ಮೇ 9 ರಂದು ವರ್ಲ್ಟ್ವೈಡ್ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಮಹೇಶ್ ಬಾಬು ಅಭಿನಯದ 25ನೇ ಚಿತ್ರ 'ಮಹರ್ಷಿ' ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ವಂಶಿ ಪೈಡಿಪಲ್ಲಿ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
- " class="align-text-top noRightClick twitterSection" data="">
ಅಭಿಮಾನಿಗಳು ತಮ್ಮ ಕುಟುಂಬಸಹಿತ ಥಿಯೇಟರ್ಗೆ ಹೋಗಿ ಸಿನಿಮಾ ನೋಡಿ ಬರುತ್ತಿದ್ದಾರೆ. ರೈತಪರ ಕಾಳಜಿ ಇರುವ ಸಿನಿಮಾವನ್ನು ಎಲ್ಲರೂ ಮೆಚ್ಚಿದ್ದಾರೆ ಕೂಡ. ಈ ಮಧ್ಯೆ 'ಮಹರ್ಷಿ' ಚಿತ್ರತಂಡ ಸಿನಿಮಾ ಮೇಕಿಂಗ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. 2:50 ಸೆಕೆಂಡ್ ಅವಧಿಯ ಈ ವಿಡಿಯೋದಲ್ಲಿ ಹಳ್ಳಿಯೊಂದರಲ್ಲಿ ಸೆಟ್ ಹಾಕುತ್ತಿರುವುದು, ಶೂಟಿಂಗ್ ಆರಂಭಿಸುವ ಮುನ್ನ ಕ್ಯಾಮರಾ ಪೂಜೆ ಮಾಡುತ್ತಿರುವುದು, ನಿರ್ದೇಶಕ ಕಲಾವಿದರಿಗೆ ದೃಶ್ಯಗಳನ್ನು ವಿವರಿಸುತ್ತಿರುವುದು, ಫೈಟಿಂಗ್ ದೃಶ್ಯಗಳ ಚಿತ್ರೀಕರಣ, ವಿದೇಶದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಚಿತ್ರೀಕರಣ, ಮಹೇಶ್ ಬಾಬು ಪತ್ನಿ, ಮಕ್ಕಳು ಎಲ್ಲವನ್ನೂ ಇದರಲ್ಲಿ ನೋಡಬಹುದು.
ವೈಜಯಂತಿ ಮೂವೀಸ್, ಶ್ರೀ ವೆಂಕಟೇಶ್ವರ ಕ್ರಿಯೇಶನ್ಸ್, ಪಿವಿಪಿ ಸಿನಿಮಾ ಬ್ಯಾನರ್ ಅಡಿ ಅಶ್ವಿನಿ ದತ್, ದಿಲ್ರಾಜು, ಪೊಟ್ಲೂರಿ ಬ್ರದರ್ಸ್ ಸೇರಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಕೆ.ಯು. ಮೋಹನನ್ ಛಾಯಾಗ್ರಹಣವಿದೆ. ಮಹೇಶ್ ಬಾಬು ಜೊತೆ ಪೂಜಾ ಹೆಗ್ಡೆ, ಅಲ್ಲರಿ ನರೇಶ್, ಸಾಯಿ ಕುಮಾರ್, ಜಗಪತಿ ಬಾಬು, ಪ್ರಕಾಶ್ ರಾಜ್ ಹಾಗೂ ಇನ್ನಿತರರು ನಟಿಸಿದ್ದಾರೆ.