ಲಾಸ್ ಏಂಜಲೀಸ್: ಹಾಲಿವುಡ್ ನಟಿ ಕ್ರಿಸ್ಟೆನ್ ವಿಗ್, ತನ್ನ ಅವಳಿ ಮಕ್ಕಳ ಹೆಸರನ್ನು ವಿಭಿನ್ನ ರೀತಿಯಲ್ಲಿ ರಿವೀಲ್ ಮಾಡಿದ್ದಾರೆ. ತನ್ನ ಇತ್ತೀಚೆಗಿನ ಸಿನಿಮಾದ ಟೈಟಲ್ ಕಾರ್ಡಿನಲ್ಲಿ ಕ್ರಿಸ್ಟೆನ್, ಮಕ್ಕಳ ಹೆಸರನ್ನು ಬಹಿರಂಗಪಡಿಸಿದ್ದಾರೆ. ಕ್ರಿಸ್ಟಿನ್ ಹಾಗೂ ಪತಿ ಅವಿ ರೋಹ್ಮನ್ ಇದುವರೆಗೂ ಮಕ್ಕಳ ಖಾಸಗಿತನವನ್ನು ಕಾಪಾಡಿದ್ದರು. ಮಕ್ಕಳ ವಿಡಿಯೋ,ಫೋಟೋ ಅಥವಾ ಇನ್ನಿತರ ಯಾವುದೇ ವಿಚಾರಗಳನ್ನು ಸಾರ್ವಜನಿಕವಾಗಿ ಹೇಳಿಕೊಂಡಿರಲಿಲ್ಲ.
ಇದನ್ನೂ ಓದಿ: 'ತಂದೆಯ ಆಟೋದಲ್ಲಿ ಬಂದ ಮಿಸ್ ಇಂಡಿಯಾ ರನ್ ಅಪ್ -2020 ಮಾನ್ಯ'
ಅಭಿಮಾನಿಗಳು ಮಾತ್ರ ತಮ್ಮ ಮೆಚ್ಚಿನ ತಾರಾ ದಂಪತಿ ಹಾಗೂ ಅವರ ಮಕ್ಕಳ ಬಗ್ಗೆ ತಿಳಿದುಕೊಳ್ಳಲು ಬಹಳ ಕಾತರದಿಂದ ಕಾಯುತ್ತಿದ್ದರು. ಆದರೆ ಇದೀಗ ಮಕ್ಕಳ ಹೆಸರು ಕೇಳಿ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ತಮ್ಮ ಹೊಸ ಚಿತ್ರದ ಟೈಟಲ್ ಕಾರ್ಡಿನಲ್ಲಿ ತಮ್ಮ ಪತಿ, ನಟ ಅವಿ ರೋಹ್ಮನ್ಗೆ ಧನ್ಯವಾದ ಅರ್ಪಿಸಿದ್ದಾರೆ. ಜೊತೆಗೆ ಲುನಾ ಹಾಗೂ ಶಿಲ್ಹೊ ಎಂಬ ಎರಡು ಹೊಸ ಹೆಸರನ್ನು ಕೂಡಾ ಪತಿ ಹೆಸರಿನೊಂದಿಗೆ ಸೇರಿಸಿದ್ದಾರೆ. ಈ ಹೊಸ ಹೆಸರುಗಳನ್ನು ನೋಡಿದ ಕೂಡಾ ಇದು ಅವಿ ರೋಹ್ಮನ್ ಹಾಗೂ ಕ್ರಿಸ್ಟಿನ್ ಅವಳಿ ಮಕ್ಕಳ ಹೆಸರು ಎಂದು ಅಭಿಮಾನಿಗಳು ಕಂಡುಹಿಡಿದಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಆದರೆ ಬಾಡಿಗೆ ತಾಯಿ ಮೂಲಕ ಪಡೆದ ಮಕ್ಕಳಾಗಿವೆ. ಕಳೆದ ಜೂನ್ನಲ್ಲಿ ಅವಿ ರೋಹ್ಮನ್ ಹಾಗೂ ಕ್ರಿಸ್ಟಿನ್ ತಾವು ಪೋಷಕರಾಗುತ್ತಿರುವ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.