ETV Bharat / sitara

ಕರ್ನಾಟಕ ನೆರೆ ಸಂತ್ರಸ್ತರಿಗೆ ಸೆಲೆಬ್ರಿಟಿ ಸಹೋದರರ ನೆರವು...₹10 ಲಕ್ಷ ಪರಿಹಾರ ನೀಡಿದ ತಮಿಳು ಸ್ಟಾರ್ಸ್​​ - ತಮಿಳು ನಟ

ತಮಿಳು ನಟ ಸೂರ್ಯ ಹಾಗೂ ಅವರ ಸಹೋದರ ಕಾರ್ತಿ ಕರ್ನಾಟಕ-ಕೇರಳ ಪ್ರವಾಹ ಸಂತ್ರಸ್ತರ ನೋವಿಗೆ ಸ್ಪಂದಿಸಿದ್ದಾರೆ.

kollywood actor surya
author img

By

Published : Aug 15, 2019, 12:52 PM IST

ಕರ್ನಾಟಕ ಹಾಗೂ ಕೇರಳ ಪ್ರವಾಹ ಸಂತ್ರಸ್ತರ ನೆರವಿಗೆ ಸೆಲೆಬ್ರಿಟಿ ಸಹೋದರರು ತಮಿಳು ನಟ ಸೂರ್ಯ ಹಾಗೂ ಕಾರ್ತಿ ಧಾವಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಸುರಿದ ರಣಭೀಕರ ಮಳೆಗೆ ಕರ್ನಾಟಕದ ಕೆಲ ಜಿಲ್ಲೆಗಳು ಪ್ರವಾಹ ಪರಿಸ್ಥಿತಿ ಎದುರಿಸಿವೆ. ಇತ್ತ ಕೇರಳದಲ್ಲಿಯೂ ಇದೇ ಸ್ಥಿತಿ ಎದುರಾಗಿದೆ. ಈಗಾಗಲೇ ಈ ಸಂತ್ರಸ್ತರ ನೆರವಿಗೆ ಸಾಕಷ್ಟು ಸಹಾಯ ಹಸ್ತಗಳು ಹರಿದು ಬಂದಿವೆ. ಈಗ ಕಾಲಿವುಡ್ ನಟರುಗಳಾದ ಸೂರ್ಯ ಹಾಗೂ ಅವರ ಸಹೋದರ ಕಾರ್ತಿ ಸಂಕಷ್ಟದಲ್ಲಿರುವ ಜನರ ನೋವಿಗೆ ಸ್ಪಂದಿಸಿದ್ದಾರೆ. ಕರ್ನಾಟಕ ಹಾಗೂ ಕೇರಳ ರಾಜ್ಯಗಳಿಗೆ ತಲಾ ₹10 ಲಕ್ಷ ರೂ ಪರಿಹಾರ ಧನ ನೀಡಿದ್ದಾರೆ. ಈ ವಿಚಾರವನ್ನು ಸಿನಿಮಾ ವಿಮರ್ಶಕ ರಮೇಶ್ ಬಾಲಾ ತಮ್ಮ ಟ್ವಿಟರ್​ಲ್ಲಿ ಖಚಿತಪಡಿಸಿದ್ದಾರೆ.

ಇನ್ನು ಉತ್ತರ ಕರ್ನಾಟಕದ ಬೆಳಗಾವಿ, ಚಿಕ್ಕೋಡಿ, ರಾಮದುರ್ಗ, ಇತ್ತ ಬಾಗಲಕೋಟೆ, ರಾಯಚೂರು ಹಾಗೂ ಯಾದಗಿರಿ ಸೇರಿದಂತೆ ಕರ್ನಾಟಕದ 16 ಜಿಲ್ಲೆಗಳು ನೆರೆ ಹಾವಳಿಗೆ ತುತ್ತಾಗಿವೆ. ಈ ಭಾಗದ ಜನರು ಆಸ್ತಿ-ಪಾಸ್ತಿ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈಗಾಗಲೇ ಪರಿಹಾರ ಹಾಗೂ ಪುನರ್ವಸತಿ ಕಾರ್ಯ ಜೋರಾಗಿ ನಡೆಯುತ್ತಿದ್ದು, ಕನ್ನಡ ಚಿತ್ರರಂಗ, ಹಲವು ಸಂಘ-ಸಂಸ್ಥೆಗಳು ಪರಿಹಾರ ಕಾರ್ಯಕ್ಕೆ ಕೈ ಜೋಡಿಸಿವೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.