ETV Bharat / sitara

‘ಕೆಜಿಎಫ್​ 2’ ಟೀಸರ್​ಗೆ ದಾಖಲೆಗಳು ಧೂಳಿಪಟ!

ಸಿನಿಮಾ ಇಂಡಸ್ಟ್ರಿಯಲ್ಲಿ ಬಾಲಿವುಡ್​ ಚಿತ್ರದ ಟೀಸರ್​ ಮತ್ತು ಟ್ರೈಲರ್​ಗಳ ಹಾವಳಿ ಜೋರಾಗಿತ್ತು. ಈಗ ಎಲ್ಲರೂ ಸೌತ್​ ಸಿನಿಮಾ ಇಂಡಸ್ಟ್ರಿಯತ್ತ ಮುಖ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಕೆಜೆಎಫ್​ 2 ಚಿತ್ರದ ಟೀಸರ್​.

kgf chapter 2 teaser, kgf chapter 2 teaser sets new record, kgf chapter 2 teaser sets new record in Youtube, ಕೆಜಿಎಫ್​ 2 ಟೀಸರ್​,  ಕೆಜಿಎಫ್​ 2 ಟೀಸರ್ ದಾಖಲೆ,  ಕೆಜಿಎಫ್​ 2 ಟೀಸರ್ ಹೊಸ ದಾಖಲೆ, ಯೂಟ್ಯೂಬ್​ನಲ್ಲಿ ಕೆಜಿಎಫ್​ 2 ಟೀಸರ್ ಹೊಸ ದಾಖಲೆ,
ಕೃಪೆ: Twitter
author img

By

Published : Jan 15, 2021, 4:34 PM IST

ಭಾರತದ ಚಿತ್ರರಂಗದಲ್ಲಿ ಕೆಜಿಎಫ್​ 2 ಟೀಸರ್​ ಹೊಸ ದಾಖಲೆ ನಿರ್ಮಿಸಿದೆ. ಬಿಡುಗಡೆಗೊಂಡ 24 ಗಂಟೆಗಳಲ್ಲಿ ಈ ಟೀಸರ್​ 78 ಮಿಲಿಯನ್​ಗೂ ಹೆಚ್ಚು ವೀಕ್ಷಣೆ ಪಡೆದಿತ್ತು. ಈ ಮೂಲಕ ಅತಿ ಕಡಿಮೆ ಅವಧಿಯಲ್ಲಿ ಅಧಿಕ ವೀಕ್ಷಣೆ ಪಡೆದ ಸಿನಿಮಾ ಟೀಸರ್​ ಇದಾಗಿತ್ತು. ಈಗ ಮತ್ತೊಂದು ದಾಖಲೆ ಬರೆದಿದೆ. ಯೂಟ್ಯೂಬ್​ನಲ್ಲಿ ‘ಕೆಜಿಎಫ್​-2’ ಚಿತ್ರದ ಟೀಸರ್​ನ್ನು 150 ಮಿಲಿಯನ್​ ಜನ ವೀಕ್ಷಿಸಿದ್ದಾರೆ.

ಯಶ್ ಅಭಿನಯದ 'ಕೆಜಿಎಫ್ 2' ಚಿತ್ರದ ಟೀಸರ್ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿತ್ತು. ಭಾರತೀಯ ಚಿತ್ರರಂಗದ ಎಲ್ಲಾ ಹಳೆಯ ದಾಖಲೆಗಳನ್ನು ಈ ಚಿತ್ರದ ಟೀಸರ್​ ಪುಡಿಪುಡಿ ಮಾಡಿದೆ.

  • " class="align-text-top noRightClick twitterSection" data="">

ಶನಿವಾರ ಸಂಜೆ ವೇಳೆಗೆ ಯೂಟ್ಯೂಬ್‍ನಲ್ಲಿ 'ಕೆಜಿಎಫ್ 2' ಚಿತ್ರದ ಟೀಸರ್ ಅನ್ನು 100 ಮಿಲಿಯನ್​ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಈ ಮೂಲಕ 'ಸೂರ್ಯವಂಶಿ', 'ಮಾಸ್ಟರ್', 'ದಿಲ್ ಬೇಚಾರಾ' ಮುಂತಾದ ಚಿತ್ರಗಳ ಹಿಂದಿನ ದಾಖಲೆಗಳನ್ನು ಮುರಿದು ಹಾಕಿತ್ತು.

ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ವೀಕ್ಷಣೆಗೆ ಒಳಗಾದ ಟ್ರೈಲರ್ ಎಂಬ ಹೆಗ್ಗಳಿಕೆಗೆ 'ಬಾಹುಬಲಿ 2' ಪಾತ್ರವಾಗಿದೆ. ಈ ಟ್ರೈಲರ್​ ಅನ್ನು 11 ಕೋಟಿ 80 ಲಕ್ಷ ಮಂದಿ ವೀಕ್ಷಣೆ ಮಾಡಿದ್ದರು. ಈಗಾಗಲೇ 'ಕೆಜಿಎಫ್ 2' ಚಿತ್ರದ ಟೀಸರ್ ಅನ್ನು 11 ಕೋಟಿ 70 ಲಕ್ಷ ಜನರು ವೀಕ್ಷಣೆ ಮಾಡಿದ್ದು, 'ಬಾಹುಬಲಿ 2' ಚಿತ್ರದ ಟ್ರೈಲರ್ ದಾಖಲೆಯನ್ನು ಸಹ ಕೆಜಿಎಫ್​-2 ಚಿತ್ರ ಮುರಿದಿದೆ.

ಮೂರು ವರ್ಷಗಳಲ್ಲಿ ಭಾರತದಲ್ಲಿ ಅತ್ಯಂತ ಹೆಚ್ಚು ವೀಕ್ಷಣೆಯಾದ ಟೀಸರ್ ಎಂಬ ಹೆಗ್ಗಳಿಕೆಗೆ 'ಬಾಹುಬಲಿ​- 2' ಪಾತ್ರವಾಗಿತ್ತು. ಆದರೆ 'ಕೆಜಿಎಫ್ 2' ಆ ದಾಖಲೆಯನ್ನು ಮೂರೇ ದಿನಗಳಲ್ಲಿ ಮುರಿದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.