ಪ್ರಸ್ತುತ ರಿಯಾಲಿಟಿ ಟೆಲಿವಿಷನ್ ಶೋ ಸೂಪರ್ ಮಾಡೆಲ್ ಆಫ್ ದಿ ಇಯರ್ ಸೀಸನ್-2 ಚಿತ್ರೀಕರಣದಲ್ಲಿರುವ ಮಲೈಕಾ ಅರೋರಾ, ಒಂದು ಸಂಚಿಕೆಯ ಚಿತ್ರೀಕರಣಕ್ಕಾಗಿ ಬೆರಗುಗೊಳಿಸುವ ವರ್ಣವೈವಿಧ್ಯದ ಮ್ಯಾಕ್ಸಿ ಗೌನ್ ಧರಿಸಿದ್ದರು. ಮೆಟಾಲಿಕ್ ಗೌನ್‌ನಲ್ಲಿ ಮಲೈಕಾ ಸಖತ್ ಹಾಟ್ ಆಗಿ ಕಾಣುತ್ತಿದ್ದಾರೆ.
- " class="align-text-top noRightClick twitterSection" data="
">
ಮಲೈಕಾ ಅರೋರಾ ಮ್ಯಾಕ್ಸಿ ಗೌನ್ ಧರಿಸಿರುವ ಅನೇಕ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಪೂರ್ಣ ತೋಳಿನ, ನೆರಿಗೆಯ ಉದ್ದನೆಯ ಉಡುಗೆಗೆ V-ಆಕಾರದ ನೆಕ್ ಕಟ್ ಇದೆ. ಈ ಉಡುಗೆಯ ಬೆಲೆ ₹1.70 ಲಕ್ಷವಾಗಿದೆ.
- " class="align-text-top noRightClick twitterSection" data="
">
ಉಡುಪಿನಲ್ಲಿ ಸಮುದ್ರದ ಹಸಿರು (sea green), ಲ್ಯಾವೆಂಡರ್, ಗುಲಾಬಿ ಮತ್ತು ನೀಲಿ ಬಣ್ಣಗಳಿವೆ. ಪ್ಲೀಟೆಡ್ ಬಟರ್ಫ್ಲೈ ಸ್ಲೀವ್ಸ್ (The Pleated Butterfly Sleeves) ಹೊಂದಿದೆ. ಉಡುಗೆ ಡಿಸೈನರ್ ಜೆಮಿ ಮಾಲೂಫ್ ಈ ತೊಡುಗೆಯನ್ನು ಸಿದ್ಧಪಡಿಸಿದ್ದಾರೆ.
- " class="align-text-top noRightClick twitterSection" data="
">
ಮಲೈಕಾ ತನ್ನ ಉದ್ದನೆಯ ಕೂದಲನ್ನು ಸಡಿಲವಾಗಿ ವಿನ್ಯಾಸಗೊಳಿಸಿದ್ದಾರೆ. ರೋಮಾಂಚಕ ಇಬ್ಬನಿ ಮೇಕಪ್‌ನೊಂದಿಗೆ ಪಡ್ಡೆಹುಡುಗರ ನಿದ್ದೆಗೆಡಿಸುವ ಲುಕ್ ನೀಡಿದ್ದಾರೆ.