ಕನ್ನಡ ಸಿನಿಮಾಗಳಿಗೆ ಸಾಕಷ್ಟು ಪ್ರಚಾರ ಮಾಡಿದರೂ ಉತ್ತಮ ಪ್ರದರ್ಶನ ಕಾಣದೆ ಇರುವ ಇಂದಿನ ದಿನಗಳಲ್ಲಿ ಇದುವರೆಗೂ ಕೇಳದೆ ಇದ್ದ 'ಕೂಗು' ಹೆಸರಿನ ಕನ್ನಡ ಸಿನಿಮಾವೊಂದು ಇದೇ ಶುಕ್ರವಾರ ಬಿಡುಗಡೆ ಆಗುತ್ತಿದೆ.
![Koogu](https://etvbharatimages.akamaized.net/etvbharat/prod-images/6362028_koogu1.jpg)
ಭಾಸ್ಕರ್ ಫಿಲ್ಮ್ಸ್ ಬ್ಯಾನರ್ ಅಡಿ, ಡಾ. ಪದ್ಮನಾಭನ್ .ಕೆ ನಿರ್ಮಾಣ ಮಾಡಿರುವ ಸಿನಿಮಾವನ್ನು ರೈತರ ಮೇಲಿನ ಕಾಳಜಿಯಿಂದ ತಯಾರಿಸಲಾಗಿದೆ. ದೇಶಕ್ಕೆ ಅನ್ನ ಕೊಡುವವರು ರೈತ, ಆದರೆ ಆತನ ಬದುಕು ನೆಮ್ಮದಿಯಿಂದ ಕೂಡಿಲ್ಲ. ಈ ವಿಚಾರಗಳನ್ನು ಅರಿತು ಆರ್. ರಂಗನಾಥ್ ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
![Koogu](https://etvbharatimages.akamaized.net/etvbharat/prod-images/koogu-31583808268108-33_1003email_1583808279_390.jpg)
ಚಿತ್ರಕ್ಕೆ ಎ.ಟಿ. ರವೀಶ್ ಸಂಗೀತ, ಚಂದ್ರಣ್ಣ ಛಾಯಾಗ್ರಹಣ, ಸೋಸಲೆ ಗಂಗಾಧರ್ ಸಂಭಾಷಣೆ ಹಾಗೂ ಗೀತೆಗಳನ್ನು ಬರೆದಿದ್ದಾರೆ. ಶ್ರೀನಿವಾಸ್. ಪಿ ಬಾಬು ಸಂಕಲನ, ಜಾಲಿ ಬಾಸ್ಟಿನ್ ಹಾಗೂ ವೇಲು ಸಾಹಸ ಒದಗಿಸಿದ್ದಾರೆ. ಇರ್ಮಾನ್ ಸರ್ದಾರಿಯ ನೃತ್ಯ ನಿರ್ದೇಶನ ಮಾಡಿದ್ದಾರೆ. ರಮೇಶ್ ಅವರ 'ಕನಸಿನ ಭಾರತ' ಈ ಚಿತ್ರಕ್ಕೆ ಕಥೆ ಆಗಿದೆ, ಡಾ. ಪದ್ಮನಾಭನ್, ಸಂಗೀತ, ವರ್ಷ, ದತ್ತ, ಅಶೋಕ್ ದಾಬ, ಧನಂಜಯ ಸ್ವಾಮಿ ಕುಣಿಗಲ್ ಹಾಗೂ ಇತರರು ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಸಹ ನಿರ್ಮಾಪಕ ಹರೀಶ್ ನಾಗರಾಜ್ ಮಂಚೇನಹಳ್ಳಿ ತಿಳಿಸಿದ್ದಾರೆ.