ETV Bharat / sitara

Sudeep Birthday: ಅಪ್ಪನ ಗುಣಗಳನ್ನು ಹೊಗಳಿ ಹುಟ್ಟುಹಬ್ಬಕ್ಕೆ ಶುಭಕೋರಿದ ಮಗಳು - ಸುದೀಪ್​ ಫೋಟೋ ಹಂಚಿಕೊಂಡ ಸಾನ್ವಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಇಂದು ಅವರು ತಮ್ಮ ಜನ್ಮದಿನವನ್ನು ಕುಟುಂಬಸ್ಥರು ಹಾಗೂ ಸ್ನೇಹಿತರ ಜೊತೆಗೆ ಸೆಲೆಬ್ರೇಟ್ ಮಾಡಿದ್ದಾರೆ. ಆದರೆ ಮಗಳು ಸಾನ್ವಿ ವಿಶೇಷವಾಗಿ ಅಪ್ಪನಿಗೆ ವಿಶ್​ ಮಾಡಿದ್ದಾರೆ.

Sudeep, Sanvi
ಸುದೀಪ್​ ,ಸಾನ್ವಿ
author img

By

Published : Sep 2, 2021, 8:09 PM IST

ಸ್ಯಾಂಡಲ್​ವುಡ್​ ಮಾತ್ರವಲ್ಲದೆ, ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸುವ ಮೂಲಕ ಜನಪ್ರಿಯತೆ ಗಳಿಸಿರುವ ಅಭಿನಯ ಚರ್ಕವರ್ತಿ ಚಿಕ್ಕ ಸುದೀಪ್​ ಇಂದು 50 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂಭ್ರಮದಲ್ಲಿ ಮಗಳು ಸಾನ್ವಿ, ಇನ್​​​ಸ್ಟಾಗ್ರಾಮ್‌ನಲ್ಲಿ ಅಪ್ಪನಿಗೆ ವಿಶೇಷವಾಗಿ ಬರ್ತ್‌ಡೇ ವಿಶಸ್ ತಿಳಿಸಿದ್ದಾರೆ.

ಕಿಚ್ಚ ಕಿಚನ್​, ಸಿನಿಮಾ, ಡೈರೆಕ್ಷನ್, ಆ್ಯಕ್ಟಿಂಗ್, ಸ್ಪೋರ್ಟ್ಸ್, ಸಮಾಜಸೇವೆ.. ಹೀಗೆ ಎಲ್ಲಾ ರಂಗದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದರ ಹೊರತಾಗಿ ಅಪ್ಪ-ಅಮ್ಮನಿಗೆ ಒಳ್ಳೆಯ ಮಗನಾಗಿ, ಪತ್ನಿಗೆ ಒಳ್ಳೆಯ ಪತಿಯಾಗಿ, ಮಗಳಿಗೆ ಮುದ್ದಿನ ಅಪ್ಪನಾಗಿದ್ದಾರೆ. ಇಂತಹ ಸಕಲಕಲಾವಲ್ಲಭ ಅಪ್ಪನನ್ನು ಮುದ್ದಿನ ಮಗಳು ಸಾನ್ವಿ ಹೊಗಳಿದ್ದಾರೆ.

ಸುದೀಪ್ ಸಿನಿಮಾ ಜರ್ನಿಯಲ್ಲಿ ನಂಬಿಕೆ ಮತ್ತು ಗೌರವ ಬಹಳ ಮುಖ್ಯ. ಇದು ಸಾನ್ವಿ ಮೆಚ್ಚಿದ ಗುಣಗಳಲ್ಲಿ ಒಂದು ಎಂದು ಹೇಳಿದ್ದಾರೆ. ಸುದೀಪ್ ಇಂದು ದೊಡ್ಡ ಮಟ್ಟಕ್ಕೆ ಬೆಳೆಯೋದಿಕ್ಕೆ ಶ್ರದ್ಧೆ ಕೂಡ ಕಾರಣ. ಚಿತ್ರರಂಗದ ಹಾದಿಯಲ್ಲಿ ಸೋಲು, ಗೆಲುವು ಏನೇ ಇದ್ದರೂ ಕೂಡ ಅವರು ಆ ಶ್ರದ್ಧೆಯನ್ನು ಕಳೆದುಕೊಂಡಿಲ್ಲ. ಮೊದಲ ಚಿತ್ರಕ್ಕೆ ತೋರಿದ ಶ್ರದ್ಧೆಯನ್ನೇ ಅವರು ಎಲ್ಲಾ ಚಿತ್ರದಲ್ಲೂ ತೋರುತ್ತಾರೆ ಎಂದು ಸಾನ್ವಿ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.