ಮಾಯಾಮೃಗ ಇದನ್ನು ಕೇಳಿದೊಡನೆ ಥಟ್ಟನೆ ನೆನಪಾಗುವುದು ಟಿ.ಎನ್ ಸೀತಾರಾಮ್. ಹೌದು ಸ್ವಲ್ಪ ದಿನಗಳ ಹಿಂದೆ ಮತ್ತೆ ಮಾಯಾಮೃಗ ನಿಮ್ಮ ಮುಂದೆ ಎಂದಿದ್ದ ಟಿ.ಎನ್ ಸೀತಾರಾಮ್, ಇದೀಗ ಯೂಟ್ಯೂಬ್ ಮೂಲಕ ವೆಬ್ ಸಿರೀಸ್ ರೂಪದಲ್ಲಿ ಮತ್ತೆ 'ಮಾಯಾಮೃಗ' ವೀಕ್ಷಿಸುವ ಅವಕಾಶ ನೀಡಿದ್ದಾರೆ.
ದೂರದರ್ಶನದಲ್ಲಿ 1998ರಲ್ಲಿ ಪ್ರಸಾರ ಆರಂಭಿಸಿದ ‘ಮಾಯಾಮೃಗ’ ಸೀರಿಯಲ್ನಲ್ಲಿ ಎಚ್.ಜಿ. ದತ್ತಾತ್ರೇಯಾ (ದತ್ತಣ್ಣ), ಮಾಳವಿಕಾ ಅವಿನಾಶ್, ಮಂಜು ಭಾಷಿಣಿ, ಎಂ.ಡಿ. ಪಲ್ಲವಿ, ಮುಖ್ಯಮಂತ್ರಿ ಚಂದ್ರು, ವೈಶಾಲಿ ಕಾಸರವಳ್ಳಿ, ಅವಿನಾಶ್, ಜಯಶ್ರೀ, ಲಕ್ಷ್ಮೀ ಚಂದ್ರಶೇಖರ್ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದರು. 2014ರಲ್ಲಿ ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಮರುಪ್ರಸಾರವನ್ನೂ ಕಂಡಿತ್ತು. ಈಗ ಹೊಸ ತಲೆಮಾರಿನ ಪ್ರೇಕ್ಷಕರಿಗೆ ಮತ್ತೆ ಮಾಯಾಮೃಗವನ್ನು ಪರಿಚಯಿಸಲಾಗುತ್ತಿದೆ. ವೆಬ್ ಸಿರೀಸ್ ರೂಪದಲ್ಲಿ ಇದನ್ನು ಜನರ ಮುಂದಿಡಲು ಸಿದ್ಧತೆ ನಡೆದಿದೆ. ಯುಟ್ಯೂಬ್ನಲ್ಲಿ ಪ್ರಸಾರ ಮಾಡಲಾಗುವುದು ಎಂದು ಸ್ವತಃ ಟಿ.ಎನ್. ಸೀತಾರಾಮ್ ಮಾಹಿತಿ ಹಂಚಿಕೊಂಡಿದ್ದಾರೆ.
https://m.facebook.com/story.php?story_fbid=10225795930904422&id=1216366751
ಮಾಯಾಮೃಗ ಧಾರಾವಾಹಿ ಕನ್ನಡದ ಶ್ರೇಷ್ಠ ಧಾರಾವಾಹಿಗಳಲ್ಲಿ ಒಂದು. ಅದೊಂದು ದಂತ ಕಥೆ ಅಂಥ ಮಾಯಾಮೃಗ ಇನ್ನೊಂದು ವಾರದಲ್ಲಿ webseries. ರೀತಿಯಲ್ಲಿ ನಿಮ್ಮ ಮುಂದೆ. https://youtube.com/c/bhoomikatalkies ಹೀಗೆಂದು ಸೋಷಿಯಲ್ ಮೀಡಿಯಾದಲ್ಲಿ ಟಿಎನ್ ಸೀತಾರಾಮ್ ಪೋಸ್ಟ್ ಮಾಡಿದ್ದಾರೆ.
ಭೂಮಿಕಾ ಟಾಕೀಸ್ ಯೂಟ್ಯೂಬ್ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ಸೀತಾರಾಮ್ ಜೊತೆಯಲ್ಲಿ ಪಿ. ಶೇಷಾದ್ರಿ ಅವರು ಕೂಡ ‘ಮಾಯಾಮೃಗ’ಕ್ಕೆ ನಿರ್ದೇಶನ ಮಾಡಿದ್ದರು. ವೆಬ್ ಸಿರೀಸ್ ರೂಪದಲ್ಲಿ ಸಬ್ ಟೈಟಲ್ ಅಳವಡಿಸಲಾಗಿದೆ. ಅನ್ಯ ಭಾಷಿಕರು ಕೂಡ ಮಾಯಾಮೃಗ ನೋಡುವಂತಾಗಲಿ ಎಂಬುದು ನಿರ್ದೇಶಕರ ಆಶಯ.