ETV Bharat / sitara

ಲಕ್ಷ್ಮಿ ರೈ ಅಭಿನಯದ 'ಝಾನ್ಸಿ' ಚಿತ್ರದ ಆಡಿಯೋ ಬಿಡುಗಡೆ - Umesh Bankar

ರಾಜೇಶ್ ಕುಮಾರ್ ನಿರ್ಮಿಸಿ ಗುರುಪ್ರಸಾದ್ ನಿರ್ದೇಶಿಸಿರುವ 'ಝಾನ್ಸಿ' ಚಿತ್ರದ ಆಡಿಯೋ ಬಿಡುಗಡೆಯಾಗಿದೆ. 'ಕಲ್ಪನ' ಚಿತ್ರದ ಬಳಿಕ ನಟಿ ಲಕ್ಷ್ಮಿ ರೈ ಮತ್ತೆ ಕನ್ನಡಕ್ಕೆ ಬಂದಿದ್ದು ಈ ಸಿನಿಮಾದಲ್ಲಿ ಆ್ಯಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.

'ಝಾನ್ಸಿ'
author img

By

Published : Aug 12, 2019, 5:40 PM IST

ನಟಿ ಲಕ್ಷ್ಮಿ ರೈ ಮೊದಲ ಬಾರಿ ಆ್ಯಕ್ಷನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಝಾನ್ಸಿ' ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ​​​ನಗರದ ಖಾಸಗಿ ಹೋಟೆಲ್​​​​​ನಲ್ಲಿ ಏರ್ಪಡಿಸಿದ್ದ ಸಮಾರಂಭಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್​​​​​. ಜೈರಾಜ್, ಉಪಾಧ್ಯಕ್ಷ ಉಮೇಶ್ ಬಣಕಾರ್ ಹಾಗೂ ನಿರ್ಮಾಪಕ ಕೆ. ಮಂಜು ಆಗಮಿಸಿ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಫಿಲ್ಮ್ ಚೇಂಬರ್ ಅಧ್ಯಕ್ಷ ಡಿ.ಆರ್​​​​​. ಜೈರಾಜ್
'ಝಾನ್ಸಿ' ಆಡಿಯೋ ಬಿಡುಗಡೆ ಸಮಾರಂಭ

2012ರಲ್ಲಿ ಬಿಡುಗಡೆಯಾದ 'ಕಲ್ಪನ' ಚಿತ್ರದಲ್ಲಿ ಉಪೇಂದ್ರ ಜೊತೆ ನಟಿಸಿದ ಬಳಿಕ ಲಕ್ಷ್ಮಿ ರೈ ಮತ್ತೆ ಯಾವುದೇ ಕನ್ನಡ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಇದೀಗ 'ಝಾನ್ಸಿ' ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಈ ಚಿತ್ರದಲ್ಲಿ ಐಪಿಎಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿರುವ ಲಕ್ಷ್ಮಿ ರೈ ಜಬರ್ದಸ್ತ್ ಆ್ಯಕ್ಷನ್ ಸೀನ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಚಿತ್ರವನ್ನು 'ಯಾರಿಗೆ ದುಡ್ಡು ಬೇಡ' 'ಕುಸುಮ' 'ಮರ್ಯಾದೆ ರಾಮಣ್ಣ' ಚಿತ್ರಗಳ ನಿರ್ದೇಶಕ ಗುರುಪ್ರಸಾದ್ ನಿರ್ದೇಶಿಸಿದ್ದಾರೆ. ಈ ಸಿನಿಮಾ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಭೂಗಳ್ಳತನ, ಮಾದಕ ವಸ್ತುಗಳ ಸುತ್ತ ಸುತ್ತುವ ಕಥೆಯಾಗಿದೆ ಎಂದು ನಿರ್ದೇಶಕ ತಿಳಿಸಿದ್ದಾರೆ.

lakshmi rai
ಲಕ್ಷ್ಮಿ ರೈ

ಚಿತ್ರದಲ್ಲಿ ಐದು ಹಾಡುಗಳಿದ್ದು, ಕರುಣೇಶ್ ಸಂಗೀತ ನೀಡಿದ್ದಾರೆ. ಬಾಂಬೆ ಮೂಲದ ರಾಜೇಶ್ ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸೆಪ್ಟೆಂಬರ್​​ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ನಿರ್ದೇಶಕ ಗುರುಪ್ರಸಾದ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇನ್ನು ಮಳೆಯ ಅಬ್ಬರಕ್ಕೆ ಕೊಚ್ಚಿ ಹೋಗಿರುವ ಉತ್ತರ ಕರ್ನಾಟಕಕ್ಕೆ 'ಝಾನ್ಸಿ' ತಂಡ ನೆರವಾಗುವುದಾಗಿ ಗುರುಪ್ರಸಾದ್ ತಿಳಿಸಿದ್ದಾರೆ.

jayraj

Intro:ಬೆಳಗಾವಿ ಹುಡುಗಿ ಲಕ್ಷ್ಮಿ ಪೊಲೀಸ್ ಪಾತ್ರದಲ್ಲಿ ನಟಿಸಿರುವ ಜಾನ್ಸಿ ಚಿತ್ರದ ಆಡಿಯೋ ಬಿಡುಗಡೆ

Body:2012ರ ನಂತರ ಮತ್ತೆ ಏಜೆನ್ಸಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಬಂದ ಬೆಳಗಾವಿ ಬೆಡಗಿ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.