ಚೆನ್ನೈ: ಕೋವಿಡ್ ನಿಯಮ, ಮೀರಿ ಬಿಗ್ಬಾಸ್ ಶೂಟಿಂಗ್ ನಡೆಸುತ್ತಿದ್ದ ಕಾರಣ ಚೆನ್ನೈನ ಇವಿಪಿ ಫಿಲ್ಮ್ ಸಿಟಿಯಲ್ಲಿನ ಬಿಗ್ಬಾಸ್ ಸೆಟ್ ಸೀಜ್ ಮಾಡಲಾಗಿದೆ.
ಕಂದಾಯ ಅಧಿಕಾರಿಗಳು ಮಲಯಾಳಂ ಬಿಗ್ಬಾಸ್ ಸೆಟ್ನ್ನ ಸಿಜ್ ಮಾಡಿದ್ದಾರೆ. ತಮಿಳುನಾಡಿನಲ್ಲಿ ಎರಡನೇ ಹಂತದ ಕೋವಿಡ್ ಅಲೆ ಜೋರಾಗಿರುವ ಕಾರಣ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಮೇ. 31ರವರೆಗೆ ರಾಜ್ಯದಲ್ಲಿ ಯಾವುದೇ ರೀತಿಯ ಶೂಟಿಂಗ್ ಚಟುವಟಿಕೆ ನಡೆಸದಂತೆ ಈಗಾಗಲೇ ಘೋಷಣೆ ಮಾಡಲಾಗಿದೆ. ಇದರ ಮಧ್ಯೆ ಸಹ ಇದು ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.
ಕೋವಿಡ್ ಮಧ್ಯೆ ಕೂಡ ಮಲಯಾಳಂ ಬಿಗ್ ಬಾಸ್ ಶೂಟಿಂಗ್ ನಡೆಸಲಾಗುತ್ತಿತ್ತು. ಈಗಾಗಲೇ ಸೆಟ್ನಲ್ಲಿದ್ದ ಆರು ಕಾರ್ಮಿಕರಿಗೆ ಕಳೆದ ವಾರ ಕೋವಿಡ್ ಸೋಂಕು ತಗುಲಿತ್ತು. ಇದೀಗ ಅಧಿಕಾರಿಗಳು ಸೀಜ್ ಮಾಡಿದ್ದು, ಸ್ಥಳದಲ್ಲಿದ್ದ ಕಾರ್ಮಿಕರನ್ನ ಸೆಟ್ನಿಂದ ಸ್ಥಳಾಂತರಿಸಿದ್ದಾರೆ.
ಕೋವಿಡ್ ಸೋಂಕು ದೃಢಗೊಂಡಿದ್ದರ ಮಧ್ಯೆ ಕೂಡ ಮಲಯಾಳಂ ಬಿಗ್ಬಾಸ್ ಮುಂದುವರೆಯಲಿದೆ ಎಂದು ಚಾನೆಲ್ ಹೇಳಿಕೊಂಡಿತ್ತು. ಇದರ ಮಧ್ಯೆ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ. ಇದನ್ನ ನಟ ಮೋಹನ್ಲಾಲ್ ನಡೆಸಿಕೊಡುತ್ತಿದ್ದರು. 14 ಸ್ಪರ್ಧಿಗಳ ಪೈಕಿ ಸದ್ಯ ಮನೆಯಲ್ಲಿ 8 ಅಭ್ಯರ್ಥಿಗಳು ಉಳಿದುಕೊಂಡಿದ್ದರು.