ಮಾಸ್ ಲುಕ್ನಿಂದಲೇ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ನಟ ರಾಜವರ್ಧನ್. 'ಬಿಚ್ಚುಗತ್ತಿ' ಸಿನಿಮಾ ಮೂಲಕ ,ಕತ್ತಿವರಸೆ, ಕುದುರೆ ಸವಾರಿ ಮಾಡಿ ಪ್ರೇಕ್ಷಕರ ಮನ ಗೆದ್ದಿದ್ದ ಮಾಸ್ಸಿವ್ ಸ್ಟಾರ್ ರಾಜವರ್ಧನ್ ಈಗ ಕಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ.
![Rajavardhan Tollywood entry](https://etvbharatimages.akamaized.net/etvbharat/prod-images/kn-bng-01-tollywoodge-entry-kotta-rajavaradhan-7204735_27082020123302_2708f_1598511782_795.jpg)
ಇನ್ನೂ ಹೆಸರಿಡದ ಪ್ರೊಡಕ್ಷನ್ ನಂಬರ್ 1 ಹೆಸರಿನಲ್ಲಿ ರಾಜವರ್ಧನ್ ನಟಿಸುತ್ತಿರುವ ತಮಿಳು ಸಿನಿಮಾವೊಂದು ಅನೌನ್ಸ್ ಆಗಿದೆ. ಕೈಯಲ್ಲಿ ಲಾಂಗ್ ಹಿಡಿದು ರಾಜವರ್ಧನ್ ಬ್ಯಾಕ್ ಪೋಸ್ ಕೊಟ್ಟಿರುವ ಪೋಸ್ಟರನ್ನು ಚಿತ್ರತಂಡ ಅನಾವರಣ ಮಾಡಿದೆ. ಕುಮಾರೇಶ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು ಈ ಮೂಲಕ ರಾಜವರ್ಧನ್ ತಮಿಳು ಸಿನಿಮಾ ಇಂಡಸ್ಟ್ರಿಗೆ ಪರಿಚಯವಾಗುತ್ತಿದ್ದಾರೆ.
![Rajavardhan Tollywood entry](https://etvbharatimages.akamaized.net/etvbharat/prod-images/kn-bng-01-tollywoodge-entry-kotta-rajavaradhan-7204735_27082020123302_2708f_1598511782_2.jpg)
ರಾಜವರ್ಧನ್ ನಟಿಸುತ್ತಿರುವ ಇದು ನೈಜ ಘಟನೆ ಆಧಾರಿತ ಸಿನಿಮಾ ಎನ್ನಲಾಗಿದೆ. ಚಿತ್ರಕ್ಕೆ ಎಸ್.ಕೆ. ರಾವ್ ಕ್ಯಾಮರಾ ಕೈ ಚಳಕವಿದ್ದು, ರೆಡ್ ಡೈಮಂಡ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. 'ಬಿಚ್ಚುಗತ್ತಿ' ಸಿನಿಮಾ ನಂತರ ರಾಜವರ್ಧನ್ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಈಗ ಉತ್ತರ ದೊರೆತಿದೆ. ಚಿತ್ರದ ನಾಯಕಿ, ತಾಂತ್ರಿಕ ವರ್ಗ ಹಾಗೂ ಉಳಿದ ತಾರಾ ಬಳಗದ ಬಗ್ಗೆ ಶೀಘ್ರವೇ ಮಾಹಿತಿ ಹೊರ ಬೀಳಲಿದೆ.