ಕನ್ನಡಿಗರ ನಾಡಹಬ್ಬ ದಸರಾ ಬಂದೇ ಬಿಟ್ಟಿತು. ಕಿರುತೆರೆಯಲ್ಲಿಯೂ ನಾಡ ಹಬ್ಬದ ಸಡಗರ ಜೋರಾಗಿದೆ. ದಸರಾದ ಮೆರುಗು ಹೆಚ್ಚಿಸಲು ಕಿನ್ನರಿಯ ಮಣಿ ಬರುತ್ತಿದ್ದಾಳೆ. ಹೌದು, ಮಿಥುನರಾಶಿಗೆ ಸಾಥ್ ನೀಡಲು ನಿಮ್ಮ ಪ್ರೀತಿಯ ಕಿನ್ನರಿ ಮರಳಿ ಬರುತ್ತಿದ್ದಾಳೆ.
ದಸರಾ ಹಬ್ಬದ ಪ್ರಯುಕ್ತವಾಗಿ ಕಲರ್ಸ್ ಕನ್ನಡದಲ್ಲಿ ಶನಿವಾರ ಸಂಜೆ 6ಗಂಟೆಗೆ ಮಹಾಸಂಚಿಕೆ ಪ್ರಸಾರವಾಗಲಿದ್ದು, ಅದರಲ್ಲಿ ಕಿನ್ನರಿಯ ದಿಶಾ ಕಾಣಿಸಿಕೊಳ್ಳಲಿದ್ದಾರೆ. ಕಿನ್ನರಿ ಧಾರಾವಾಹಿಯಲ್ಲಿ ಮಣಿಯಾಗಿ ಮಿಂಚಿದ್ದ ದಿಶಾ ನಂತರ ನಟನೆಯಿಂದ ಕೊಂಚ ದೂರವೇ ಇದ್ದರು. ಇದೀಗ ಮಿಥುನರಾಶಿಯ ಅತಿಥಿ ಪಾತ್ರಕ್ಕಾಗಿ ಮಗದೊಮ್ಮೆ ಬಣ್ಣ ಹಚ್ಚಿದ್ದಾರೆ.
ಮಿಥುನರಾಶಿ ಧಾರಾವಾಹಿ ನಟ ಸ್ವಾಮಿನಾಥನ್ ಹಾಗೂ ನಟಿ ವೈಷ್ಣವಿ ಅವರು ದಿಶಾರೊಂದಿಗಿನ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಇದರ ಪ್ರೋಮೋ ಕೂಡ ರಿಲೀಸ್ ಆಗಿದೆ. ಮತ್ತೊಮ್ಮೆ ಕಿನ್ನರಿ ಮಣಿ ಕಿರುತೆರೆಗೆ ಬಂದಿರುವುದು ವೀಕ್ಷಕರ ಸಂತಸವನ್ನು ಇಮ್ಮಡಿಗೊಳಿಸಿದೆ.