ಬಂಡೀಪುರ ಅರಣ್ಯದಲ್ಲಿ ‘ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದ ಶೂಟಿಂಗ್ ನಡೆದಿದ್ದು ಎಲ್ಲರ ಗಮನ ಸೆಳೆದಿತ್ತು. ಇದಕ್ಕೆ ಕಾರಣ ಈ ಶೂಟಿಂಗ್ಲ್ಲಿ ಈ ಕಾರ್ಯಕ್ರಮದ ನಿರೂಪಕ ಬೇರ್ಗ್ರಿಲ್ಸ್ ಜೊತೆ ತಮಿಳು ಸೂಪರ್ಸ್ಟಾರ್ ರಜಿನಿಕಾಂತ್ ಮತ್ತು ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾಗಿಯಾಗಿದ್ದರು ಎಂಬುದು.
ಆದ್ರೆ ಇದೀಗ ತಲೈವಾ ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿ ಸಿಕ್ಕಿದ್ದು, ಬೇರ್ ಗ್ರಿಲ್ಸ್ ಜೊತೆ ರಜಿನಿಕಾಂತ್ ಬಂಡೀಪುರ ಕಾಡಿನಲ್ಲಿ ಸುತ್ತಾಡಿರುವ ವಿಶೇಷ ಸಂಚಿಕೆಯ ಪ್ರೋಮೋ ಬಿಡುಗಡೆಯಾಗಿದೆ. ಈ ಪ್ರೋಮೋದಲ್ಲಿ ಹುಲಿ ಘರ್ಜನೆ ಜೊತೆ ರಜನಿಕಾಂತ್ರನ್ನು ತೋರಿಸಲಾಗಿದೆ. ಅಲ್ಲದೆ ರಜಿನಿ ಬೈಕ್ ಸವಾರಿ ಮಾಡುವ ದೃಶ್ಯಗಳು ಕುತೂಹಲ ಮೂಡಿಸಿವೆ.
-
Gear up to venture into the wilderness of India with survival expert @BearGrylls and the ultimate superstar @Rajinikanth in an action packed adventure. Premieres 23 March at 8 PM, only on Discovery #ThalaivaOnDiscovery pic.twitter.com/zSS4GsSCL4
— Discovery Channel IN (@DiscoveryIN) February 27, 2020 " class="align-text-top noRightClick twitterSection" data="
">Gear up to venture into the wilderness of India with survival expert @BearGrylls and the ultimate superstar @Rajinikanth in an action packed adventure. Premieres 23 March at 8 PM, only on Discovery #ThalaivaOnDiscovery pic.twitter.com/zSS4GsSCL4
— Discovery Channel IN (@DiscoveryIN) February 27, 2020Gear up to venture into the wilderness of India with survival expert @BearGrylls and the ultimate superstar @Rajinikanth in an action packed adventure. Premieres 23 March at 8 PM, only on Discovery #ThalaivaOnDiscovery pic.twitter.com/zSS4GsSCL4
— Discovery Channel IN (@DiscoveryIN) February 27, 2020
ತನ್ನ ಅಧಿಕೃತ ಟ್ವಿಟ್ಟರ್ನಲ್ಲಿ ಪ್ರೋಮೋವನ್ನು ರಿಲೀಸ್ ಮಾಡಿರುವ ಡಿಸ್ಕವರಿ ಚಾನೆಲ್, ಮಾರ್ಚ್ 23ರ ರಾತ್ರಿ 8ಕ್ಕೆ ರಜಿನಿಕಾಂತ್ ವಿಶೇಷ ಸಂಚಿಕೆ ಪ್ರಸಾರಗೊಳ್ಳಲಿದೆ ಎಂದು ತಿಳಿಸಿದೆ.
ಇದೇ ಜನವರಿ 27 ರಿಂದ 29 ರವರೆಗೆ ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದ ಶೂಟಿಂಗ್ ನಡೆಸಲಾಗಿದ್ದು, ಚಿತ್ರೀಕರಣದಲ್ಲಿ ರಜಿನಿಕಾಂತ್ ಮತ್ತು ಅಕ್ಷಯ್ ಕುಮಾರ್ ಭಾಗಿಯಾಗಿದ್ರು.