ETV Bharat / sitara

'ಕೋಟಿಗೊಬ್ಬ'ನ ಕೋಟಿ ಕೋಟಿ ಕಲೆಕ್ಷನ್​.. ವಿಘ್ನ-ವಿವಾದದ ನಡುವೆಯೂ ಬಾಕ್ಸ್​ ಆಫೀಸ್​ನಲ್ಲಿ 'ಬಾದ್​ಷಾ' ಹವಾ!! - Kotigobba 3 Cinema news

ಇಂದು ತೆಲುಗಿನಲ್ಲಿ ಕಿಚ್ಚ ಸುದೀಪ್​ ಅಭಿನಯದ 'K3 ಕೋಟಿಕೊಕ್ಕುಡು' ಸಿನಿಮಾದ ಟ್ರೇಲರ್​ ಇಂದು ಸಂಜತೆ 5 ಗಂಟೆಗೆ ಬಿಡುಗಡೆಯಾಗಲಿದೆ..

'ಕೋಟಿಗೊಬ್ಬ'ನ ಕೋಟಿ ಕೋಟಿ ಕಲೆಕ್ಷನ್
'ಕೋಟಿಗೊಬ್ಬ'ನ ಕೋಟಿ ಕೋಟಿ ಕಲೆಕ್ಷನ್
author img

By

Published : Oct 19, 2021, 4:36 PM IST

Updated : Oct 19, 2021, 4:55 PM IST

ಸೂರಪ್ಪ ಬಾಬು ನಿರ್ಮಿಸಿರುವ ಹಾಗೂ ಕಿಚ್ಚ ಸುದೀಪ್ ಅಭಿನಯದ ಸಿನಿಮಾ ಕೋಟಿಗೊಬ್ಬ-3 ರಿಲೀಸ್​ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕೋಟಿಗೊಬ್ಬ-3 ಸಿನಿಮಾ ಅಕ್ಟೋಬರ್​ 14 ರಂದು ತೆರೆಗೆ ಬರಬೇಕಿತ್ತು. ಇದಕ್ಕೆ ನಾನಾ ಅಡ್ಡಿಗಳು ಎದುರಾದವು.

ಹೀಗಾಗಿ, ಅಕ್ಟೋಬರ್​ 15ರಂದು ಸಿನಿಮಾ ತೆರೆಗೆ ಬಂತು. ರಿಲೀಸ್ ವಿವಾದದಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೇ ಸದ್ದು ಮಾಡಿದ ಕೋಟಿಗೊಬ್ಬ-3 ಬಾಕ್ಸ್‌ ಆಫೀಸ್‌ ಲೂಟಿ ಮಾಡಿದೆ.

ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ ಹಬ್ಬದ ಸೀಸನ್​ ಆಗಿದ್ದ ಕಾರಣಕ್ಕೆ ಜನರು ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡುತ್ತಿದ್ದಾರೆ. ಎಲ್ಲ ಸಮಸ್ಯೆಗಳು ಹಾಗೂ ಸವಾಲುಗಳನ್ನು ಎದುರಿಸಿ ಕೊನೆಗೂ ಪ್ರದರ್ಶನ ಕಾಣುತ್ತಿರುವ ಕೋಟಿಗೊಬ್ಬ-3 ಸಿನಿಮಾದ ಬಾಕ್ಸ್‌ ಆಫೀಸ್​ ಕಲೆಕ್ಷನ್​ ಭರ್ಜರಿಯಾಗಿದೆ. ಮೊದಲ ದಿನ ಕೋಟಿಗೊಬ್ಬ-3 ಗಳಿಕೆ ಮಾಡಿದ್ದು ಬರೋಬ್ಬರಿ 12.5 ಕೋಟಿ ರೂಪಾಯಿ ಎನ್ನಲಾಗಿದೆ.

ಶನಿವಾರ ಹಾಗೂ ಭಾನುವಾರ ಸಹ ಸಿನಿಮಾ ಒಳ್ಳೆಯ ಗಳಿಕೆ ಮಾಡಿದೆ. ಮೊದಲ ವಾರಾಂತ್ಯದಲ್ಲಿ ಕೋಟಿಗೊಬ್ಬ-3 ಒಟ್ಟು ₹25 ಕೋಟಿ ಹಣವನ್ನು ಕಮಾಯಿ ಮಾಡಿದೆ ಎನ್ನಲಾಗುತ್ತಿದೆ. ಸಿನಿಮಾ ಮೊದಲ ವಾರಾಂತ್ಯದವರೆಗೆ ಅಂದಾಜು ₹40 ಕೋಟಿ ಗಳಿಸಿದೆ ಎಂದು ಹೇಳಲಾಗುತ್ತಿದೆ. ಸಿನಿಮಾ ಗಳಿಸಿರುವ ಮೊತ್ತದ ಪೋಸ್ಟರ್​ಗಳನ್ನು ಕಿಚ್ಚ ಸುದೀಪ್​ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.

ಕೋಟಿಕೊಕ್ಕುಡು ಟ್ರೇಲರ್​ ರಿಲೀಸ್ : ಇಂದು ತೆಲುಗಿನಲ್ಲಿ ಕಿಚ್ಚ ಸುದೀಪ್​ ಅಭಿನಯದ 'K3 ಕೋಟಿಕೊಕ್ಕುಡು' ಸಿನಿಮಾದ ಟ್ರೇಲರ್​ ಇಂದು ಸಂಜತೆ 5 ಗಂಟೆಗೆ ಬಿಡುಗಡೆಯಾಗಲಿದೆ.

ಓದಿ: ಏಕಕಾಲದಲ್ಲಿ 2 ಭಾಷೆ, 3 ರಾಜ್ಯಗಳ ಚಿತ್ರಮಂದಿರಗಳಲ್ಲಿ 'ಭಜರಂಗಿ 2' ರಿಲೀಸ್

Last Updated : Oct 19, 2021, 4:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.