ಕನ್ನಡ ರ‍್ಯಾಪರ್, ಗೀತರಚನೆಕಾರ, ಸಂಗೀತ ನಿರ್ದೇಶಕ, ಚಂದನ್ ಶೆಟ್ಟಿ ವಿಭಿನ್ನ ಶೈಲಿಯ ಮೂಲಕ ಸಂಗೀತ ಲೋಕದಲ್ಲಿ ಮನೆ ಮಾತಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅದರಲ್ಲೂ ರ‍್ಯಾಪ್ ಹಾಡಿನ ಮೂಲಕ ನಾಡಿನಾದ್ಯಂತ ಮನೆ ಮಾತಾಗಿರುವ ಚಂದನ್ ಶೆಟ್ಟಿಯ '3 ಪೆಗ್' ಹಾಡು ಸಂಗೀತ ಲೋಕದಲ್ಲಿ ಹೊಸ ಹವಾವನ್ನೇ ಸೃಷ್ಟಿ ಮಾಡಿದ್ದರು.
ಕೇವಲ ಕನ್ನಡ ನೆಲದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ತಮ್ಮ ರ‍್ಯಾಪ್ ಕಂಪನ್ನು ಪಸರಿಸಿದ್ದಾರೆ. 3 ಪೆಗ್ ನಂತರ ಪಕ್ಕ ಚಾಕೊಲೆಟ್ ಗರ್ಲ್, ಶೋಕಿಲಾಲ, ಬ್ಯಾಡ್ ಗರ್ಲ್, ಟಕಿಲಾದಂತಹ ರ‍್ಯಾಪ್ ಹಾಡುಗಳನ್ನು ಬರೆದಿರುವ ಚಂದನ್, ಅಭಿಮಾನಿಗಳಿಗೆ ಹುಚ್ಚನ್ನು ಹಿಡಿಸಿದ್ದರು.
ಜೊತೆಗೆ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5ನೇ ಸ್ಪರ್ಧಿಯಾಗಿ ದೊಡ್ಮನೆಗೆ ಹೋಗಿದ್ದ ಚಂದನ್ ಅಲ್ಲೂ ರ‍್ಯಾಪ್ ಮೂಲಕ ಮ್ಯಾಜಿಕ್ ಮಾಡಿದ್ದರು. ಜೊತೆಗೆ ಸಹ ಸ್ಪರ್ಧಿ ನಿವೇದಿತಾ ಗೌಡಗೆ ಬರೆದ 'ಗೊಂಬೆ ಗೊಂಬೆ' ಹಾಡು ಕೂಡಾ ಸಾಕಷ್ಟು ವೈರಲ್ ಆಗಿತ್ತು.
ಇದೀಗ ರ‍್ಯಾಪ್ ನಿಂದ ಕೊಂಚ ದೂರವಿದ್ದ ಚಂದನ್ ಮತ್ತೆ ಸಂಗೀತ ಪ್ರಿಯರ ಮನ ಸೆಳೆಯಲು ಸಚ್ಚಾಗಿದ್ದಾರೆ. ಇದೇ ಗಣೇಶ ಹಬ್ಬದ ದಿನದಂದು ಚಂದನ್ ಶೆಟ್ಟಿ 'ಕೋಲು ಮಂಡೆ' ಅಂತ ಅಭಿಮಾನಿಗಳ ಮುಂದೆ ಬರೋಕೆ ರೇಡಿಯಾಗಿದ್ದಾರೆ. ಜನರು ಕೂಡಾ ಶೆಟ್ಟರ ಹೊಸ ಹಾಡನ್ನು ಕೇಳಲು ಕಾತರದಿಂದ ಕಾಯುತ್ತಿದ್ದಾರೆ. ಒಟ್ಟಿನಲ್ಲಿ ಈ ಬಾರಿಯ ಗಣೇಶ ಚತುರ್ಥಿಗೆ 'ಕೋಲು ಮಂಡೆ' ಗಲ್ಲಿ ಗಲ್ಲಿ ಸುತ್ತುತ್ತೆ ಅನ್ನೋದ್ರಲ್ಲಿ ಸಂಶಯವಿಲ್ಲ ಅನಿಸುತ್ತೆ.