ETV Bharat / sitara

34ನೇ ವಸಂತಕ್ಕೆ ಕಾಲಿಟ್ಟ ನಟ ಧ್ರುವ ಸರ್ಜಾ: 'ಮಾರ್ಟಿನ್' ಪೋಸ್ಟರ್ ರಿಲೀಸ್​​​ - actor dhruva sarja

ನಟ ಧ್ರುವ ಸರ್ಜಾ ಬರ್ತ್‌ಡೇ ಸಲುವಾಗಿ ಮಾರ್ಟಿನ್ ಚಿತ್ರದ ಮತ್ತೊಂದು ಲುಕ್​​ ಅನಾವರಣಗೊಂಡಿದೆ. ಈ ಪೋಸ್ಟರ್​ನಲ್ಲಿ ಧ್ರುವ ಸರ್ಜಾ, ಕೈಗೆ ತೊಡಿಸಿರುವ ಬೇಡಿಯನ್ನು ಬಾಯಲ್ಲಿ ಹಿಡಿದಿಟ್ಟುಕೊಂಡು ಎದುರಾಳಿಯನ್ನು ದಿಟ್ಟಿಸಿ ನೋಡುತ್ತಿದ್ದಾರೆ‌. ಜೊತೆಗೆ ಧ್ರುವ ಸರ್ಜಾ ತೋಳಿನ ಮೇಲಿರುವ ಇಂಡಿಯನ್ ಟ್ಯಾಟೂ ಆಕರ್ಷಣೀಯವಾಗಿದೆ.

martin film poster released
ಮಾರ್ಟಿನ್ ಚಿತ್ರದ ಪೋಸ್ಟರ್ ರಿಲೀಸ್​​​
author img

By

Published : Oct 6, 2021, 12:58 PM IST

ಅದ್ಧೂರಿ, ಬಹದ್ಧೂರ್ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟ ಧ್ರುವ ಸರ್ಜಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಆ್ಯಕ್ಷನ್, ಪಂಚಿಂಗ್ ಡೈಲಾಗ್​ಗಳಿಂದಲೇ ಅಭಿಮಾನಿಗಳಿಗೆ ಇಷ್ಟವಾಗುವ ಧ್ರುವ ಸರ್ಜಾ 34ನೇ ವಸಂತಕ್ಕೆ ಕಾಲಿಟ್ಟಿದ್ದು, ಗ್ರ್ಯಾಂಡ್‌ ಬರ್ತ್‌ಡೇ ಸೆಲೆಬ್ರೇಷನ್​ಗೆ ಮನಸ್ಸು ಮಾಡಿಲ್ಲ.

ಅಣ್ಣನ ಅಗಲಿಕೆ ಹಾಗೂ ಕೊರೊನಾ ಕಾರಣದಿಂದ ಕಳೆದ ವರ್ಷ ಬರ್ತ್‌ಡೇ ಆಚರಣೆ ಬೇಡ ಎಂದಿದ್ದರು. ಈ ವರ್ಷವು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ಅಭಿಮಾನಿಗಳಿಗೆ ವಿಡಿಯೋ ಮೂಲಕ ತಿಳಿಸಿದ್ದಾರೆ. ಯಾರೂ ಕೂಡ ಮನೆ ಹತ್ತಿರ ಬರಬೇಡಿ, ತಾವು ಎಲ್ಲಿರುತ್ತೀರೋ ಅಲ್ಲಿಂದಲೇ ವಿಶಸ್ ತಿಳಿಸಿ ಅಂತ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ, ಸೋಷಿಯಲ್ ಮೀಡಿಯಾ ಮೂಲಕ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

martin film poster released
ಮಾರ್ಟಿನ್ ಚಿತ್ರದ ಪೋಸ್ಟರ್ ರಿಲೀಸ್​​​

'ಪೊಗರು' ನಟನ ಹುಟ್ಟುಹಬ್ಬಕ್ಕೆ ನಿರ್ದೇಶಕ ಎ.ಪಿ.ಅರ್ಜುನ್ ಸ್ಪೆಷಲ್​​ ಗಿಫ್ಟ್ ಕೊಟ್ಟಿದ್ದಾರೆ. ಹೌದು, ಮಾರ್ಟಿನ್ ಚಿತ್ರದ ಮತ್ತೊಂದು ಲುಕ್​​ನ ಅನಾವರಣ ಮಾಡಿದ್ದಾರೆ. ಈ ಪೋಸ್ಟರ್​ನಲ್ಲಿ ಧ್ರುವ ಸರ್ಜಾ, ಕೈಗೆ ತೊಡಿಸಿರುವ ಬೇಡಿಯನ್ನು ಬಾಯಲ್ಲಿ ಹಿಡಿದಿಟ್ಟುಕೊಂಡು ಎದುರಾಳಿಯನ್ನು ದಿಟ್ಟಿಸಿ ನೋಡುತ್ತಿದ್ದಾರೆ‌. ಜೊತೆಗೆ ಧ್ರುವ ಸರ್ಜಾ ತೋಳಿನ ಮೇಲಿರುವ ಇಂಡಿಯನ್ ಟ್ಯಾಟೂ ಆಕರ್ಷಣೀಯವಾಗಿದೆ.

ಇದನ್ನೂ ಓದಿ: ಆ್ಯಕ್ಷನ್ ಪ್ರಿನ್ಸ್ ಹುಟ್ಟುಹಬ್ಬ: ಅಭಿಮಾನಿಗಳಿಗೆ ಧ್ರುವ ಸರ್ಜಾ ಹೇಳಿದ್ದೇನು ಗೊತ್ತಾ?

ಅದ್ಧೂರಿ ಸಿನಿಮಾ ಬಳಿಕ ನಿರ್ದೇಶಕ ಎ.ಪಿ.ಅರ್ಜುನ್, ಧ್ರುವ ಸರ್ಜಾ ಜೊತೆ ಮಾಡುತ್ತಿರುವ ಎರಡನೇ ಚಿತ್ರ ಇದಾಗಿದೆ. ಹೀಗಾಗಿ ಇವರಿಬ್ಬರ ಕಾಂಬಿನೇಷನ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ‌‌. ಮತ್ತೊಂದು ಹಿಟ್ ಸಿನಿಮಾ ಕೊಡುವುದಕ್ಕೆ ಧ್ರುವ ಸರ್ಜಾ ಜೊತೆ ನಿರ್ದೇಶಕ ಎ.ಪಿ.ಅರ್ಜುನ್ ಪಣತೊಟ್ಟಿದ್ದಾರೆ. ಬಹು ವೆಚ್ಚದಲ್ಲಿ ನಿರ್ಮಾಪಕ ಉದಯ್ ಕೆ. ಮೆಹ್ತಾ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.