ETV Bharat / sitara

ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಸಚ್ಚಿದಾನಂದನ್ ನಿಧನ

author img

By

Published : Jun 19, 2020, 8:41 AM IST

ಸೇತುನಾಥನ್ ಜೊತೆಯಲ್ಲಿ ಬರಹಗಾರರಾಗಿ ಹಾಗೂ ಚಿತ್ರಕಥೆ ರಚನೆಕಾರರಾಗಿ ಕಾಣಿಸಿಕೊಳ್ಳುವ ಮೂಲಕ ಸಚಿ ಅವರು ಮಲಯಾಳಂ ಚಿತ್ರರಂಗವನ್ನು ಪ್ರವೇಶಿಸಿದ್ದರು. ಬಳಿಕ ಚಿತ್ರರಂಗದಲ್ಲಿ ಈ ಜೋಡಿ ಸಚಿ - ಸೇತು ಎಂದೇ ಹೆಸರುವಾಸಿಯಾಗಿತ್ತು.

ಸಚ್ಚಿದಾನಂದನ್
ಸಚ್ಚಿದಾನಂದನ್

ತ್ರಿಶೂರ್: ಮಲಯಾಳಂ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ದೇಶಕ, ಚಿತ್ರಕಥೆಗಾರ ಮತ್ತು ನಿರ್ಮಾಪಕ ಸಚ್ಚಿದಾನಂದನ್ ಗುರುವಾರ ನಿಧನರಾಗಿದ್ದಾರೆ.

ಸಚ್ಚಿದಾನಂದನ್
ಸಚ್ಚಿದಾನಂದನ್

ಮಂಗಳವಾರದಂದು ಆಸ್ಪತ್ರೆಗೆ ದಾಖಲಾಗಿದ್ದ ಸಚ್ಚಿದಾನಂದನ್ ಕಳೆದ ಎರಡು ದಿನಗಳಿಂದ ಕೃತಕ ಉಸಿರಾಟ ವ್ಯವಸ್ಥೆಯ ನಿಗಾದಲ್ಲಿದ್ದರು. ಆದರೆ, ಗುರುವಾರ ರಾತ್ರಿ ಹೃದಯಾಘಾತ ಹಾಗೂ ಮಿದುಳಿಗೆ ಆಮ್ಲಜನಕ ಸರಬರಾಜು ಕೊರತೆ ಸಮಸ್ಯೆ ಕಾಣಿಸಿಕೊಂಡು ಕೊನೆಯುಸಿರೆಳೆದಿದ್ದಾರೆ. ತ್ರಿಶೂರ್ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಈ ಜೋಡಿ ಚಾಕೋಲೇಟ್, ಮೇಕಪ್ ಮ್ಯಾನ್, ರಾಬಿನ್ ಹುಡ್ ಮತ್ತು ಸೀನಿಯರ್ಸ್ ನಂತಹ ಹಿಟ್ ಚಿತ್ರಗಳ ಬರಹಗಾರರಾಗಿದ್ದರು. ಕೆಲವು ಕಾರಣಗಳಿಂದ ಈ ಜೊಡಿ 2011 ರಲ್ಲಿ ಬೇರ್ಪಟ್ಟಿತು.

ಸಚ್ಚಿದಾನಂದನ್
ಸಚ್ಚಿದಾನಂದನ್

ನಂತರ ಸಚಿ ಏಕಾಂಗಿಯಾಗಿ ರನ್ ಬೇಬಿ ರನ್, ಚೆಟ್ಟಾಯೀಸ್, ರಾಮಲೀಲಾ, ಷರ್ಲಾಕ್ ಟಾಮ್ಸ್ ಮತ್ತು ಡ್ರೈವಿಂಗ್ ಲೈಸೆನ್ಸ್ ಮುಂತಾದ ಚಲನಚಿತ್ರಗಳಿಗೆ ಚಿತ್ರ - ಕಥೆ ಬರೆದರು.

ಓದಿ:'ಎ ಸ್ಟ್ರೀಟ್ ಕ್ಯಾಟ್ ನೇಮ್ಡ್ ಬಾಬ್' ಖ್ಯಾತಿಯ ಬೆಕ್ಕು ಸಾವು

ಪೃಥ್ವಿರಾಜ್ ನಟನೆಯ ಅನಾರ್ಕಲಿ ಚಿತ್ರವನ್ನು ನಿರ್ದೇಶಿಸುವ ಮೂಲಕ ಸಚಿ ಅವರು ನಿರ್ದೇಶನ ಕ್ಷೇತ್ರಕ್ಕೆ ಕಾಲಿಟ್ಟರು. ಆದರೆ ಸಚಿ ಅವರಿಗೆ ಅಪಾರ ಹೆಸರು ತಂದುಕೊಟ್ಟಿದ್ದು ಪೃಥ್ವಿರಾಜ್ ನಟಿಸಿದ್ದ ‘ಅಯ್ಯಪ್ಪನುಂ ಕೋಶಿಯುಂ’ ಚಿತ್ರ.

ಪ್ರತಿಭಾನ್ವಿತ ಚಿತ್ರ ಬರಹಗಾರ ಹಾಗೂ ನಿರ್ದೇಶಕರಾಗಿದ್ದ ಸಚ್ಚಿದಾನಂದ ನಿಧನಕ್ಕೆ ಮಲಯಾಳಂ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.