ನಟ ಕಿಚ್ಚ ಸುದೀಪ್ ಅವರ ಮುದ್ದಿನ ಮಗಳ ಹೆಸರು ಸಾನ್ವಿ. ಸದ್ಯಕ್ಕೆ ಅಪ್ಪನಂತೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಸಾನ್ವಿ ಸುದೀಪ್, ಆಗಾಗ್ಗೆ ಹಾಡುಗಳನ್ನ ಹಾಡುವ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಕಿಚ್ಚನ ಪುತ್ರಿ ಸಾನ್ವಿ ಬಾಲಿವುಡ್ ನಟನ ಹುಟ್ಟುಹಬ್ಬಕ್ಕೆ ವಿಶೇಷ ರೀತಿಯಲ್ಲಿ ಶುಭಾಶಯ ತಿಳಿಸುವ ಮೂಲಕ ಸುದ್ದಿಯಲ್ಲಿದ್ದಾರೆ.
ಹೌದು, ಸದ್ಯ ಬಾಲಿವುಡ್ನಲ್ಲಿ ಹ್ಯಾಂಡ್ಸಮ್ ಹೀರೋ ಎಂದು ಕರೆಸಿಕೊಂಡಿರುವ, ಸಿದ್ಧಾರ್ಥ ಮಲ್ಹೋತ್ರಾ ಅಂದ್ರೆ ಸುದೀಪ್ ಮಗಳಿಗೆ ಪಂಚಪ್ರಾಣವಂತೆ. ಹೀಗಾಗಿ ಸಾನ್ವಿ ಸುದೀಪ್ ತಮಗೆ ಇಷ್ಟವಾದ ಹೀರೋ ಸಿದ್ಧಾರ್ಥ ಮಲ್ಹೋತ್ರಾ, ಅವರ ಹುಟ್ಟು ಹಬ್ಬಕ್ಕೆ ಬಹಳ ವಿಭಿನ್ನವಾಗಿ ಶುಭಾಶಯ ಕೋರಿದ್ದಾರೆ. ಸಾನ್ವಿ ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರ ಫೋಟೋವನ್ನು ಶೇರ್ ಮಾಡಿ, 'Happy Birthday to my Love' ಎಂದು ಬರೆದುಕೊಂಡಿದ್ದಾರೆ.
ಸಾನ್ವಿ ಹಲವು ಬಾರಿ ಸಿದ್ಧಾರ್ಥ್ ಅವರ ಫೋಟೋ, ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಸಿದ್ಧಾರ್ಥ ಮಲ್ಹೋತ್ರಾ ಫೋಟೋ ಜೊತೆಗೆ ಮೈ ಲವ್ ಅಂತಾ ಬರೆಯುವ ಮೂಲಕ, ಸಿದ್ಧಾರ್ಥಗೆ ಹುಟ್ಟು ಹಬ್ಬದ ಶುಭಾಶಯ ಹೇಳಿದ್ದಾರೆ. ಅಪ್ಪನಂತೆ ಕ್ರಿಕೆಟ್, ಮ್ಯೂಜಿಕ್ಗೆ ಹೆಚ್ಚು ಸಮಯ ಮೀಸಲಿಡುವ ಸಾನ್ವಿ, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ.
ಸದ್ಯ ಸುದೀಪ್ ಮಗಳು ಸಾನ್ವಿ ಸಿದ್ಧಾರ್ಥ ಮಲ್ಹೋತ್ರಾಗೆ ವಿಶ್ ಮಾಡಿರುವ ಫೋಟೋವೊಂದು ಸಖತ್ ವೈರಲ್ ಆಗುತ್ತಿದೆ. ಶೇರ್ ಶಾ ಸಿನಿಮಾ ಸಕ್ಸಸ್ ಬಳಿಕ ಸಿದ್ದಾರ್ಥ್ ಮಿಷನ್ ಮಜ್ನು ಸಿನಿಮಾ ಮಾಡ್ತಾ ಇದ್ದಾರೆ.
ಇದನ್ನೂ ಓದಿ: ನಟನೆಗಿಂತ ಕಲಾ ನಿರ್ದೇಶನ ನನಗೆ ತುಂಬಾ ತೃಪ್ತಿ ಕೊಡುತ್ತೆ: ಅರುಣ್ ಸಾಗರ್