ಯುವರತ್ನ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಟಿಸುತ್ತಿರುವ ಚಿತ್ರ. 'ಅಪ್ಪು' ಹಾಗೂ 'ಅಭಿ' ಚಿತ್ರದ ಪುನೀತ್ ಈ ಸಿನಿಮಾದಲ್ಲಿ ಕಾಲೇಜು ಹುಡುಗನ ಪಾತ್ರ ಮಾಡುತ್ತಿದ್ದಾರೆ. ಸಂತೋಷ್ ಆನಂದ್ ರಾಮ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.
ದಿನೇ ದಿನೆ ದೊಡ್ಡ ಸ್ಟಾರ್ಗಳು ಚಿತ್ರತಂಡದೊಂದಿಗೆ ಸೇರಿಕೊಳ್ಳುತ್ತಿದ್ದಾರೆ. ತಮಿಳು ಚಿತ್ರರಂಗದ ಬಹುಬೇಡಿಕೆಯ ಸ್ಟಂಟ್ ಮಾಸ್ಟರ್ ರಾಮ್ ಲಕ್ಷ್ಮಣ್ ಚಿತ್ರತಂಡಕ್ಕೆ ಸೇರಿಕೊಂಡಿದ್ದಾರೆ. ಈ ಹಿಂದೆ ನಟಸಾರ್ವಭೌಮ ಚಿತ್ರಕ್ಕೆ ಬಾಹುಬಲಿ ಖ್ಯಾತಿಯ ಪೀಟರ್ ಹೆನ್ ಮೈ ಜುಮ್ ಎನಿಸುವಂತೆ ಆ್ಯಕ್ಷನ್ ಕಂಪೋಸ್ ಮಾಡಿದ್ದರು. ಈಗ ಯುವರತ್ನ ಸಿನಿಮಾದಲ್ಲಿ ರಾಮ್ ಲಕ್ಷ್ಮಣ್ ಅಪ್ಪು ಕೈಯ್ಯಲ್ಲಿ ಭರ್ಜರಿ ಸ್ಟಂಟ್ ಮಾಡಿಸಲಿದ್ದಾರೆ ಎಂಬುದು ಕುತೂಹಲ ಹುಟ್ಟಿಸಿದೆ.
ಇನ್ನೊಂದೆಡೆ ಬಾಲಿವುಡ್ ನಟ ಬೊಮನ್ ಇರಾನಿಯೊಂದಿಗೆ ಚಿತ್ರತಂಡ ಮಾತುಕತೆ ನಡೆಸಿದ್ದು, ಎಲ್ಲಾ ಓಕೆ ಆದಲ್ಲಿ ಇರಾನಿ ಕೂಡಾ ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಕೆಜಿಎಫ್ ನಿರ್ಮಿಸಿದ್ದ ಹೊಂಬಾಳೆ ಫಿಲಮ್ಸ್ ಈ ಸಿನಿಮಾವನ್ನು ನಿರ್ಮಿಸುತ್ತಿದೆ.