ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟೀಸರ್ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದಿತ್ತು. ಇದೀಗ ಅತ್ಯಂತ ಕಡಿಮೆ ಸಮಯದಲ್ಲಿ ಕೋಟ್ಯಂತರ ಪ್ರೇಕ್ಷಕರು ವೀಕ್ಷಿಸಿದ ಟೀಸರ್ ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ.
-
𝐏𝐨𝐰𝐞𝐫 𝐏𝐞𝐨𝐩𝐥𝐞 𝐌𝐚𝐤𝐞 𝐏𝐥𝐚𝐜𝐞𝐬 𝐏𝐨𝐰𝐞𝐫𝐟𝐮𝐥 🔥#KGFChapter2Teaser: https://t.co/3xoDtHZ0be@TheNameIsYash @prashanth_neel @VKiragandur @hombalefilms @duttsanjay @TandonRaveena@SrinidhiShetty7 @BasrurRavi @bhuvangowda84
— Hombale Films (@hombalefilms) May 31, 2021 " class="align-text-top noRightClick twitterSection" data="
1M COMMENTS FOR KGF2 TEASER
">𝐏𝐨𝐰𝐞𝐫 𝐏𝐞𝐨𝐩𝐥𝐞 𝐌𝐚𝐤𝐞 𝐏𝐥𝐚𝐜𝐞𝐬 𝐏𝐨𝐰𝐞𝐫𝐟𝐮𝐥 🔥#KGFChapter2Teaser: https://t.co/3xoDtHZ0be@TheNameIsYash @prashanth_neel @VKiragandur @hombalefilms @duttsanjay @TandonRaveena@SrinidhiShetty7 @BasrurRavi @bhuvangowda84
— Hombale Films (@hombalefilms) May 31, 2021
1M COMMENTS FOR KGF2 TEASER𝐏𝐨𝐰𝐞𝐫 𝐏𝐞𝐨𝐩𝐥𝐞 𝐌𝐚𝐤𝐞 𝐏𝐥𝐚𝐜𝐞𝐬 𝐏𝐨𝐰𝐞𝐫𝐟𝐮𝐥 🔥#KGFChapter2Teaser: https://t.co/3xoDtHZ0be@TheNameIsYash @prashanth_neel @VKiragandur @hombalefilms @duttsanjay @TandonRaveena@SrinidhiShetty7 @BasrurRavi @bhuvangowda84
— Hombale Films (@hombalefilms) May 31, 2021
1M COMMENTS FOR KGF2 TEASER
ಟೀಸರ್ನಲ್ಲಿ ಯಶ್ ಪ್ರವೇಶದಿಂದ ಹಿಡಿದು ಸಂಜಯ್ ದತ್, ರವೀನಾ ಟಂಡನ್ ಸೀನ್ ರೋಮಾಂಚಕವಾಗಿತ್ತು. ಶ್ರೀನಿಧಿ ಶೆಟ್ಟಿ ಎಂಟ್ರಿ, ಯಶ್ ಮೆಷಿನ್ ಗನ್ನಲ್ಲಿ ಸಿಗರೇಟ್ ಹಚ್ಚಿಕೊಳ್ಳುವ ಸ್ಟೈಲ್ ವಿಶ್ವದಾದ್ಯಂತ ಹಲ್ಚಲ್ ಮಾಡಿತ್ತು. ನಾಲ್ಕು ತಿಂಗಳ ಬಳಿಕ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಮತ್ತೊಂದು ಹೊಸ ಅಧ್ಯಾಯ ಬರೆದಿದೆ. ಆ ದಾಖಲೆಯನ್ನು ಚಿತ್ರದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಹೆಮ್ಮೆಯಿಂದ ಹಂಚಿಕೊಂಡಿದೆ. ಚಿತ್ರದ ಟೀಸರ್ಗೆ ಯೂಟ್ಯೂಬ್‌ನಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಕಮೆಂಟ್ ಮಾಡಿದ್ದಾರೆ. ಭಾರತೀಯ ಚಿತ್ರರಂಗದ ಇನ್ನಾವುದೇ ಟೀಸರ್ಗೆ ಇಷ್ಟೊಂದು ಕಮೆಂಟ್ಸ್ ಬಂದಿರುವ ಉದಾಹರಣೆ ಇಲ್ಲ.
ಕೆಜಿಎಫ್ 2 ಟೀಸರ್ ಅನ್ನು 18 ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಇದೂ ಸಹ ದೊಡ್ಡ ಮಟ್ಟದ ದಾಖಲೆ. ಇದರ ಜೊತೆಗೆ ಬುಕ್ ಮೈ ಶೋನಲ್ಲಿ ಅತಿ ಹೆಚ್ಚು ಜನರು ನೋಡಲು ಬಯಸಿರುವ ಸಿನಿಮಾ ಸಹ ಕೆಜಿಎಫ್ ಚಾಪ್ಟರ್ 2 ಆಗಿರೋದು ಇನ್ನೊಂದು ಕುತೂಹಲಕಾರಿ ವಿಷಯ.
ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಮುಂದಿನ ತಿಂಗಳು ವಿಶ್ವದಾದ್ಯಂತ ಬಿಡುಗಡೆಗೆ ರೆಡಿಯಾಗಿತ್ತು. ಆದರೆ, ಕೊರೊನಾ ಹೊಸ ಅಲೆ ಕಾರಣದಿಂದ ಚಿತ್ರದ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ: ನಾಗಭೈರವಿ ಧಾರಾವಾಹಿಯಿಂದ ಹೊರಬಂದ ಅಶ್ವಿನಿ.. ಕಾರಣ ಇಷ್ಟೇ..