ಇಂದು ಬಾಲಿವುಡ್ ನಟಿ ಮಲೈಕಾ ಅರೋರಾ 47ನೇ ವಸಂತಕ್ಕೆ ಕಾಲಿಟ್ಟಿದ್ದು, ದೇಶಾದ್ಯಂತ ಅಭಿಮಾನಿಗಳಿಂದ ಅವರಿಗೆ ಶುಭಾಶಯಗಳು ಹರಿದುಬರುತ್ತಿವೆ. ಹುಟ್ಟುಹಬ್ಬಕ್ಕೆ ಬಾಲಿವುಡ್ ನಟ, ಹಾಗೂ ಮಲೈಕಾರ ಪ್ರಿಯಕರ ಎನ್ನಲಾದ ಅರ್ಜುನ್ ಕಪೂರ್ ಕೂಡ ವಿಶೇಷ ರೀತಿಯಲ್ಲಿ ವಿಶ್ ಮಾಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಮಲೈಕಾ ನೃತ್ಯದ ವಿಡಿಯೋ ಹಾಕಿರುವ ಅರ್ಜುನ್ ಕಪೂರ್, 'ಹ್ಯಾಪಿ ಬರ್ತ್ ಡೇ ಫೂಲ್' ಎಂದಿದ್ದಾರೆ. ಅರ್ಜುನ್ ಹಾಕಿರುವ ಈ ಪೋಸ್ಟ್ ಅನ್ನು ಮಲೈಕಾ ಅರೋರ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಮಾತುಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿವೆ. ಇದಕ್ಕೆ ಇಂಬು ನೀಡುವಂತೆ ಲಾಕ್ಡೌನ್ ನಂತ್ರ ಈ ಜೋಡಿ ಜೊತೆಯಲ್ಲೇ ಡಿನ್ನರ್, ಡೇಟಿಂಗ್ ಮಾಡುತ್ತಿದ್ದುದು ಗುಟ್ಟಾಗಿ ಉಳಿದಿಲ್ಲ.
ಈ ಹಿಂದೆ ಇವರಿಬ್ಬರಿಗೂ ಕೊರೊನಾ ಸೋಂಕು ತಗುಲಿದ್ದು, ಸದ್ಯ ಇಬ್ಬರೂ ಗುಣಮುಖರಾಗಿದ್ದಾರೆ. ಅಲ್ಲದೇ ಅರ್ಜುನ್ ಕಪೂರ್ ಸಿನಿಮಾ ಶೂಟಿಂಗ್ಗೆ ಮರಳಿದ್ದಾರೆ.