ETV Bharat / sitara

100 ಮಿಲಿಯನ್​ ವೀಕ್ಷಣೆ ಪಡೆದ 'ಕಿರಿಕ್​ ಪಾರ್ಟಿ'ಯ ಈ ಹಾಡು - ಕಿರಿಕ್​ ಪಾರ್ಟಿ ಸುದ್ದಿ

ಕಿರಿಕ್​ ಪಾರ್ಟಿ ಸಿನಿಮಾದ 'ಬೆಳಗೆದ್ದು' ಹಾಡು ಯೂಟ್ಯೂಬ್​ನಲ್ಲಿ ಬರೋಬ್ಬರಿ 100 ಮಿಲಿಯನ್ ವೀಕ್ಷಣೆ ಪಡೆದು​ ಮೆಚ್ಚುಗೆಗೆ ಪಾತ್ರವಾಗಿದೆ.

kirik parfty belageddu song got 100 million views
100 ಮಿಲಿಯನ್​ ವೀಕ್ಷಣೆ ಪಡೆದ 'ಕಿರಿಕ್​ ಪಾರ್ಟಿ'ಯ ಈ ಹಾಡು
author img

By

Published : Dec 24, 2020, 10:02 PM IST

ಕರ್ನಾಟಕದ ಕ್ರಶ್​​ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್​​ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ತೆರೆ ಕಂಡು ಬರೋಬ್ಬರಿ 4 ವರ್ಷಗಳೇ ಕಳೆದಿವೆ. ಆದ್ರೆ ಆ ಸಿನಿಮಾ ಹಾಗೂ ಹಾಡಿನ ಗುಂಗು ಮಾತ್ರ ಯುವ ಪೀಳಿಗೆಯಲ್ಲಿ ಹಾಗೆಯೇ ಇದೆ. ಇದೀಗ ಈ ಸಿನಿಮಾದ 'ಬೆಳಗೆದ್ದು' ಹಾಡು ಯೂಟ್ಯೂಬ್​ನಲ್ಲಿ ಬರೋಬ್ಬರಿ 100 ಮಿಲಿಯನ್ ವೀಕ್ಷಣೆ ಪಡೆದು​ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಕುರಿತು ರಶ್ಮಿಕಾ ಮಂದಣ್ಣ ಟ್ವಿಟರ್​​ನಲ್ಲಿ ಖುಷಿ ಹಂಚಿಕೊಂಡಿದ್ದಾರೆ. ''ಬೆಳಗೆದ್ದು... ಯಾವಾಗಲೂ ನನ್ನ ಮೊದಲ ಹಾಡು. ಈ ಹಾಡು ನೂರು ಮಿಲಿಯನ್ ವೀಕ್ಷಣೆ ದಾಟಿದೆ. ಈ ಹಾಡು ನನಗಾಗಿ ಮೇಕಿಂಗ್ ಮಾಡಿದ್ದು ನೆನಪಾಗುತ್ತಿದೆ. ಆ ದೃಶ್ಯಗಳು ಕಣ್ಣ ಮುಂದೆ ಬರುತ್ತಿವೆ. ನನ್ನಲ್ಲಿ ನಾನು ಸಾನ್ವಿಯನ್ನು ಕಂಡೆ. ಆಹಾ ಎಂತಹ ಜರ್ನಿ ಎಂದು ಟ್ವಿಟರ್​​ನಲ್ಲಿ ಬರೆದುಕೊಂಡಿದ್ದಾರೆ.

ಈ ಚಿತ್ರಕ್ಕೆ ರಿಷಬ್ ಶೆಟ್ಟಿ ಆ್ಯಕ್ಷನ್​​ ಕಟ್​​ ಹೇಳಿದ್ದು, ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ಸಂಯುಕ್ತಾ ಹೆಗಡೆ ಸೇರಿದಂತೆ ಹಲವರ ತಾರಾಬಳಗವಿದೆ. ಇನ್ನು ಬೆಳಗೆದ್ದು ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದು, ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.