಿಮಾದಲ್ಲೂ ಸಹ ಮಿಂಚಿದರು. ಈಗ ಅವರ ಮೌನಕ್ಕೆ ಜಾರಿದ್ದಾರೆ ಅಂದರೆ ತಪ್ಪು ತಿಳಿಯಬೇಕಿಲ್ಲ. ಮಯೂರಿ ಅಭಿನಯದ ಮೌನಂ ಸಿನಿಮಾ ಚಿತ್ರೀಕರಣ ಪೂರ್ತಿಗೊಳಿಸಿದೆ. ಮಯೂರಿ ಅವರಿಗೆ ಎರಡು ವಿಭಿನ್ನ ಪಾತ್ರಗಳು ಈ ಚಿತ್ರದಲ್ಲಿದೆ. ಕನ್ನಡದ ಹಿರಿಯ ಪ್ರತಿಭಾನ್ವಿತ ನಟ ಅವಿನಾಷ್ ಅವರು ಆರು ಶೆಡ್ ಅಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂತಹ ತರಹವಾರಿ ಅವಿನಾಷ್ ಅವರ ವೃತ್ತಿ ಬದುಕಿನಲ್ಲಿ ಇದೆ ಮೊದಲು.

ಮೌನಂ ಒಂದು ಹೋರಾಟದ ಸಿನಿಮಾ. ಹೋರಾಟ ಎಂಬುದು ಮನುಷ್ಯನಲ್ಲೇ ಮೊದಲ ಆಗಬೇಕು. ಮನುಷ್ಯನಲ್ಲಿರುವ ಶತ್ರುತ್ವ ಮೊದಲ ತೊಳಗಬೇಕು ಎಂದು ಸಾರುವ ಸಿನಿಮಾ.

ಬಾಲಾಜಿ ಶರ್ಮ, ಕೆಂಪೆ ಗೌಡ, ರಿಟೇಶ್, ಗುಣವಂತ ಮಂಜು, ಹನುಮಂತೆ ಗೌಡ, ನಯನ, ಮಂಜುಳ ರೆಡ್ಡಿ ಹಾಗೂ ಇತರರು ಈ ನಿಹಾರಿಕ ಮೂವೀಸ್ ಅಡಿಯಲ್ಲಿ ಅಭಿನಯಿಸಿದ್ದಾರೆ. ರಾಜ್ ಪಂಡಿತ್ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ಮಾಡಿದ್ದಾರೆ. ಶಂಕರ್ ಛಾಯಾಗ್ರಹಣ ಮತ್ತು ಗುರುಮೂರ್ತಿ ಹೆಗ್ಗಡೆ ಸಂಕಲನವಿದೆ.

ಆರಾವ್ ರಿಶಿಕ್ ಹಾಡುಗಳಿವೆ ರಾಗ ಸಂಯೋಜನೆ ಇರುವ ಈ ಮೌನಂ ಚಿತ್ರ ಇನ್ನೇನು ಸೆನ್ಸಾರ್ ಮುಂದೆ ಹಾಜರಾಗಲಿದೆ. 

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.