ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಭಿನಯದ " ಅಮರ್ " ಚಿತ್ರ ಇಂದು ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಿದೆ.
ಅಂಬರೀಶ್ ಪುತ್ರ ಅಭಿ ಅವರ ಮೊದಲ ಸಿನಿಮಾಗೆ ಸ್ಯಾಂಡಲ್ವುಡ್ ಸ್ಟಾರ್ಗಳಲ್ಲದೆ ಕಾಲಿವುಡ್ ಸ್ಟಾರ್ ತಲೈವಾ ರಜನಿಕಾಂತ್ ಹಾಗೂ ಟಾಲಿವುಡ್ ಬಾಸ್ ಮೆಗಾ ಸ್ಟಾರ್ ಚಿರಂಜೀವಿ ಸಹ ವಿಶ್ ಮಾಡಿದ್ರು. ಈಗ ಇಂಡಿಯನ್ ಕ್ರಿಕೆಟ್ ಟೀಂನ ಸ್ಟಾರ್ ಪ್ಲೇಯರ್ ಕನ್ನಡಿಗ ಕೆ.ಎಲ್ ರಾಹುಲ್ ಅಮರ್ ಚಿತ್ರಕ್ಕೆ ವಿಶ್ ಮಾಡಿದ್ದಾರೆ.
ಇಂಗ್ಲೆಂಡ್ನಲ್ಲಿ ವಿಶ್ವಕಪ್ ಕಿಕೆಟ್ನಲ್ಲಿ ಬ್ಯುಸಿಯಾಗಿರುವ ಕೆ ಎಲ್ ರಾಹುಲ್ ತನ್ನ ಗೆಳೆಯ ಅಭಿಷೇಕ್ಗೆ ವಿಶ್ ಮಾಡಿದ್ದಾರೆ. ಅಭಿ ಅಭಿನಯದ ಮೊದಲ ಸಿನಿಮಾ ಅಮರ್ ಚಿತ್ರ ರಿಲೀಸ್ ಆಗ್ತಿದೆ ಒಳ್ಳೆದಾಗಲಿ ಎಂದು ಲಂಡನ್ನಿಂದಲೇ ಶುಭಾಶಯ ರವಾನಿಸಿದ್ದಾರೆ.