ETV Bharat / sitara

ಪುನೀತ್ ಡಿಫರೆಂಟ್ ಲುಕ್​​​ನಲ್ಲಿ ಹೆಜ್ಜೆ ಹಾಕಿರುವ 'ಮಾಯಾ ಬಜಾರ್​' ಪೂರ್ತಿ ವಿಡಿಯೋ ರಿಲೀಸ್​​​​ - ಪುನೀತ್​ ವಿಭಿನ್ನ ಲುಕ್​​​​​ನಲ್ಲಿ ಹೆಜ್ಜೆ ಹಾಕಿರುವ ಹಾಡು ಬಿಡುಗಡೆ

'ಮಾಯಾ ಬಜಾರ್​​' ಚಿತ್ರದ ಹಾಡಿನಲ್ಲಿ ಪುನೀತ್ ರಾಜ್​​ಕುಮಾರ್ 70-80 ದಶಕದ ಬ್ಲ್ಯಾಕ್ ಆ್ಯಂಡ್​​​​​​​​​​​​​ ವೈಟ್ ವಿಡಿಯೋದಲ್ಲಿ ರಾಜಕುಮಾರ ಭರ್ಜರಿ ಸ್ಟೆಪ್ ಹಾಕಿದ್ದಾರೆ. ವಿಶೇಷ ಎಂದರೆ ಪವರ್ ಸ್ಟಾರ್ ದಪ್ಪ ಮೀಸೆಯಲ್ಲಿ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಡಿನ ಮೊದಲ ಭಾಗ ಫುಲ್ ಶೇವ್ ಮಾಡಿದ್ದರೆ, ಇನ್ನರ್ಧ ಭಾಗ ಮೀಸೆ ಬಿಟ್ಟು ಸಹ ಕಲಾವಿದರ ಜೊತೆ ಹೆಜ್ಜೆ ಹಾಕಿದ್ದಾರೆ.

Mayabazar
'ಮಾಯಾ ಬಜಾರ್​'
author img

By

Published : Mar 12, 2020, 11:12 PM IST

'ಮಾಯಾ ಬಜಾರ್' , ಪುನೀತ್ ರಾಜ್​​​​​​​ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್‌ನಲ್ಲಿ ಸಿದ್ಧವಾಗಿರುವ ಎರಡನೇ ಸಿನಿಮಾ. ಈ ಸಿನಿಮಾದ 'ಕಾಲ ಎಂದೋ ಎಕ್ಕುಟ್ಹೋಯ್ತು' ಹಾಡಿನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್​​​ಕುಮಾರ್ ಭರ್ಜರಿ ಡ್ಯಾನ್ಸ್ ಮಾಡಿದ್ದರು. ಈ ಹಾಡಿನ ಸಣ್ಣ ವಿಡಿಯೊ ತುಣುಕೊಂದನ್ನು ಹರಿಯಬಿಟ್ಟು ಪುನೀತ್ ಅಭಿಮಾನಿಗಳಲ್ಲಿ ಕ್ಯೂರಿಯಾಸಿಟಿ ಹುಟ್ಟಿಸಿದ್ದರು.

  • " class="align-text-top noRightClick twitterSection" data="">

ಇನ್ನು ಈ ಲಿರಿಕಲ್ ಹಾಡಿನಲ್ಲಿ ಪವರ್ ಸ್ಟಾರ್ ಹೇಗೆ ಡ್ಯಾನ್ಸ್ ಮಾಡಿರಬಹುದು ಎಂಬ ಕುತೂಹಲ ಅಭಿಮಾನಿಗಳಿಗೆ ಇತ್ತು. ಇದೀಗ ಚಿತ್ರತಂಡ 'ಮಾಯಾ ಬಜಾರ್' ಚಿತ್ರದ ಪೂರ್ತಿ ಹಾಡನ್ನು ರಿವೀಲ್ ಮಾಡಿದೆ. 70-80 ದಶಕದ ಬ್ಲ್ಯಾಕ್ ಆ್ಯಂಡ್​​​​​​​​​​​​​ ವೈಟ್ ವಿಡಿಯೋದಲ್ಲಿ ರಾಜಕುಮಾರ ಭರ್ಜರಿ ಸ್ಟೆಪ್ ಹಾಕಿದ್ದಾರೆ. ವಿಶೇಷ ಎಂದರೆ ಪವರ್ ಸ್ಟಾರ್ ದಪ್ಪ ಮೀಸೆಯಲ್ಲಿ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಡಿನ ಮೊದಲ ಭಾಗ ಫುಲ್ ಶೇವ್ ಮಾಡಿದ್ದರೆ, ಹಾಡಿನ ಇನ್ನರ್ಧ ಭಾಗ ಮೀಸೆ ಬಿಟ್ಟು ಸಹ ಕಲಾವಿದರ ಜೊತೆ ಹೆಜ್ಜೆ ಹಾಕಿದ್ದಾರೆ. ಸೂಟು, ಬೂಟು, ಹ್ಯಾಟು, ಮೀಸೆ ಅಪ್ಪುಗೆ ಡಿಫರೆಂಟ್​​​​​ ಇಮೇಜ್ ನೀಡಿದೆ. ಈ ಹಾಡನ್ನು ನಿರ್ದೇಶಕ ಯೋಗರಾಜ್‌ ಭಟ್ ಬರೆದಿದ್ದರೆ, ಮಿದುನ್​​​​​​​​ ಮುಕುಂದನ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಬಹುಭಾಷಾ ಪ್ರಖ್ಯಾತ ಗಾಯಕ ಎಸ್‌.ಪಿ. ಬಾಲಸುಬ್ರಮಣ್ಯಂ ಈ ಹಾಡನ್ನು ಹಾಡಿದ್ದಾರೆ. ಪವರ್ ಸ್ಟಾರ್ ಇಷ್ಟು ವರ್ಷಗಳ ಸಿನಿಮಾ ಕರಿಯರ್​​​ನಲ್ಲಿ ಅವರಿಗೆ ಇದೇ ಮೊದಲ ಬಾರಿಗೆ ಎಸ್​​​​ಪಿಬಿ ಹಾಡಿರುವುದು ವಿಶೇಷ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.