ETV Bharat / sitara

50 ದಿನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಹೊಸಬರ 'ಖನನ' - undefined

ಹೊಸಬರೇ ನಿರ್ದೇಶಿಸಿ, ನಟಿಸಿರುವ 'ಖನನ' ಸಿನಿಮಾ ಯಶಸ್ವಿ 50 ದಿನಗಳನ್ನು ಪೂರೈಸಿದೆ. ನಾಯಕ ಆರ್ಯವರ್ಧನ್​​​​​​​​​​​​​​​​​​​​​​​ಗೆ ಈ ಸಿನಿಮಾದಿಂದ ಬ್ರೇಕ್ ಸಿಕ್ಕಿದ್ದು, ಹೊಸ ಸಿನಿಮಾವೊಂದರಲ್ಲಿ ನಟಿಸುವ ಅವಕಾಶ ಸಿಕ್ಕಿದೆ.

'ಖನನ'
author img

By

Published : Jul 2, 2019, 12:41 PM IST

ಇತ್ತೀಚೆಗೆ ಸ್ಯಾಂಡಲ್​​ವುಡ್​​ನಲ್ಲಿ ಹೊಸ ಪರ್ವ ಆರಂಭವಾಗಿದೆ ಎನ್ನಬಹುದು. ಹೊಸ ಹೊಸ ನಿರ್ದೇಶಕ, ನಟ, ನಟಿಯರು ಚಂದನವನಕ್ಕೆ ಅಡಿಯಿಡುತ್ತಿದ್ದಾರೆ. ಅವರಲ್ಲಿ ಕೆಲವರ ಸಿನಿಮಾಗಳಷ್ಟೇ ಸಕ್ಸಸ್ ಕಾಣುತ್ತಿವೆ.

'ಖನನ' 50 ದಿನಗಳ ವಿಜಯೋತ್ಸವ ಕಾರ್ಯಕ್ರಮ

ಉತ್ತಮ ಚಿತ್ರಕಥೆ ಹೊಂದಿದ್ದ ಹೊಸ ನಿರ್ದೇಶಕ, ಹೊಸ ನಾಯಕ, ಹೊಸ ನಿರ್ಮಾಣ ಸಂಸ್ಥೆ ಎಲ್ಲವೂ ಹೊಸಬರಿಂದ ಕೂಡಿದ್ದ 'ಖನನ' ಚಿತ್ರ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಹೊಸ ನಿರ್ದೇಶಕ ರಾಧಾ, ಸಸ್ಪೆನ್ಸ್ ಥ್ರಿಲ್ಲರ್ ಸರಕಿನೊಂದಿಗೆ ಬಂದು ಸ್ಯಾಂಡಲ್​​​ವುಡ್​ನಲ್ಲಿ ನೆಲೆ ನಿಲ್ಲುವ ಸೂಚನೆ ನೀಡಿದ್ದಾರೆ. ಇನ್ನು ನಾಯಕ ಆರ್ಯವರ್ಧನ್​​ಗೂ 'ಖನನ' ಚಿತ್ರ ಒಂದೊಳ್ಳೆ ಬ್ರೇಕ್ ಕೊಟ್ಟಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಸಿನಿಮಾ ಸಕ್ಸಸ್​​ ಆಚರಿಸಿದೆ. ಕಲಾವಿದರ ಸಂಘದಲ್ಲಿ ನಡೆದ ಕಾರ್ಯಕ್ರಮಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾದ ಡಿ.ಆರ್​​. ಜೈರಾಜ್​, ಉಪಾಧ್ಯಕ್ಷ ಉಮೇಶ್ ಬಣಕಾರ್ ಹಾಗೂ ಕಾರ್ಯದರ್ಶಿ ಎನ್​.ಎಮ್ ಸುರೇಶ್ ಆಗಮಿಸಿ ಚಿತ್ರತಂಡಕ್ಕೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

khanana
ಚಿತ್ರತಂಡಕ್ಕೆ ನೆನಪಿನ ಕಾಣಿಕೆ ನೀಡುತ್ತಿರುವ ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್

ಚಿತ್ರದ ಸಕ್ಸಸ್​​​​​​ನಿಂದ ಫುಲ್​​​​​​​​​​​​​​​​​ಖುಷ್ ಆಗಿರುವ ನಿರ್ಮಾಪಕ ಶ್ರೀನಿವಾಸ್, ಮಗ ಆರ್ಯವರ್ಧನ್​​​​​​​​​​​​​​ಗಾಗಿ ಎಸ್​​​​​. ನಲಿಗೆ ಪ್ರೊಡಕ್ಷನ್ ಅಡಿ ತಯಾರಾಗುತ್ತಿರುವ ಮತ್ತೊಂದು ಚಿತ್ರವನ್ನು ಅನೌನ್ಸ್ ಮಾಡಿದರು. ಈ ಸಿನಿಮಾವನ್ನು ರಘುವೀರಯ್ಯ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಸೂಕ್ತ ಹೆಸರಿನ ಹುಡುಕಾಟದಲ್ಲಿದೆ ಚಿತ್ರತಂಡ. ಅಕ್ಟೋಬರ್​​ನಲ್ಲಿ ಚಿತ್ರದ ಶೂಟಿಂಗ್ ಆರಂಭವಾಗಲಿದೆ.

khanana
ನಾಯಕ ಆರ್ಯವರ್ಧನ್

Intro:ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ ವುಡ್ ನಲ್ಲಿ ಹೊಸ ಬರ ಚಿತ್ರಗಳ ಸಂಖ್ಯೆ ಜೋರಾಗಿದೆ. ಆದರೆ ಅವುಗಳಲ್ಲಿ ಸಕ್ಸಸ್ ಕಾಣುವ ಚಿತ್ರಗಳು ಬೆರಳೆಣಿಕೆಯಷ್ಟು ಮಾತ್ರ. ಆದರೆ ಈಗ ಉತ್ತಮ ಕಂಟೆಂಟ್ ಜೊತೆಗೆ ಬಂದಿದ್ದ ಹೊಸ ನಿರ್ದೇಶಕ ಹೊಸ ನಾಯಕ ಹೊಸ ನಿರ್ಮಾಣ ಸಂಸ್ಥೆ ಎಲ್ಲವೂ ಹೊಸಬರಿಂದ ಕೂಡಿದ" ಖನನ" ಚಿತ್ರ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ.

Body:ಹೊಸ ನಿರ್ದೇಶಕ ರಾಧಾ ಸಸ್ಪೆನ್ಸ್ ಥ್ರಿಲ್ಲರ್ ಸರಕಿನೊಂದಿಗೆ ಬಂದು ಸ್ಯಾಂಡಲ್ವುಡ್ನಲ್ಲಿ ನೆಲೆನಿಲ್ಲುವ ಸೂಚನೆ ಕೊಟ್ಟಿದ್ದಾರೆ. ಇನ್ನು ನಾಯಕ ಆರ್ಯವರ್ಧನ್ ಗೂ ಖನನ ಚಿತ್ರ ಒಂದೊಳ್ಳೆ ಬ್ರೇಕ್ ಕೊಟ್ಟಿದೆ.ಇನ್ನೂ ಇದೇ ಖುಷಿಯಲ್ಲಿ ಚಿತ್ರತಂಡ ಚಿತ್ರದ ಸಕ್ಸಸ್ ಅನ್ನು ಸೆಲೆಬ್ರೇಟ್ ಮಾಡಿತು. ಕಲಾವಿದರ ಸಂಘದಲ್ಲಿ ನಡೆದ ಕಾರ್ಯಕ್ರಮಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾದ ಡಿಅರ್ ಜೈರಾಜ್ ಉಪಾಧ್ಯಕ್ಷರಾದ ಉಮೇಶ್ ಬಣಕಾರ್ ಹಾಗೂ ಕಾರ್ಯದರ್ಶಿಗಳಾದ ಎನ್ಎಮ್ ಸುರೇಶ್ ಅವರು ಆಗಮಿಸಿ ಚಿತ್ರತಂಡಕ್ಕೆ ನೆನಪಿನ ಕಾಣಿಕೆಗಳನ್ನು ಕೊಟ್ಟು ಗೌರವಿಸಿದರು.

Conclusion:ಇನ್ನು ಚಿತ್ರದ ಸಕ್ಸಸ್ ನಿಂದ ಫುಲ್ ಖುಷ್ ಆಗಿರುವ ನಿರ್ಮಾಪಕರಾದ ಶ್ರೀನಿವಾಸ್ ಮಗ ಆರ್ಯವರ್ಧನ್ ಗಾಗಿ ಎಸ್ ನಲಿಗೆ ಪ್ರೊಡಕ್ಷನ್ಸ್ ನಲ್ಲಿ ಇಂದು ಮತ್ತೊಂದು ಚಿತ್ರ ಅನೌನ್ಸ್ ಮಾಡಿದರು.ಇನ್ನೂ ಈ ಚಿತ್ರವನ್ನೂ ಹತ್ತುವರ್ಷಗಳಿಂದ ಹಲವು ನಿರ್ದೇಶಕರ ಜೊತೆ ಕೆಲಸ ಮಾಡಿರುವ ಅನುಭವವಿರುವ ರಘು ವೀರಯ್ಯ ಮೊದಲಬಾರಿಗೆ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ.ಅಲ್ಲದೆ ಈ ಚಿತ್ರದ ಟೈಟಲ್ ಹಂಟಿಂಗ್ ನಲ್ಲಿ ನಿರ್ದೇಶಕರು ಬ್ಯುಸಿಯಾಗಿದ್ದು ಅಕ್ಟೋಬರ್‌ ನಲ್ಲಿ ಈ ಚಿತ್ರದ ಶೂಟಿಂಗ್ ಶುರುವಾಗಲಿದೆ.

ಸತೀಶ ಎಂಬಿ..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.