ETV Bharat / sitara

ಟಾಲಿವುಡ್​ ಪ್ರಿನ್ಸ್ ಬರ್ತ್​ಡೇ: ಆರ್ಮಿ ಡ್ರೆಸ್​ನಲ್ಲಿ ಮಹೇಶ್ ಮಿಂಚಿಂಗ್ - ಸರಿಲೇರು ನೀಕೆವರು ಟೀಸರ್ ರಿಲೀಸ್

ಮಹೇಶ್ ಬಾಬು ಜೊತೆಗೆ ಈ ಚಿತ್ರದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ, ವಿಜಯಶಾಂತಿ, ಪ್ರಕಾಶ್ ರಾಜ್, ರಮ್ಯ ಕೃಷ್ಣ ಹಾಗೂ ರಾಜೇಂದ್ರ ಪ್ರಸಾದ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ.

ಮಹೇಶ್
author img

By

Published : Aug 9, 2019, 10:54 AM IST

ತೆಲುಗು ಸೂಪರ್​ಸ್ಟಾರ್ ಮಹೇಶ್ ಬಾಬು ಇಂದು 44ನೇ ವಸಂತಕ್ಕೆ ಕಾಲಿಟ್ಟಿದ್ದು ಈ ನಿಟ್ಟಿನಲ್ಲಿ ಪ್ರಿನ್ಸ್ ನಟನೆಯ ಮುಂಬರುವ ಸಿನಿಮಾ 'ಸರಿಲೇರು ನೀಕೆವರು' ಚಿತ್ರತಂಡ ಅಭಿಮಾನಿಗಳಿಗೆ ಟೀಸರ್​ ಗಿಫ್ಟ್​ ನೀಡಿದೆ.

ಆರ್ಮಿ ಆಫೀಸರ್​ ಆಗಿ ಮಹೇಶ್ ಬಾಬು ಕಾಣಿಸಿಕೊಂಡಿದ್ದು ಟೀಸರ್ ನೋಡಿದ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ. 44 ಸೆಕೆಂಡ್​​ಗಳಿರುವ ಟೀಸರ್​​ನಲ್ಲಿ ಮಹೇಶ್ ಬಾಬು ಹೊರತಾಗಿ ಬೇರಾವ ನಟರನ್ನೂ ತೋರಿಸುವ ಪ್ರಯತ್ನ ಮಾಡಿಲ್ಲ. ಈ ಪುಟ್ಟ ಟೀಸರ್​ನಲ್ಲಿ ಟೈಟಲ್​ ಸಾಂಗ್​ ಎರಡು ಸಾಲು ಸಹ ಕೇಳಿಬರುತ್ತದೆ.

ಮಹೇಶ್ ಬಾಬು ಜೊತೆಗೆ ಈ ಚಿತ್ರದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ, ವಿಜಯಶಾಂತಿ, ಪ್ರಕಾಶ್ ರಾಜ್, ರಮ್ಯ ಕೃಷ್ಣ ಹಾಗೂ ರಾಜೇಂದ್ರ ಪ್ರಸಾದ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ.

ಅನಿಲ್ ರವಿಪುಡಿ ಚಿತ್ರವನ್ನು ನಿರ್ದೇಶಿಸಿದ್ದು, ಮಹೇಶ್ ಬಾಬು ತಮ್ಮ ಜಿಎಂಬಿ ಎಂಟರ್​ಟೇನ್ಮೆಂಟ್​ ಬ್ಯಾನರ್ ಮೂಲಕ ನಿರ್ಮಾಣ ಮಾಡಿದ್ದಾರೆ. ಜೊತೆಗೆ ಎಕೆ ಎಂಟರ್​ಟೇನ್ಮೆಂಟ್ ಹಾಗು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್​ ಸಹ ನಿರ್ಮಾಣದಲ್ಲಿ ಕೈಜೋಡಿಸಿದೆ.

ಈ ಚಿತ್ರ ಮುಂದಿನ ಜನವರಿಯಲ್ಲಿ ಸಂಕ್ರಾಂತಿ ಹಬ್ಬಕ್ಕೆ ತೆರೆಗೆ ಬರಲಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.