ಸ್ಯಾಂಡಲ್ವುಡ್ ನಟ ಕಿರಣ್ ಶ್ರೀನಿವಾಸ್ ಮತ್ತು ಬಿಗ್‌ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ನಡುವೆ ಮಾತಿನ ಯುದ್ಧ ಶುರುವಾಗಿದೆ. ಸಿಪಿಐ ನಾಯಕ ಕನ್ಹಯ್ಯ ಕುಮಾರ್ ಬಗ್ಗೆ 2016ರಲ್ಲಿ ಕಿರಿಕ್ ಕೀರ್ತಿ ಒಂದು ವಿಡಿಯೋ ಅಪ್ಲೋಡ್ ಮಾಡಿದ್ದು, ಆ ವಿಡಿಯೋಗೆ ಕನ್ನಡದ 'ಹಾಗೇ ಸುಮ್ಮನೆ' ಸಿನಿಮಾ ನಟ ಕಿರಣ್ ಶ್ರೀನಿವಾಸ್ ಉತ್ತರ ಕೊಟ್ಟಿದ್ದಾರೆ. ಈ ವಿಡಿಯೋಗೆ ಕಿರಿಕ್ ಕೀರ್ತಿ ಮತ್ತೊಂದು ವಿಡಿಯೋ ಹರಿಬಿಟ್ಟಿದ್ದು ಕಿರಣ್ ಬಗ್ಗೆ ಹರಿಹಾಯ್ದಿದ್ದಾರೆ.
2016ರಲ್ಲಿ ಕಿರಿಕ್ ಕೀರ್ತಿ ಕನ್ಹಯ್ಯ ಕುಮಾರ್ ಬಗ್ಗೆ ಕೆಲವು ಮಾತುಗಳನ್ನಾಡಿ, ಈ ಬಗೆಗಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಕನ್ಹಯ್ಯ ಕುಮಾರ್ ನೀನ್ಯಾರು, ನಿನ್ನ ಐಡೆಂಟಿಟಿ ಏನು? ಮೋದಿ ವಿರುದ್ದ ನೀನ್ಯಾಕೆ ಮಾತಾಡ್ತಿಯಾ? ಅಫ್ಜಲ್ ಗುರು ಗಲ್ಲಿಗೇರಿಸಿದ್ದ ಕುರಿತಾಗಿ ನೀನೇಕೆ ಪ್ರೊಟೆಸ್ಟ್ ಮಾಡಿದೆ? ದೇಶದ ವಿರುದ್ದ ಘೋಷಣೆ ಕೂಗಿದ ತಂಡದಲ್ಲಿ ಇದ್ದವನು ನೀನು. ಆ ಕಾರಣಕ್ಕೆ ನೀನು ಜೈಲಿಗೆ ಹೋಗಿ ಬಂದೆ. ಕೋರ್ಟ್‌ನಲ್ಲಿ ಹೊಡೆದ್ರು ಎಂಬ ಹತ್ತಾರು ವಿಷಯಗಳ ಬಗ್ಗೆ ಕೀರ್ತಿ ಏಕ ವಚನದಲ್ಲಿಯೇ ಮಾತನಾಡಿದ್ರು.
ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನಟ ಕಿರಣ್ ಶ್ರಿನಿವಾಸ್ ವಿಡಿಯೋ ಮೂಲಕವೇ ಕಿರಿಕ್ ಕೀರ್ತಿಗೆ ಟಾಂಗ್ ಕೊಟ್ಟಿದ್ದಾರೆ. ಕಿರಿಕ್ ಕೀರ್ತಿ ಕುರಿತು ಮಾತನಾಡಿರುವ ಕಿರಣ್, ಕಿರಿಕ್ ಕೀರ್ತಿಯವರೇ ನಿಮ್ಮ ಬಗ್ಗೆ ನನಗೆ ಗೊತ್ತಿಲ್ಲ, ನನ್ನ ಬಗ್ಗೆ ನಿಮಗೆ ಗೊತ್ತಿಲ್ಲ. ಆದರೆ, ನಾನೊಬ್ಬ ಕನ್ಹಯ್ಯ ಕುಮಾರ್ ಅಭಿಮಾನಿ, ಫಾಲೋವರ್. ಇನ್ನು, ಅಫ್ಜಲ್ ಗುರು ನೇಣಿಗಾಕಿದ್ದಕ್ಕೆ ನಡೆದ ಪ್ರತಿಭಟನೆಯಲ್ಲಿ ಕನ್ಹಯ್ಯ ಕುಮಾರ್ ಭಾಗಿಯಾಗಿರಲಿಲ್ಲ. ಇನ್ನೋಂದು ವಿಚಾರ ಅಂದ್ರೇ ಯಾವುದೇ ಭಾರತದ ಪ್ರಜೆಯನ್ನು ಕೊಲ್ಲಲು ಭಾರತೀಯ ಸಂವಿಧಾನದಲ್ಲಿ ಕಾನೂನುನಿಲ್ಲ ಎಂದು ಹೇಳಿದ್ದಾರೆ.
- " class="align-text-top noRightClick twitterSection" data="">
ಇನ್ನು, ಕನ್ಹಯ್ಯ ಕುಮಾರ್ ವಿದ್ಯಾರ್ಹತೆ ಬಗ್ಗೆ ಹೇಳಿರುವ ಕಿರಣ್, ಕನ್ಹಯ್ಯ ಕುಮಾರ್ ಪಿಹೆಚ್ಡಿ ಮುಗಸಿದ್ದಾರೆ. ಇದು ಪ್ರಪಂಚದಲ್ಲಿರುವ ಎಲ್ರಿಗೂ ಗೊತ್ತು, ನಿಮಗೂ ಗೊತ್ತಿರ್ಬೇಕು ತಿಳುವಳಿಕೆ ಇರೋರು ನೀವು ಎಂದು ಕಿರಣ್ ವಿಡಿಯೋದಲ್ಲಿ ಹೇಳಿದ್ದಾರೆ. ಇನ್ನು, ಕನ್ಹಯ್ಯ ಕುಮಾರ್ ಜೈಲಿಗೆ ಹೋಗಿ ಬಂದ ವಿಚಾರ ಮಾತನಾಡಿದ ಕಿರಣ್, ಅವರು ಯಾವುದಾದರೂ ತಪ್ಪು ಮಾಡಿದ್ದರೆ ಇಷ್ಟೊತ್ತಿಗೆ ಅವರ ವಿರುದ್ದ ಚಾರ್ಜ್‌ಶೀಟ್ ಯಾಕೆ ಫೈಲ್ ಆಗಿಲ್ಲ ಅಂತಾ ತಿಳಿಯಬೇಕು. ದೇಶದ ಪ್ರಧಾನಿ ವಿರುದ್ದ ಮಾತನಾಡಿದ್ದಾರೆ ಎಂಬ ಮಾತಿಗೆ ಉತ್ತರ ಹೇಳಿರುವ ಕಿರಣ್, ಪ್ರಧಾನಿ ದೇಶದ ಒಬ್ಬ ಪ್ರಜೆ. ಅವರ ಬಗ್ಗೆ ಪ್ರಶ್ನೆ ಮಾಡುವ ಹಕ್ಕು ಎಲ್ಲರಿಗೂ ಇದೆ ಎಂದು ಹೇಳಿದ್ದಾರೆ.
ಇದೀಗ ಕನ್ಹಯ್ಯ ಕುಮಾರ್ ಬಗ್ಗೆ ನಡೆಯುತ್ತಿರುವ ಈ ಇಬ್ಬರ ಮಾತಿನ ಚಕಮಕಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸದ್ಯ ಕಿರಣ್ ಮಾಡಿರುವ ವಿಡಿಯೋಕ್ಕೆ ಕಿರಿಕ್ ಕೀರ್ತಿ ಮತ್ತೊಂದು ವಿಡಿಯೋದಲ್ಲಿ ಟಾಂಗ್ ಕೊಟ್ಟಿದ್ದಾರೆ.
ಮೂರು ವರ್ಷದಲ್ಲಿ ಮಾಡಿರುವ ವಿಡಿಯೋವನ್ನು ಇಟ್ಕೊಂಡು ಇವಾಗ ನಮ್ಮನ್ನು ಹೇಗಾದ್ರೂ ಮಾಡಿ ಸಿಕ್ಕಿಸ್ಬೇಕು ಅನ್ನೋ ನಿಮ್ಮ ಪ್ರಯತ್ನ ಅದ್ಬುತ. ಆದರೆ, ನಿಮ್ಮ ತಲೆಯಲ್ಲಿ ಬುದ್ದಿ, ಜ್ಞಾನ ಇದ್ರೆ ಸ್ವಲ್ಪ ಯೋಚನೆ ಮಾಡಿ ಇದು ಯಾವಾಗ ಅಪ್ಲೋಡ್ ಆಯ್ತು ಅಂತಾ. ನಾನು ವಿಡಿಯೋ ಮಾಡಿದ ಸಂದರ್ಭದಲ್ಲಿ ಕನ್ಹಯ್ಯ ಕುಮಾರ್ ಯಾವ ಪಕ್ಷಕ್ಕೂ ಸೇರಿರಲಿಲ್ಲ. ಚುನಾವಣೆಯಲ್ಲಿ ನಿಂತು ಸೋತಿರಲಿಲ್ಲ. ಇವಾಗ ನೀವೆಲ್ಲ ಈ ರೀತಿ ಉತ್ತರ ಕೊಡ್ತಿದೀರಲ್ಲ ಎಲ್ ಮಲ್ಗಿದ್ರಪ್ಪ ನೀವೆಲ್ಲ ಅವತ್ತು ಎಂದು ಕಿರಿಕ್ ಕೀರ್ತಿ ಕಿರಣ್ ವಿರುದ್ಧ ಹರಿ ಹಾಯ್ದಿದ್ದಾರೆ.