ಫಿಲ್ಮ್‌ಫೇರ್ ಅವಾರ್ಡ್‌ನಲ್ಲಿ 'ಕೇಸರಿ' ಚಿತ್ರದ 'ತೇರಿ ಮಿಟ್ಟಿ' ಹಾಡಿಗೆ ನಾಮನಿರ್ದೇಶನಗೊಂಡಿದ್ದ ಗೀತ ರಚನೆಕಾರ ಮನೋಜ್ ಮುಂಟಾಶೀರ್ ಪ್ರಶಸ್ತಿ ಸಿಕ್ಕಿರಲಿಲ್ಲ. ಇದರಿಂದಾಗಿ ತೀವ್ರ ಅಸಮಾಧಾನ ಹೊರ ಹಾಕಿರುವ ಮುಂಟಾಶೀರ್ ತಮ್ಮ ಕೊನೆಯ ಉಸಿರಿರುವವರೆಗೂ ಫಿಲ್ಸ್ ಫೇರ್ ಅವಾರ್ಡ್ ಫಂಕ್ಷನ್‌ಗಳಿಗೆ ಹೋಗದಿರಲು ನಿರ್ಧರಿಸಿದ್ದಾರೆ.
ಅತಿದೊಡ್ಡ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಒಂದಾದ ಫಿಲ್ಮ್‌ಫೇರ್ ಅವಾರ್ಡ್ಸ್ 2020 ಫೆಬ್ರವರಿ 15 ರಂದು ಅಸ್ಸೋಂನ ಗುವಾಹಾಟಿಯಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಕರಣ್ ಜೋಹರ್ ಅವರಂತಹ ಅನೇಕ ಗಣ್ಯರು ಭಾಗವಹಿಸಿದ್ದರು.
-
Good bye Awards..!!! pic.twitter.com/iaZm0za40u
— Manoj Muntashir (@manojmuntashir) February 15, 2020 " class="align-text-top noRightClick twitterSection" data="
">Good bye Awards..!!! pic.twitter.com/iaZm0za40u
— Manoj Muntashir (@manojmuntashir) February 15, 2020Good bye Awards..!!! pic.twitter.com/iaZm0za40u
— Manoj Muntashir (@manojmuntashir) February 15, 2020
ನಂತರ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ ಮನೋಜ್, "ಆತ್ಮೀಯ ಪ್ರಶಸ್ತಿಗಳೇ .. ನನ್ನ ಜೀವನದುದ್ದಕ್ಕೂ ನಾನು ಪ್ರಯತ್ನಿಸಿದರೂ .. # ತೇರಿಮಿಟ್ಟಿಗಿಂತ ಉತ್ತಮ ಹಾಡನ್ನು ಬರೆಯಲು ನನಗೆ ಸಾಧ್ಯವಾಗುವುದಿಲ್ಲ. ಲಕ್ಷಾಂತರ ಭಾರತೀಯರನ್ನು ಅವರ ತಾಯಿನಾಡಿನ ಕುರಿತು ಅಳುವಂತೆ ಮಾಡುವ ಹಾಗೂ ಕಾಳಜಿ ವಹಿಸುವ ಪದಗಳನ್ನು ಗೌರವಿಸುವಲ್ಲಿ ನೀವು ವಿಫಲರಾಗಿದ್ದೀರಿ. ನಾನು ಇನ್ನೂ ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಿದ್ದರೆ, ಅದು ನನ್ನ ಕಲೆಗೆ ದೊಡ್ಡ ಅಗೌರವವಾಗುತ್ತದೆ. ಆದ್ದರಿಂದ ಇಲ್ಲಿ ನಾನು ನಿಮಗೆ ಅಂತಿಮ ವಿದಾಯ ಹೇಳುತ್ತಿದ್ದೇನೆ. ಅಲ್ಲದೇ ನನ್ನ ಕೊನೆಯ ಉಸಿರಾಟದವರೆಗೂ ನಾನು ಯಾವುದೇ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳಿಗೆ ಹಾಜರಾಗುವುದಿಲ್ಲ ಎಂದು ಅಧಿಕೃತ ಘೋಷಿಸುತ್ತಿದ್ದೇನೆ ಎಂದಿದ್ದಾರೆ.
ರಣವೀರ್ ಸಿಂಗ್, ಆಯುಷ್ಮಾನ್ ಖುರಾನಾ, ಅನನ್ಯಾ ಪಾಂಡೆ, ಆಲಿಯಾ ಭಟ್ ಮತ್ತು ಇತರರು. ಗಲ್ಲಿ ಬಾಯ್ ಚಿತ್ರಕ್ಕಾಗಿ ರಣವೀರ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ, ಅದೇ ಚಿತ್ರಕ್ಕಾಗಿ ಆಲಿಯಾ ಭಟ್ ಅತ್ಯುತ್ತಮ ನಟಿ ಮಹಿಳಾ ಪ್ರಶಸ್ತಿ ಪಡೆದರು. ಗಲ್ಲಿ ಬಾಯ್ ಮತ್ತು ಕಬೀರ್ ಸಿಂಗ್ ಅತ್ಯುತ್ತಮ ಸಂಗೀತ ಆಲ್ಬಮ್ ಪ್ರಶಸ್ತಿ ಗೆದ್ದರೆ, ಡಿವೈನ್ ಮತ್ತು ಅಂಕುರ್ ತಿವಾರಿ ಅಪ್ನಾ ಟೈಮ್ ಆಯೇಗಾ ಹಾಡಿಗಾಗಿ ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ ಗೆದ್ದರು ಮತ್ತು ಇನ್ನೂ ಅನೇಕ ಪ್ರತಿಭೆಗಳು ವಿವಿಧ ವಿಭಾಗಗಳಿಗೆ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.