ETV Bharat / sitara

ಭಾರತಕ್ಕಿಂತ ಮುಂಚೆ ಅಮೆರಿಕಾದಲ್ಲಿ ಬಿಡುಗಡೆ ಆಗಲಿದೆ ಕೆಜಿಎಫ್ ಚಾಪ್ಟರ್ 2 ಸಿನಿಮಾ! - KGF Chapter 2 movie release in USA

ಏಪ್ರಿಲ್ 13ರಂದು ಅಮೆರಿಕಾದಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಪ್ರೀಮಿಯರ್ ಶೋ ಅನ್ನು ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಕೆಜಿಎಫ್ ಚಾಪ್ಟರ್ 2 ಸಿನಿಮಾ ಇಂಡಿಯಾಗಿಂತ ಮುಂಚೆ ಅಮೆರಿಕದಲ್ಲಿ ಮೊದಲು ಪ್ರದರ್ಶನ ಆಗಲಿದೆ‌..

kgf-chapter-2
ಕೆಜಿಎಫ್ ಚಾಪ್ಟರ್ 2
author img

By

Published : Mar 18, 2022, 7:24 PM IST

ಕೆಜಿಎಫ್ ಸಿನಿಮಾ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿಯೇ ಹೊಸ ಅಲೆ ಎಬ್ಬಿಸಿದೆ. ನಾಲ್ಕು ವರ್ಷದ ಹಿಂದೆ ವಿಶ್ವದಾದ್ಯಂತ ಇತಿಹಾಸ ಬರೆದ ಕೆಜಿಎಫ್ ಸಿನಿಮಾದ ಸಿಕ್ವೇಲ್​ಗೋಸ್ಕರ ಕೋಟ್ಯಂತರ ಅಭಿಮಾನಿಗಳು ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

ಏಪ್ರಿಲ್‌ 14ಕ್ಕೆ ವಿಶ್ವಾದ್ಯಂತ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆ ಆಗೋದಿಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ರಾಕಿಂಗ್ ಸ್ಟಾರ್ ಯಶ್ ನರಾಚಿ ರಾಜನಾಗಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನವಿದೆ. ಟೀಸರ್​ನಿಂದಲೇ ದಾಖಲೆ ಬರೆದಿರುವ ಕೆಜಿಎಫ್ ಚಾಪ್ಟರ್ 2 ಸಿನಿಮಾ ಭಾರತಕ್ಕಿಂತ ಮುಂಚೆ ಅಮೆರಿಕಾದಲ್ಲಿ ಮೊದಲು ಬಿಡುಗಡೆ ಆಗುತ್ತಿದೆ.

ಏಪ್ರಿಲ್ 13ರಂದು ಅಮೆರಿಕಾದಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಪ್ರೀಮಿಯರ್ ಶೋ ಅನ್ನು ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಕೆಜಿಎಫ್ ಚಾಪ್ಟರ್ 2 ಸಿನಿಮಾ ಇಂಡಿಯಾಗಿಂತ ಮುಂಚೆ ಅಮೆರಿಕದಲ್ಲಿ ಮೊದಲು ಪ್ರದರ್ಶನ ಆಗಲಿದೆ‌.

ಸಿನಿಮಾದ ಟ್ರೈಲರ್​ಗಿಂತ ಮುಂಚೆ ಮಾರ್ಚ್ 21ರಂದು ಬೆಳಗ್ಗೆ 11.7ಕ್ಕೆ ತೂಫಾನ್ ಲಿರಿಕಲ್ ವಿಡಿಯೋ ಬಿಡುಗಡೆಯಾಗಲಿದೆ.‌ ಈ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನೀಡಿದ್ದು, ಪ್ರತಿಷ್ಠಿತ ಲಹರಿ ಸಂಸ್ಥೆ ಈ ಚಿತ್ರದ ಆಡಿಯೋ ಹಕ್ಕು ಪಡೆದಿದೆ.

ಯಶ್ ಜೊತೆಗೆ ಶ್ರೀನಿಧಿ ಶೆಟ್ಟಿ ರೊಮ್ಯಾನ್ಸ್ ಮಾಡಲಿದ್ದು, ಬಾಲಿವುಡ್ ನಟ ಸಂಜಯ್‌ ದತ್, ರವೀನಾ ಟೆಂಡನ್, ಪ್ರಕಾಶ್ ರೈ ಸೇರಿದಂತೆ ದೊಡ್ಡ ತಾರಾ ಬಳಗ ಈ ಚಿತ್ರದಲ್ಲಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರ್ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲೆಯಾಳಂ ಭಾಷೆಯಲ್ಲಿ ಚಿತ್ರಮಂದಿರಗಳಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರ ಏಪ್ರಿಲ್ 14ಕ್ಕೆ ವಿಶ್ವಾದ್ಯಂತ ತೆರೆ ಕಾಣಲಿದೆ.

ಓದಿ: ಸ್ಪೇನ್​​ನಲ್ಲಿ ಪ್ರಭಾಸ್‌ಗೆ ಶಸ್ತ್ರಚಿಕಿತ್ಸೆ: ಶೀಘ್ರ ಗುಣಮುಖರಾಗಲು ಅಭಿಮಾನಿಗಳ ಹಾರೈಕೆ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.