ಟಾಲಿವುಡ್ ಸ್ಟಾರ್ ನಟ ಮೋಹನ್ ಬಾಬು ಪುತ್ರಿ ಲಕ್ಷ್ಮಿ ಮಂಚು ತೆಲುಗು ಮಾತನಾಡುವ ಶೈಲಿಗೆ ಫೇಮಸ್. ತೆಲುಗು ಹುಡುಗಿಯಾದರೂ ನನಗೆ ತೆಲುಗು ಅಷ್ಟಾಗಿ ಬರುವುದಿಲ್ಲ ಎಂದು ಧೈರ್ಯವಾಗೇ ಹೇಳುತ್ತಾರೆ ಲಕ್ಷ್ಮಿ.
-
His telugu is better than mine 🤟😅so heart warming to see our language so loved. https://t.co/x2ZM1ZofcD
— Lakshmi Manchu (@LakshmiManchu) July 13, 2019 " class="align-text-top noRightClick twitterSection" data="
">His telugu is better than mine 🤟😅so heart warming to see our language so loved. https://t.co/x2ZM1ZofcD
— Lakshmi Manchu (@LakshmiManchu) July 13, 2019His telugu is better than mine 🤟😅so heart warming to see our language so loved. https://t.co/x2ZM1ZofcD
— Lakshmi Manchu (@LakshmiManchu) July 13, 2019
ಈ ವಿಚಾರವಾಗೇ ಲಕ್ಷ್ಮಿ ಸಾಕಷ್ಟು ಬಾರಿ ಟ್ರೋಲ್ಗೆ ಒಳಗಾಗಿದ್ದಾರೆ. ಅಮೆರಿಕದ ಮೊಂಟಾನದ ಐಸಾಕ್ ರಿಚರ್ಡ್ ಎಂಬ ವ್ಯಕ್ತಿಯೊಬ್ಬ ತೆಲುಗು ಮಾತನಾಡುವ ವಿಡಿಯೋವೊಂದು ಇತ್ತೀಚೆಗೆ ವೈರಲ್ ಆಗಿತ್ತು. 2016 ರಲ್ಲಿ ಆಂಧ್ರಪದೇಶಕ್ಕೆ ಕೆಲವೊಂದರ ನಿಮಿತ್ತ ಬಂದಿದ್ದ ರಿಚರ್ಡ್ ಕೇವಲ 2 ವರ್ಷಗಳಲ್ಲಿ ತೆಲುಗು ಕಲಿತಿದ್ದಾರೆ. ನನಗೆ ತೆಲುಗು ಎಂದರೆ ಬಹಳ ಇಷ್ಟ ಎಂದು ವಿಡಿಯೋದಲ್ಲಿ ಮಾತನಾಡಿದ್ದಾರೆ. ಈ ವಿಡಿಯೋವನ್ನು ದಿನೇಶ್ ಅಕುಲ ಎಂಬ ಪತ್ರಕರ್ತರೊಬ್ಬರು ತಮ್ಮ ಟ್ವಿಟ್ಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ರಿಚರ್ಡ್ ತೆಲುಗು ಮಾತನಾಡುವ ವಿಡಿಯೋ ನೋಡಿದ ಲಕ್ಷ್ಮಿ ಮಂಚು ನಿಜಕ್ಕೂ ಶಾಕ್ ಆಗಿದ್ದಾರೆ. 'ಆತ ನನಗಿಂತಲೂ ಚೆನ್ನಾಗಿ ತೆಲುಗು ಮಾತನಾಡುತ್ತಾನೆ. ನಮ್ಮ ಭಾಷೆಯನ್ನು ಇಷ್ಟಪಡುವವರನ್ನು ಕಂಡರೆ ಬಹಳ ಸಂತೋಷವಾಗುತ್ತದೆ' ಎಂದು ಲಕ್ಷ್ಮಿ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ತೆಲುಗಿನ 'ಮೇಮು ಸಹಿತಂ' , 'ಲಕ್ಷ್ಮಿ ಟಾಕ್ ಶೋ' , 'ಮೀ ಕೋಸಂ' , 'ಮಹರ್ಷಿ' ಹಾಗೂ ಇನ್ನಿತರ ಖ್ಯಾತ ಕಾರ್ಯಕ್ರಮಗಳನ್ನು ಲಕ್ಷ್ಮಿ ಅವರು ನಿರೂಪಣೆ ಮಾಡಿದ್ದಾರೆ.