ಮುಂಬೈ: ಜನವರಿ 13 ರಂದು ಬಿಡುಗಡೆಯಾದ ವಿಜಯ್ ಅಭಿನಯದ 'ಮಾಸ್ಟರ್' ಸಿನಿಮಾಗೆ ಸಿನಿಪ್ರಿಯರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಈ ಸಿನಿಮಾ ಒಟಿಟಿ ವೇದಿಕೆಯಲ್ಲಿ ಕೂಡಾ ಬಿಡುಗಡೆಯಾಗಲಿದೆ. ಜನವರಿ 29 ರಂದು ಈ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗಲಿದೆ. ಇಂದು ಚಿತ್ರತಂಡ ಈ ವಿಚಾರವನ್ನು ಘೋಷಿಸಿದೆ.
'ಮಾಸ್ಟರ್' ಚಿತ್ರವನ್ನು ಗ್ಸೇವಿಯರ್ ಬ್ರಿಟ್ಟೋ ನಿರ್ಮಾಣ ಮಾಡಿದ್ದರೆ, ಲೋಕೇಶ್ ಕನಕರಾಜು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಶಾಲಾ ಮಕ್ಕಳನ್ನು ಕ್ರಿಮಿನಲ್ ಕೆಲಸಗಳಿಗೆ ಬಳಸಿಕೊಳ್ಳುವ ಭವಾನಿ ಎಂಬ ಗ್ಯಾಂಗ್ಸ್ಟರ್ ಜೊತೆ ಪ್ರೊಫೆಸರ್ ಒಬ್ಬರು ಹೋರಾಡುವ ಕಥೆಯೇ ಮಾಸ್ಟರ್. ಚಿತ್ರದಲ್ಲಿ ವಿಜಯ್ ಸೇತುಪತಿ ಭವಾನಿ ಎಂಬ ಗ್ಯಾಂಗ್ಸ್ಟರ್ ಪಾತ್ರದಲ್ಲಿ ನಟಿಸಿದ್ದರೆ, ವಿಜಯ್ ಜಾನ್ ದುರೈರಾಜ್ ಎಂಬ ಪ್ರೊಫೆಸರ್ ಪಾತ್ರದಲ್ಲಿ ನಟಿಸಿದ್ದಾರೆ. ಅಭಿಮಾನಿಗಳು ಭಾರತ ಮಾತ್ರವಲ್ಲ ವಿಶ್ವಾದ್ಯಂತ ಅಮೆಜಾನ್ ಪ್ರೈಂನಲ್ಲಿ ಸಿನಿಮಾವನ್ನು ಎಂಜಾಯ್ ಮಾಡಬಹುದು ಎಂದು ವಿಜಯ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಕಾನೂನಿನ ಮೇಲೆ ನಂಬಿಕೆಯಿದೆ, ಸತ್ಯಕ್ಕೆ ಜಯ ಸಿಗಲಿದೆ: ರಾಗಿಣಿ
ಅಮೆಜಾನ್ ಪ್ರೈಂ ವಿಡಿಯೋ ನಿರ್ದೇಶಕ ವಿಜಯ್ ಸುಬ್ರಮಣಿಯನ್ ಮಾತನಾಡಿ, "ಭಾರತ ಹೊರತುಪಡಿಸಿ ವಿಶ್ವಾದ್ಯಂತ 240 ದೇಶಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಿನಿಪ್ರಿಯರು ಅಮೆಜಾನ್ ಪ್ರೈಂನಲ್ಲಿ ಮನೆಯಲ್ಲೇ ಕುಳಿತು ಮಾಸ್ಟರ್ ಸಿನಿಮಾವನ್ನು ಎಂಜಾಯ್ ಮಾಡಬಹುದು. ಕೊರೊನಾ ಭಯದಿಂದ ಥಿಯೇಟರ್ಗೆ ಬರಲು ಆಗದವರು ಸುರಕ್ಷತೆ ಹಾಗೂ ನಿರ್ಭೀತಿಯಿಂದ ಕುಟುಂಬದೊಂದಿಗೆ ಈ ಸಿನಿಮಾವನ್ನು ನೋಡಿ ಆನಂದಿಸಬಹುದು ಎಂದು ಹೇಳಿದ್ದಾರೆ. ಚಿತ್ರದಲ್ಲಿ ವಿಜಯ್ ಹಾಗೂ ಸೇತುಪತಿ ಜೊತೆಗೆ ಮಾಳವಿಕಾ ಮೋಹನ್, ಶಂತನು ಭಾಗ್ಯರಾಜ್, ಅರ್ಜುನ್ ದಾಸ್ ಹಾಗೂ ಇನ್ನಿತರರು ನಟಿಸಿದ್ದಾರೆ.