"ಖನನ" ಚಿತ್ರದಲ್ಲಿ ಗಮನ ಸೆಳೆದಿದ್ದ ನಟ ಆರ್ಯವರ್ಧನ್ " ಈಗ "ಮಾಗಡಿ ರೋಡ್ " ನಲ್ಲಿ ಬಂದು ನಿಂತಿದ್ದಾರೆ. ಅಯ್ಯೋ ಏನಾಯ್ತಪ್ಪ ಆ ನಟನಿಗೆ ಅನ್ಕೊಬೇಡಿ ನಟ ಆರ್ಯವರ್ಧನ್ ಖನನ ಚಿತ್ರದ ನಂತರ ಈಗ " ಮಾಗಡಿ ರೋಡ್" ಎಂಬ ಚಿತ್ರದಲ್ಲಿ ನಟಿಸ್ತಿದ್ದು. ಇಂದು "ಮಾಗಡಿ ರೋಡ್ " ಚಿತ್ರದ ಮುಹೂರ್ತ ನೇರವೇರಿದೆ. ನವರಾತ್ರಿಯ ನಾಲ್ಕನೇ ದಿನವಾದ ಬುಧವಾರ ಜಯನಗರದಲ್ಲಿರುವ ನಿಮಿಷಾಂಬ ಸನ್ನಿಧಿಯಲ್ಲಿ ಚಿತ್ರದ ಮುಹೂರ್ತ ನೇರವೇರಿದ್ದು. ಕಾರ್ಯಕ್ರಮಕ್ಕೆ ಹಿರಿಯ ನಟ ದೊಡ್ಡಣ್ಣ ಆಗಮಿಸಿ ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದ್ರು.
"ಮಾಗಡಿ ರೋಡ್ " ಚಿತ್ರ ಲವ್ ಸ್ಟೋರಿ ಸಿನಿಮಾವಾಗಿದ್ದು, ಚಿತ್ರದಲ್ಲಿ ಲೆಕ್ಚರ್ ಪಾತ್ರ ಪ್ಲೇ ಮಾಡ್ತಿದ್ದಾರೆ. ಇಂದಿನಿಂದಲೇ ಚಿತ್ರದ ಶೂಟಿಂಗ್ ಶುರುವಾಗ್ತಿದೆ. ನನ್ನ ಹಿಂದಿನ ಎರಡು ಚಿತ್ರಗಳಲ್ಲಿ ನನಗೆ ಹಾರೈಸಿದ ರೀತಿ ಈ ಚಿತ್ರಕ್ಕೂ ನಿಮ್ಮ ಆಶಿರ್ವಾದ ಇರಲಿ, ಅಲ್ಲದೆ ಶೀಘ್ರದಲ್ಲೇ " ಮಾಗಡಿ ರೋಡ್ " ಚಿತ್ರದ ಟೀಸರ್ ಲಾಂಚ್ ಮಾಡುವುದಾಗಿ ನಟ ಆರ್ಯವರ್ಧನ್ ಹೇಳಿದ್ದಾರೆ.
ಇನ್ನೂ ಈ ಚಿತ್ರವನ್ನು ಬಾಷಾ ಜಗದೀಶ್ ನಿರ್ಮಾಣ ಮಾಡುವುದರ ಜೊತೆ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡ್ತಿದ್ದಾರೆ. ಇದು ಬಾಷಾ ಜಗದೀಶ್ ನಿರ್ದೇಶನ ಮೊದಲ ಚಿತ್ರವಾಗಿದ್ದು. ಲವ್ ಸ್ಟೋರಿ ಕಮ್ ಆಕ್ಷನ್ ಎರಡರ ಮಿಶ್ರಣದಲ್ಲಿದೆ. ನಿರ್ದೇಶನದಲ್ಲಿ ನನಗೆ ಅನುಭವವಿಲ್ಲ. ಆದರೂ ಈ ಚಿತ್ರವನ್ನು ಚೆನ್ನಾಗಿ ಮಾಡ್ತಿನಿ. ಅಲ್ಲದೇ ಈ ಚಿತ್ರದ ಮೂಲಕ ಗೆದ್ದೇ ಗೆದ್ದೆ ಗೆಲ್ತಿನಿ ಎಂದು ನಿರ್ದೇಶಕ ಬಾಷಾ ಜಗದೀಶ್ ಭರವಸೆಯ ಮಾತುಗಳನಾಡಿದ್ರು. ಇನ್ನೂ ಈ ಚಿತ್ರದಲ್ಲಿ ನವ್ಯ ನಾಯಕಿಯಾಗಿ ನಟಿಸುತ್ತಿದ್ದು, ಚಿತ್ರದಲ್ಲಿ ಕಾಲೇಜು ಹುಡುಗಿ ಪಾತ್ರದಲ್ಲಿ ನವ್ಯ ಕಾಣಿಸ್ತಿದ್ದು, ಇಂದಿನಿಂದ ಬೆಂಗಳೂರಿನಲ್ಲಿ ಶೂಟಿಂಗ್ ಶುರುವಾಗಿದ್ದು ಶೀಘ್ರದಲ್ಲೇ ಚಿತ್ರದ ಟೀಸರ್ ಲಾಂಚ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡು ಅಖಾಡಕ್ಕೆ ಇಳಿದಿದ್ದಾರೆ.