ಇಂದು ಸೈರಾ ಚಿತ್ರತಂಡ ಸಿನಿಮಾದ ಪ್ರಮುಖ ಪಾತ್ರಧಾರಿಗಳ ಮೇಕಿಂಗ್ ವಿಡಿಯೋವನ್ನು ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಅಮಿತಾಬ್ ಬಚ್ಚನ್, ರವಿಕಿಶನ್, ಜಗಪತಿಬಾಬು, ನಯನತಾರಾ, ತಮನ್ನಾ ಭಾಟಿಯಾ, ವಿಜಯ್ ಸೇತುಪತಿ ಹಾಗೂ ಕಿಚ್ಚ ಸುದೀಪ್ ಪಾತ್ರ ಪರಿಚಯ ಮಾಡಲಾಗಿದೆ.
- " class="align-text-top noRightClick twitterSection" data="">
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಈ ಸಿನಿಮಾದಲ್ಲಿ ಚಿರಂಜೀವಿ ಗುರು ಗೋಸಾಯಿ ವೆಂಕಣ್ಣ ಆಗಿ ನಟಿಸುತ್ತಿದ್ದಾರೆ.
- " class="align-text-top noRightClick twitterSection" data="">
ಈ ಚಿತ್ರದಲ್ಲಿ ನಟ ರವಿಕಿಶನ್ ಬಾಸಿರೆಡ್ಡಿ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ.
- " class="align-text-top noRightClick twitterSection" data="">
ಜಗಪತಿಬಾಬು ವೀರಾರೆಡ್ಡಿ ಪಾತ್ರದಲ್ಲಿ ನಿಮ್ಮ ಮುಂದೆ ಬರುತ್ತಿದ್ದಾರೆ. ಸೈರಾ ನರಸಿಂಹರೆಡ್ಡಿ ಜೊತೆ ಸೇರಿ ಆಂಗ್ಲರ ಮೇಲೆ ಯುದ್ಧ ಮಾಡುವ ಪಾತ್ರ ಇದು.
- " class="align-text-top noRightClick twitterSection" data="">
ನರಸಿಂಹರೆಡ್ಡಿ ಪತ್ನಿ ಪಾತ್ರದಲ್ಲಿ ತಮಿಳು ಲೇಡಿ ಸೂಪರ್ಸ್ಟಾರ್ ನಯನತಾರಾ ನಟಿಸಿದ್ದು ಚಿತ್ರದಲ್ಲಿ ಆಕೆ ಹೆಸರು ಸಿದ್ದಮ್ಮ.
- " class="align-text-top noRightClick twitterSection" data="">
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಲಕ್ಷ್ಮಿ ಎಂಬ ನೃತ್ಯಗಾರ್ತಿಯಾಗಿ, ಸೈರಾ ನರಸಿಂಹರೆಡ್ಡಿಯನ್ನು ಆರಾಧಿಸುವ ಯುವತಿಯಾಗಿ ನಟಿಸಿದ್ದಾರೆ.
- " class="align-text-top noRightClick twitterSection" data="">
ತಮಿಳುನಟ ವಿಜಯ್ ಸೇತುಪತಿ ಈ ಚಿತ್ರದಲ್ಲಿ ಸೈರಾಗೆ ಸಹಾಯ ಮಾಡುವ ತಮಿಳುರಾಜ ರಾಜಪಾಂಡಿಯಾಗಿ ಅಭಿನಯಿಸಿದ್ದಾರೆ.
- " class="align-text-top noRightClick twitterSection" data="">
ಇನ್ನು ಕನ್ನಡದ ಕಿಚ್ಚ ಸುದೀಪ್ ಆವುಕುರಾಜು ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ಸ್ವಲ್ಪ ಪೊಗರು ಸ್ವಭಾವವುಳ್ಳ ಪಾತ್ರಧಾರಿಯಾಗಿ ಕಿಚ್ಚ ನಟಿಸುತ್ತಿದ್ದಾರೆ.