ಕನ್ನಡದ ಹೆಸರಾಂತ ರ್ಯಾಪರ್ ಚಂದನ್ ಶೆಟ್ಟಿ ಮತ್ತು ಬಾರ್ಬಿ ಡಾಲ್ ನಿವೇದಿತಾ ಗೌಡರ ಮದುವೆಯ ದಿನಾಂಕ ಫಿಕ್ಸ್ ಆಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಫೆಬ್ರವರಿ 25 ಮತ್ತು 26 ರಂದು ಈ ಮುದ್ದಾದ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ. ಚಂದನ್ ಮತ್ತು ನಿವೇದಿತಾ ಗೌಡ ಮದುವೆಗೆ ಈಗಾಗಲೇ ಸಾಕಷ್ಟು ಸಿದ್ಧತೆ ನಡೆಯುತ್ತಿದೆ. ಕಳೆದ ವರುಷ ಮೈಸೂರಿನಲ್ಲಿ ಬಹಳ ವಿಜೃಂಭಣೆಯಿಂದ ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಜೋಡಿ ಈ ತಿಂಗಳ ಕೊನೆಯಲ್ಲಿ ಸತಿ ಪತಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
![marriage preparation chandanshetty](https://etvbharatimages.akamaized.net/etvbharat/prod-images/kn-bng-06-marriage-preparation-chandanshetty-photo-ka10018_13022020225104_1302f_1581614464_1086.jpg)
ಮದುವೆಯ ನಂತರ ಹನಿಮೂನ್ಗೆ ಯುನೈಟೆಡ್ ಕಿಂಗ್‌ಡಮ್‌ಗೆ ತೆರಳಲು ಪ್ಲಾನ್ ಮಾಡಿದ್ದೇವೆ. ಆದರೆ, ಯಾವುದು ನಿರ್ಧಾರವಾಗಬೇಕಿದೆ. ಯಾಕೆಂದರೆ ಇನ್ನೂ ಕೂಡ ನಮಗೆ ವೀಸಾ ಸಿಕ್ಕಿಲ್ಲ. ಅದು ಸಿಕ್ಕಿದ ಬಳಿಕ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನಾವು ನಿರ್ದಿಷ್ಟವಾಗಿ ಯಾವ ಜಾಗಕ್ಕೆ ಹೋಗಬೇಕು ಎಂಬುದನ್ನು ಆಲೋಚಿಸಬೇಕಿದೆ ಎಂದು ರ‍್ಯಾಪರ್ ಚಂದನ್ ಶೆಟ್ಟಿ ಹೇಳಿದ್ದಾರೆ.
![marriage preparation chandanshetty](https://etvbharatimages.akamaized.net/etvbharat/prod-images/kn-bng-06-marriage-preparation-chandanshetty-photo-ka10018_13022020225104_1302f_1581614464_929.jpg)
ಸಂಗೀತ ಮಾತ್ರವಲ್ಲದೇ ಸಾಹಿತ್ಯ ರಚನೆಯಲ್ಲಿ ಸಾಕಷ್ಟು ಹೆಸರು ಗಳಿಸಿರುವ ಚಂದನ್ಶೆಟ್ಟಿ, ರಚಿಸಿದ ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಇದೀಗ ಇವರ ಮದುವೆ ಸಂಭ್ರಮದ ನಡುವೆ ಚಂದನ್ ಮತ್ತು ನಿವೇದಿತಾ ಜೊತೆಯಾಗಿ ಹಾಡೊಂದನ್ನು ತಯಾರು ಮಾಡಿದ್ದಾರೆ. ರಿಸೆಪ್ಷನ್ ದಿನದಂದು ಈ ಹಾಡು ರಿಲೀಸ್ ಆಗಲಿದೆ. ನಮ್ಮನ್ನು ಇಷ್ಟಪಡುವ ಎಲ್ಲರಿಗೂ ಈ ಹಾಡು ಸ್ಪೆಷಲ್ ಆಗಿರಲಿದೆ ಎಂದಿದ್ದಾರೆ ನಿವೇದಿತಾ ಮತ್ತು ಚಂದನ್.
![marriage preparation chandanshetty](https://etvbharatimages.akamaized.net/etvbharat/prod-images/kn-bng-06-marriage-preparation-chandanshetty-photo-ka10018_13022020225104_1302f_1581614464_811.jpg)
ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾಗಿರುವ ಇವರು, ಈಗಾಗಲೇ ಪುನೀತ್ ರಾಜಕುಮಾರ್, ದರ್ಶನ್, ವಿಜಯ ಪ್ರಕಾಶ್ ಸೇರಿದಂತೆ ಹಲವರಿಗೆ ಇನ್ವಟೇಷನ್ ನೀಡಿ ಮದುವೆಗೆ ಆಮಂತ್ರಿಸಿದ್ದಾರೆ.
![marriage preparation chandanshetty](https://etvbharatimages.akamaized.net/etvbharat/prod-images/kn-bng-06-marriage-preparation-chandanshetty-photo-ka10018_13022020225104_1302f_1581614464_719.jpg)