ಬಹುಭಾಷಾ ನಟಿ ಕೃತಿ ಕರಬಂಧ ತನ್ನ ಬಾಯ್‌ಫ್ರೆಂಡ್ ಹುಟ್ಟುಹಬ್ಬಕ್ಕೆ ರೊಮ್ಯಾಂಟಿಕ್ ಗಿಫ್ಟ್ ಕೊಟ್ಟಿದ್ದಾರೆ. ಪುಲ್ಕಿತ್ ಸಮರ್ಥ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು ಅವರ ಕೆನ್ನೆಗೆ ಕೃತಿ ಮುತ್ತಿಕ್ಕಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇನ್ಸ್ಟಾಗ್ರಾಮ್ ಗ್ರಾಮ್ನಲ್ಲಿ ತನ್ನ ಗೆಳೆಯನಿಗೆ ವಿಶ್ ಮಾಡಿರುವ ಕೃತಿ, ''ಹ್ಯಾಪಿ ಬರ್ತಡೇ ಬೇಬಿ, ಐ ಲವ್ ಯೂ'' ಎಂದು ಕ್ಯಾಪ್ಷನ್ ಹಾಕಿದ್ದಾರೆ. ಅದ್ರ ಜೊತೆ ಒಂದು ರೊಮ್ಯಾಂಟಿಗ್ ಗಿಫ್ಟ್ ನೀಡಿದ್ದಾರೆ.
ಫೋಟೋದಲ್ಲಿ ನಟ ಪುಲ್ಕಿತ್ ಸಮರ್ಥ್ ಕೆನ್ನೆಗೆ ಕೃತಿ ಕರಬಂಧ ಮುತ್ತಿಕ್ಕಿದ್ದಾರೆ. ''ನೀನು ಶತಕೋಟಿಯಲ್ಲಿ ಒಬ್ಬ, ನಿನ್ನಂತೆ ಯಾರೂ ಇಲ್ಲ ಎಂದು ಬರೆದಿದ್ದಾರೆ.
ಇನ್ನು ಕೃತಿ ಕರಬಂಧ - ಪುಲ್ಕಿತ್ ಸಮರ್ಥ್ ಕಳೆದ ಒಂದೂವರೆ ವರ್ಷದಿಂದ ಲವ್ನಲ್ಲಿ ಇದ್ದಾರೆ. ಅಲ್ಲದೇ 2018ರಲ್ಲಿ ರಿಲೀಸ್ ಆದ 'ವೀರ್ ಕಿ ವೆಡ್ಡಿಂಗ್' ಮತ್ತು 2019 ರ 'ಪಾಗಲ್‌ಪಂತಿ' ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.
- " class="align-text-top noRightClick twitterSection" data="
">