ETV Bharat / sitara

ಮಾಸ್ಟರ್​, RRR ದಾಖಲೆ ಧೂಳೀಪಟ: ಯೂಟ್ಯೂಬ್​ನಲ್ಲಿ KGF-2 ರಾಕಿಭಾಯ್​ ಹವಾ - Yash stared KGF 2

ಕೆಜಿಎಫ್​-2 ಕಡಿಮೆ ಅವಧಿಯಲ್ಲಿ ಅತಿಹೆಚ್ಚು ಲೈಕ್ಸ್​​​​ ಪಡೆದ ಭಾರತ ಚಿತ್ರರಂಗದ ಮೊದಲ ಟೀಸರ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

KGF Chapter 2 Teaser Sets New Record
ಕೆಜಿಎಫ್​-2
author img

By

Published : Jan 8, 2021, 4:00 PM IST

ಬೆಂಗಳೂರು: ಭಾರತೀಯ ಸಿನಿ ಚಿತ್ರರಂಗ ಚಂದನವನದತ್ತ ತಿರುಗಿ ನೋಡುವಂತೆ ಮಾಡಿದ್ದು ಕೆಜಿಎಫ್​​. ಅದರ ಮುಂದಿನ ಭಾಗದ ಕೆಜಿಎಫ್​ ಚಾಪ್ಟರ್​-2 ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಯೂಟ್ಯೂಬ್​​ನಲ್ಲಿ ದಾಖಲೆ ಬರೆಯುತ್ತಿದೆ. ರಾಕಿಂಗ್​ ಸ್ಟಾರ್ ಯಶ್​ ಅವರ ಜನ್ಮದಿನಕ್ಕೂ ಮೊದಲೇ ಈ ಟೀಸರ್​ ಬಿಡುಗಡೆಯಾಗಿದೆ.

ಇದನ್ನೂ ಓದಿ: ಬಿಡುಗಡೆಗೆ ಮುನ್ನವೇ ಲೀಕ್​ : ಬಹುನಿರೀಕ್ಷಿತ ಕೆಜಿಎಫ್-2 ಟೀಸರ್​ ರಿಲೀಸ್​ ಮಾಡಿದ ಚಿತ್ರತಂಡ

ಕೆಜಿಎಫ್​-2 ಕಡಿಮೆ ಅವಧಿಯಲ್ಲಿ ಅತಿಹೆಚ್ಚು ಲೈಕ್ಸ್​​​​ ಪಡೆದ ಭಾರತ ಚಿತ್ರರಂಗದ ಮೊದಲ ಟೀಸರ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನವೆಂಬರ್ 14 ರಂದು ಬಿಡುಗಡೆಯಾದ ದಳಪತಿ ವಿಜಯ್ ನಟನೆಯ 'ಮಾಸ್ಟರ್' ಸಿನಿಮಾದ ಟೀಸರ್ 16 ಗಂಟೆಗಳಲ್ಲಿ 16 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದಿತ್ತು. ಈವರೆಗೂ ಆ ಟೀಸರ್​​​ 26 ಲಕ್ಷ ಲೈಕ್ಸ್​ ಪಡೆದುಕೊಂಡಿದೆ.

ಕೆಜಿಎಫ್-2 ಟೀಸರ್ ಬಿಡುಗಡೆಯಾದ 18 ಗಂಟೆಗಳಲ್ಲಿ 34 ಲಕ್ಷಕ್ಕೂ ಅಧಿಕ ಲೈಕ್ಸ್​ ಪಡೆದು ಮಾಸ್ಟರ್​​ ದಾಖಲೆಯನ್ನು ಅಳಿಸಿ ಹಾಕಿದೆ. ಕೆಜಿಎಫ್​​-2 ನಂತರ ಮಾಸ್ಟರ್ (26 ಲಕ್ಷ ಲೈಕ್ಸ್​)​, ಜೂ.ಎನ್​ಟಿರ್​ ಮತ್ತು ರಾಮ್​ಚರಣ್​ ನಟನೆಯ ಆರ್​ಆರ್​​ಆರ್​ ಟೀಸರ್ (12 ಲಕ್ಷ ಲೈಕ್ಸ್​​)​, ಮಹೇಶ್​ ಬಾಬು ನಟನೆಯ ಸರ್ಕಾರು ವಾರಿ ಪಾಟ, ವಿಜಯ್​ ನಟನೆಯ ಮತ್ತೊಂದು ಸಿನಿಮಾ ಮಾರ್ಸೆಲ್​ ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.

ಅಲ್ಲದೆ, ಬಿಡುಗಡೆಯಾದ 18 ಗಂಟೆಗಳಲ್ಲಿ ಟೀಸರ್​ ಅನ್ನು 5.5 ಕೋಟಿಗೂ ಅಧಿಕ ಜನರು ವೀಕ್ಷಿಸಿದ್ದು, ಭಾರತೀಯ ಚಿತ್ರರಂಗದಲ್ಲೇ ಇದೇ ಮೊದಲ ಬಾರಿಗೆ ಕಡಿಮೆ ಅವಧಿಯಲ್ಲಿ ಇಷ್ಟು ಮಂದಿ ವೀಕ್ಷಿಸಿರುವ ದಾಖಲೆ ಬರೆದಿದೆ. ವೀಕ್ಷಕರ ಸಂಖ್ಯೆ ಇನ್ನೂ ಮುಂದುವರೆದಿದೆ. ಯೂಟ್ಯೂಬ್, ಟ್ವಿಟರ್​​, ಫೇಸ್​ಬುಕ್​, ಇನ್​​ಸ್ಟಾಗ್ರಾಂ ಈಗಲೂ ಚಿತ್ರದ ಟೀಸರ್​​ ಟ್ರೆಂಡಿಂಗ್​ನಲ್ಲಿದೆ.

ಯಶ್​ ಜನ್ಮದಿನದ ಪ್ರಯುಕ್ತ ಜನವರಿ 8ರಂದು ಬೆಳಿಗ್ಗೆ 10:18ಕ್ಕೆ ಟೀಸರ್​ ಬಿಡುಗಡೆ ಮಾಡುವುದಾಗಿ ಜ.4ರಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿತ್ತು. ಆದರೆ, ಕಿಡಿಗೇಡಿಗಳು ಟೀಸರ್​ ಹ್ಯಾಕ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟರು.

ಇದರಿಂದಾಗಿ ಟೀಸರ್​​ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದ ರಾಕಿ ಭಾಯ್​ ಅಭಿಮಾನಿಗಳಿಗೆ ತೀವ್ರ ನಿರಾಸೆ ಉಂಟಾಯಿತು. ಟೀಸರ್​ ಲೀಕ್​ ಆದ ತಕ್ಷಣವೇ ಚಿತ್ರತಂಡ ಅಧಿಕೃತವಾಗಿ ಹೊಂಬಲೆ ಫಿಲ್ಮ್ಸ್ ಪೇಜ್​​ನಲ್ಲಿ ಗುರುವಾರ ರಾತ್ರಿ 9:29ಕ್ಕೆ ಟೀಸರ್​ ಬಿಡುಗಡೆ ಮಾಡಿತು. ಟೀಸರ್ ಲೀಕ್​ ಆದ ಕಾರಣ ಯಶ್​ ಬೇಸರ ವ್ಯಕ್ತಪಡಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.