ವಿವಾದಾತ್ಮಕ ನಿರ್ದೇಶಕ ಎಂದೇ ಹೆಸರಾದ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಲಕ್ಷ್ಮೀಸ್ ಎನ್ಟಿಆರ್ ಚಿತ್ರಕ್ಕೆ ಆಂಧ್ರದಲ್ಲಿ ಸದ್ಯಕ್ಕೆ ಬಿಡುಗಡೆಯಾಗುವ ಅದೃಷ್ಟ ಒಲಿದುಬಂದಿಲ್ಲ ಎನ್ನಿಸುತ್ತಿದೆ. ಇಂದು ಚಿತ್ರಬಿಡುಗಡೆಗೆ ದಿನಾಂಕ ನಿಗದಿಯಾಗಿತ್ತು. ಆದರೆ ಇಂದು ರಿಲೀಸ್ ಆಗುವ ಲಕ್ಷಣಗಳು ಕಾಣುತ್ತಿಲ್ಲ.
ಲೋಕಸಭೆ ಚುನಾವಣೆ ಇದ್ದ ಕಾರಣ ನೀತಿ ಸಂಹಿತೆ ಉಲ್ಲಂಘನವಾಗಬಹುದು ಎಂಬ ಉದ್ದೇಶಕ್ಕೆ ಈ ಮುನ್ನ ನಿಗದಿಪಡಿಸಿದ ದಿನಾಂಕದಂದು ಸಿನಿಮಾ ಆಂಧ್ರದಲ್ಲಿ ಬಿಡುಗಡೆಯಾಗಿರಲಿಲ್ಲ. ಈ ಸಂಬಂಧ ಭಾನುವಾರ ಸುದ್ದಿಗೋಷ್ಠಿ ನಡೆಸಲು ಆರ್ಜಿವಿ ವಿಜಯವಾಡಕ್ಕೆ ಹೋದಾಗ ಅವರನ್ನು ವಿಜಯವಾಡ ಪ್ರವೇಶಿಸದಂತೆ ಪೊಲೀಸರು ವಿಮಾನ ನಿಲ್ದಾಣದಲ್ಲೇ ತಡೆಹಿಡಿದು ವಾಪಸ್ ಕಳಿಸಿದ್ದರು. ಇದರ ಬಗ್ಗೆ ವರ್ಮಾ ಟ್ವೀಟ್ ಮಾಡಿ 'ಆಂಧ್ರದಲ್ಲಿ ಪ್ರಜಾಪ್ರಭುತ್ವ ಎಲ್ಲಿದೆ, ಸತ್ಯದ ಬೆನ್ನಿಗೆ ಚೂರಿ ಹಾಕಲಾಗುತ್ತಿದೆ' ಎಂದು ಹೇಳಿದ್ದರು. ಆದರೆ ಇಂದೂ ಕೂಡಾ ಚಿತ್ರ ಬಿಡುಗಡೆಯಾಗುತ್ತಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
-
Sorry to inform that the press meet at 4 pm is cancelled because the police stopped us and have barred my entry into Vijaywada and forcibly sending me back to hyderabad ..Hey @ncbn WHERE IS DEMOCRACY ? WHY IS TRUTH BEING BACK STABBED? https://t.co/cVq91nSfVc
— Ram Gopal Varma (@RGVzoomin) April 28, 2019 " class="align-text-top noRightClick twitterSection" data="
">Sorry to inform that the press meet at 4 pm is cancelled because the police stopped us and have barred my entry into Vijaywada and forcibly sending me back to hyderabad ..Hey @ncbn WHERE IS DEMOCRACY ? WHY IS TRUTH BEING BACK STABBED? https://t.co/cVq91nSfVc
— Ram Gopal Varma (@RGVzoomin) April 28, 2019Sorry to inform that the press meet at 4 pm is cancelled because the police stopped us and have barred my entry into Vijaywada and forcibly sending me back to hyderabad ..Hey @ncbn WHERE IS DEMOCRACY ? WHY IS TRUTH BEING BACK STABBED? https://t.co/cVq91nSfVc
— Ram Gopal Varma (@RGVzoomin) April 28, 2019
ಲಕ್ಷ್ಮೀಸ್ ಎನ್ಟಿಆರ್, ನಟ ಹಾಗೂ ಆಂಧ್ರ ಸಿಎಂ ಆಗಿದ್ದ ಎನ್.ಟಿ. ರಾಮರಾವ್ ಅವರ ಜೀವನಚರಿತ್ರೆಯಾಗಿದೆ. ಚಿತ್ರದಲ್ಲಿ ಕನ್ನಡತಿ ಯಜ್ಞಾಶೆಟ್ಟಿ ಎನ್ಟಿಆರ್ ಪತ್ನಿ ಲಕ್ಷ್ಮಿ ಪಾರ್ವತಿ ಪಾತ್ರ ಮಾಡಿದ್ದಾರೆ. ಅಗಸ್ತ್ಯ ಮಂಜು ಚಿತ್ರದ ಸಹನಿರ್ದೇಶಕರಾಗಿದ್ದಾರೆ. ಚಿತ್ರದ ಕೆಲವೊಂದು ಸನ್ನಿವೇಶಗಳು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರ ವಿರುದ್ಧವಾಗಿದ್ದು ಆರ್ಜಿವಿ ಆಂಧ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವರ ಮುಂದಿನ ನಡೆ ಏನು ಎಂಬ ಕುತೂಹಲ ಎಲ್ಲರಿಗೂ ಕಾಡುತ್ತಿದೆ.