ETV Bharat / sitara

ಕಿಚ್ಚನ 'ಕೋಟಿಗೊಬ್ಬ-3' ರಾಜ್ಯಾದ್ಯಂತ ರಿಲೀಸ್: ಸಿನಿಪ್ರೇಮಿಗಳ ದಿಲ್‌ಖುಷ್‌ - ಸ್ಯಾಂಡಲ್​​ವುಡ್ ಸುದ್ದಿ

ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಚಿತ್ರ ಕೋಟಿಗೊಬ್ಬ-3 ಇಂದು ಬಿಡುಗಡೆಯಾಗಿ ಭರ್ಜರಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

kotigobba-3-released-all-over-state
ರಾಜ್ಯಾದ್ಯಂತ ಕೋಟಿಗೊಬ್ಬ-3 ಅಬ್ಬರ
author img

By

Published : Oct 15, 2021, 12:47 PM IST

Updated : Oct 15, 2021, 1:02 PM IST

ನಟ ಸುದೀಪ್​ ಅಭಿನಯದ ಬಹುನಿರೀಕ್ಷೆಯ ಚಿತ್ರ 'ಕೋಟಿಗೊಬ್ಬ-3' ಇಂದು ಬಿಡುಗಡೆಯಾಗಿದೆ. ಬೆಂಗಳೂರಿನ ಮುಖ್ಯ ಚಿತ್ರಮಂದಿರ ಭೂಮಿಕಾದಲ್ಲಿ ಚಿತ್ರ ನೋಡಲು ಅಭಿಮಾನಿಗಳ ದಂಡೇ ನೆರೆದಿತ್ತು. ಮಾರ್ನಿಂಗ್ ಶೋ ಟಿಕೆಟ್​​ಗಳು ಸೋಲ್ಡ್​​ಔಟ್ ಆಗಿವೆ. ಚಿತ್ರ ಮಂದಿರದ ಮುಂಭಾಗ ಸುದೀಪ್ ಕಟೌಟ್​​​​​ಗೆ ಹೂವಿನ ಹಾರ ಹಾಕಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದರು.

ನಿನ್ನೆ ಬಿಡುಗಡೆ ಆಗಬೇಕಿದ್ದ ಈ ಚಿತ್ರ ತಾಂತ್ರಿಕ ಕಾರಣದಿಂದಾಗಿ ಇಂದು ತೆರೆಕಾಣುತ್ತಿದೆ. ಚಿತ್ರದಲ್ಲಿ ಸುದೀಪ್ ವಿಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದು, ನಾಯಕಿಯಾಗಿ ಮಡೊನ್ನಾ ಸೆಬಾಸ್ಟಿಯನ್ ನಟಿಸಿದ್ದಾರೆ. ಇನ್ನುಳಿದಂತೆ ರವಿಶಂಕರ್, ಅಭಿರಾಮ್, ಶ್ರದ್ಧಾ ದಾಸ್ ಸೇರಿ ಹಲವರು ಚಿತ್ರದಲ್ಲಿದ್ದಾರೆ. ಶಿವಕಾರ್ತಿಕ್ ಚಿತ್ರ ನಿರ್ದೇಶನ ಮಾಡಿದ್ದು, ಸೂರಪ್ಪ ಬಾಬು ನಿರ್ಮಿಸಿದ್ದಾರೆ.

ಬೆಂಗಳೂರಿನ ಭೂಮಿಕಾ ಚಿತ್ರಮಂದಿರ

ಕೊಪ್ಪಳದಲ್ಲಿ ಕೋಟಿಗೊಬ್ಬನ ಅಬ್ಬರ ಜೋರಾಗಿದೆ. ನಗರದ ಎರಡು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಿದ್ದು, ಅಭಿಮಾನಿಗಳು ಮೊದಲ ಶೋ ನೋಡಲು ಜಮಾಯಿಸಿದ್ದರು. ಶಾರದಾ ಹಾಗೂ ಶಿವ ಚಿತ್ರಮಂದಿರದ ಎದುರು ಬೆಳಗ್ಗೆಯಿಂದಲೇ ಅಭಿಮಾನಿಗಳು ಜಮಾಯಿಸಿದ್ದರು. ಸುದೀಪ್ ಕಟೌಟ್​​​ಗೆ ಕುಂಬಳಕಾಯಿ, ತೆಂಗಿನಕಾಯಿ ಒಡೆದು, ಪಟಾಕಿ ಸಿಡಿಸಿ, ಹಾಲಿನ ಅಭಿಷೇಕ ಮಾಡಿದ್ದು ಕಂಡುಬಂತು.

ಕೊಪ್ಪಳದಲ್ಲಿ ಕಿಚ್ಚನ ಅಭಿಮಾನಿಗಳ ಸಂಭ್ರಮ

ಶಿವಮೊಗ್ಗದಲ್ಲೂ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬೆಳಗ್ಗೆ 11 ಗಂಟೆಗೆ ನಗರದ ಹೆಚ್​​ಪಿಸಿ ಚಿತ್ರಮಂದಿರದಲ್ಲಿ ಕೋಟಿಗೊಬ್ಬ-3 ತೆರೆಕಂಡಿದ್ದು, ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು. ಇದಕ್ಕೂ ಮೊದಲು ನಗರದ ಮಾಲ್​​ನಲ್ಲಿ ಮೊದಲ ಶೋ ಆರಂಭವಾಗಿತ್ತು. ಅಭಿಮಾನಿಗಳು ಬಿಗ್​ ಸ್ಕ್ರೀನ್​​ನಲ್ಲಿ ನೆಚ್ಚಿನ ನಟನನ್ನು ಕಣ್ತುಂಬಿಕೊಂಡಿದ್ದಾರೆ.

ಶಿವಮೊಗ್ಗದ ಹೆಚ್​​ಪಿಸಿ ಚಿತ್ರಮಂದಿರ

ಚಿತ್ರ ಬಿಡುಗಡೆಯಾಗುತ್ತಿದ್ದಂತೆ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿರುವ ಕಿಚ್ಚ ಸುದೀಪ್, 'ನನ್ನ ಪ್ರೀತಿಸಿದ ಎಲ್ಲರಿಗೂ ಧನ್ಯವಾದಗಳು. ಮುಂಜಾನೆಯ ಶೋ ಆರಂಭಗೊಂಡ ಕುರಿತ ವಿಡಿಯೋಗಳನ್ನು ನೋಡಿದ್ದೇನೆ. ಥಿಯೇಟರ್‌ಗಳಲ್ಲಿನ ಸಂಭ್ರಮವನ್ನು ನೋಡುವುದೇ ಒಂದು ಆನಂದ. ನೀವೆಲ್ಲರೂ ನಮ್ಮ ಪರವಾಗಿ ನಿಂತಿದ್ದೀರಿ ಮತ್ತು ಅದು ಅಮೂಲ್ಯವಾದುದು' ಎಂದಿದ್ದಾರೆ.

  • #Kotigobba3inTheaters
    Thank you all for the luv ....

    Been seeing the videos uploaded from the early morn shows,,, its a bliss to see the excitement at the theaters.

    You all have stood by us,, and it's priceless.

    🤗🙏🏼❤ pic.twitter.com/a3tBWUXSeO

    — Kichcha Sudeepa (@KicchaSudeep) October 15, 2021 " class="align-text-top noRightClick twitterSection" data=" ">

Last Updated : Oct 15, 2021, 1:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.