ETV Bharat / sitara

ವಿಕ್ರಾಂತ್​ ರೋಣನಾಗಿ ‘ಫ್ಯಾಂಟಮ್’​ ಪ್ರಪಂಚಕ್ಕೆ ಕಿಚ್ಚನ ಖಡಕ್​ ಎಂಟ್ರಿ - ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್

ವಿಕ್ರಾಂತ್ ರೋಣ ಪಾತ್ರಕ್ಕೆ ಕಿಚ್ಚ ಬಾಡಿ ಬಿಲ್ಡ್ ಮಾಡಿ ತಮ್ಮ ಲುಕ್​ ಬದಲಾಯಿಸಿಕೊಂಡಿದ್ದು, ಸಖತ್​ ಸ್ಟೈಲಿಷ್‌ ಆಗಿ ಕಾಣಿಸಿದ್ದಾರೆ..

kiccha sudeep upcoming movie another scene released by Phantom  team
ವಿಕ್ರಾಂತ್​ ರೋಣನಾಗಿ ‘ಫ್ಯಾಂಟಮ್’​ ಪ್ರಪಂಚಕ್ಕೆ ಕಿಚ್ಚನ ಖಡಕ್​ ಎಂಟ್ರಿ
author img

By

Published : Jul 24, 2020, 9:35 PM IST

ಬೆಂಗಳೂರು : ಕಿಚ್ಚ ಸುದೀಪ್ ಅಭಿನಯದ ನಿರ್ದೇಶಕ ಅನೂಪ್ ಭಂಡಾರಿ ಆ್ಯಕ್ಷನ್ ಕಟ್ ಹೇಳುತ್ತಿರುವ ಫ್ಯಾಂಟಮ್ ಸಿನಿಮಾ ಶೂಟಿಂಗ್ ಹಂತದಲ್ಲಿಯೇ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ.

ಹೈದರಾಬಾದಿನ ಅನ್ನಪೂರ್ಣೇಶ್ವರಿ ಸ್ಟುಡಿಯೋದಲ್ಲಿ ದಟ್ಟ ಕಾಡಿನ ರೀತಿ ಸೆಟ್​​​​ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ. ಈ ಕೊರೊನಾ ಸಂದರ್ಭದಲ್ಲಿ ಸರ್ಕಾರದ ಗೈಡ್‌ಲೈನ್ಸ್ ಪ್ರಕಾರ ಶೂಟಿಂಗ್ ಮಾಡ್ತಿರೋ ಫ್ಯಾಂಟಮ್ ಚಿತ್ರದ, ಸಣ್ಣ ಝಲಕ್‌ನ ಕೆಲ ದಿನಗಳ ಹಿಂದೆ ಚಿತ್ರ ತಂಡ ರಿವೀಲ್ ಮಾಡಿತ್ತು.

ದಟ್ಟ ಕಾಡಿನೊಳಗೆ ಮಗುವಿನೊಂದಿಗೆ ಬರುವ ಸುದೀಪ್ ಎಂಟ್ರಿ ಬೊಂಬಾಟ್ ಆಗಿತ್ತು. ಆ ಸಣ್ಣ ದೃಶ್ಯವನ್ನ ನೋಡಿ ಕಿಚ್ಚನ ಫ್ರಾನ್ಸ್ ದಿಲ್ ಖುಷ್ ಆಗಿತ್ತು. ಈಗ ಫ್ಯಾಂಟಮ್ ಸಿನಿಮಾದ ಮತ್ತೊಂದು ದೃಶ್ಯ ಅನಾವರಣ ಆಗಿದೆ. ಫ್ಯಾಂಟಮ್ ಪ್ರಪಂಚಕ್ಕೆ‌ ದಟ್ಟ ಕಾಡಿನಲ್ಲಿ, ಬೈಕ್​​ನಲ್ಲಿ ಬಂದಿಳಿಯುವ ಕಿಚ್ಚನ ದೃಶ್ಯ ರಿಲೀಸ್ ಮಾಡಿದ್ದಾರೆ.

ವಿಕ್ರಾಂತ್​ ರೋಣನಾಗಿ ‘ಫ್ಯಾಂಟಮ್’​ ಪ್ರಪಂಚಕ್ಕೆ ಕಿಚ್ಚನ ಖಡಕ್​ ಎಂಟ್ರಿ

ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅದ್ಭುತ ಹಿನ್ನೆಲೆ ಸಂಗೀತ ನೀಡಿದ್ದು, ಕೆಜಿಎಫ್​​​​ ಚಿತ್ರದ ಕಲಾ ನಿರ್ದೇಶಕ ಶವಕುಮಾರ್​​​ ಕೈಚಳಕ ಎದ್ದು ಕಾಣುತ್ತಿದೆ. ವಿಕ್ರಾಂತ್ ರೋಣ ಪಾತ್ರಕ್ಕೆ ಕಿಚ್ಚ ಬಾಡಿ ಬಿಲ್ಡ್ ಮಾಡಿ ತಮ್ಮ ಲುಕ್​ ಬದಲಾಯಿಸಿಕೊಂಡಿದ್ದು, ಸಖತ್​ ಸ್ಟೈಲಿಷ್‌ ಆಗಿ ಕಾಣಿಸಿದ್ದಾರೆ. ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಮಾಡಿದ್ದ ನಿರ್ಮಾಪಕ ಜಾಕ್ ಮಂಜು, ಫ್ಯಾಂಟಮ್ ಚಿತ್ರವನ್ನು ಬಹುಕೋಟಿ ವೆಚ್ಚದಲ್ಲಿ ನಿರ್ಮಿಸ್ತಿದ್ದಾರೆ.

ನಿರ್ಮಾಪಕ ಜಾಕ್ ಮಂಜು ಹೇಳುವ ಹಾಗೇ ಮುಂದಿನ ದಿನಗಳಲ್ಲಿ ಫ್ಯಾನ್ ಇಂಡಿಯಾ ಸಿನಿಮಾ ಮಾಡುವ ಆಲೋಚನೆ ಇದೆಯಂತೆ. ಸದ್ಯ ಕಿಚ್ಚ ವಿಕ್ರಾಂತ್ ರೋಣನಾಗಿ ಫ್ಯಾಂಟಮ್ ಪ್ರಪಂಚಕ್ಕೆ ಆಗಮನವಾಗಿದ್ದು, ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.