ETV Bharat / sitara

ಸ್ಯಾಂಡಲ್​ವುಡ್​ನಲ್ಲಿ ಚಿತ್ರಮಂದಿರಕ್ಕಾಗಿ 'ಗದಾಯುದ್ಧ'... ಕುರುಕ್ಷೇತ್ರ ಹಿಂದಿಕ್ಕಿದ ಕೆಂಪೇಗೌಡ

ಮುಂದಿನ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದಂದು ಕುರುಕ್ಷೇತ್ರ ಹಾಗೂ ಕೆಂಪೇಗೌಡ 2 ಸಿನಿಮಾ ತೆರೆಗೆ ಬರುತ್ತಿವೆ. ಅಂದು ಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ ಎಂಬುದು ಕಾದು ನೋಡಬೇಕು.

author img

By

Published : Aug 3, 2019, 12:19 PM IST

ಕುರುಕ್ಷೇತ್ರ

ಇದೇ 9 ರಂದು ಬಿಡುಗಡೆಯಾಗಲಿರುವ ಕೋಮಲ್ ಕುಮಾರ್ ಅವರ 'ಕೆಂಪೇಗೌಡ 2' ಸಿನಿಮಾ, ಕುರುಕ್ಷೇತ್ರ ಚಿತ್ರಕ್ಕಿಂತ ಹೆಚ್ಚು ಚಿತ್ರಮಂದಿರಗಳನ್ನು ಪಡೆದುಕೊಂಡಿದೆ. ಡಿ ಬಾಸ್ ದರ್ಶನ್ ಅಭಿನಯದ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾಕ್ಕೆ ಕಡಿಮೆ ಚಿತ್ರಮಂದಿರ ಲಭ್ಯ ಆಗುತ್ತಿವೆ.

ಬಹುನಿರೀಕ್ಷಿತ ಕುರುಕ್ಷೇತ್ರ ದೇಶಾದ್ಯಂತ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ ನಿಜ. ಆದರೆ, ಕರ್ನಾಟಕದಲ್ಲಿ ಬಹು ತಾರಗಣದ ಈ ಪೌರಾಣಿಕ ಸಿನಿಮಾಕ್ಕೆ ಕಡಿಮೆ ಚಿತ್ರಮಂದಿರಗಳು ಸಿಗಲಿವೆ.

ಇದಕ್ಕೆ ಕಾರಣ ಏನು?

ಕುರುಕ್ಷೇತ್ರ ಚಿತ್ರಕ್ಕೆ ಅಲ್ಪ ಥಿಯೇಟರ್​​ಗಳು ಲಭ್ಯವಾಗುತ್ತಿರುವುದಕ್ಕೆ ಕಾರಣ ತಂಡದ ವ್ಯಾಪಾರದ ನೀತಿಯಂತೆ. ಕರ್ನಾಟಕದಲ್ಲಿ 300 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 3ಡಿ ಹಾಗೂ 2ಡಿ ವರ್ಷನ್​ ಬಿಡುಗಡೆ ಆಗುತ್ತದೆ ಎಂಬ ಲೆಕ್ಕಾಚಾರ ಈಗ ತಲೆಕೆಳಕಾಗುತ್ತಿದೆ. ಯಾಕಂದರೆ ಚಿತ್ರಮಂದಿರಗಳು ‘ಕುರುಕ್ಷೇತ್ರ’ ಸಿನಿಮಾ ಪಡೆಯ ಬೇಕಾದರೆ ಎಂದಿಗಿಂತ 3 ಪಟ್ಟು ಹೆಚ್ಚು ಹಣ ಕೊಡಬೇಕು. ಅಂದರೆ ಒಂದು ಚಿತ್ರಮಂದಿರ 5 ಲಕ್ಷ ನೀಡುವ ಬದಲು 15 ಲಕ್ಷ ಮೊದಲೇ ನೀಡಿ ಚಿತ್ರವನ್ನು ಪಡೆಯಬೇಕಂತೆ. ನಿರ್ಮಾಪಕ ಮುನಿರತ್ನ ನಾಯ್ಡು ಹಾಗೂ ರಾಕ್​​ಲೈನ್ ವೆಂಕಟೇಶ್ ಅನುಸರಿಸಿರುವ ಈ ನೀತಿ ಪ್ರದರ್ಶಕ ವಲಯಕ್ಕೆ ಕಷ್ಟ ಎನಿಸಿದೆ. ಒಂದು ವಾರಕ್ಕೆ ₹5 ಲಕ್ಷ ಬದಲು ₹15 ಲಕ್ಷ ನೀಡುವುದು ಹೊರೆಯಾಗಿದೆ. ಹಾಗಾಗಿ ಅನೇಕ ಚಿತ್ರಮಂದಿರಗಳು ‘ಮುನಿರತ್ನ ಕುರುಕ್ಷೇತ್ರ’ ಬಿಡುಗಡೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ. ಆದ್ದರಿಂದ 200 ಕ್ಕೂ ಹೆಚ್ಚು ಚಿತ್ರಮಂದಿರಗಳು ಸಲೀಸಾಗಿ ಕೋಮಲ್ ಕುಮಾರ್ ಅವರ ಕೆಂಪೇಗೌಡ 2 ಚಿತ್ರಕ್ಕೆ ಸಿಕ್ಕಿದೆ.

ಕುರುಕ್ಷೇತ್ರ ವರ್ಸಸ್ ಕೆಂಪೇಗೌಡ 2 ಯಾರಿಗೆ ಜಾಸ್ತಿ ಚಿತ್ರಮಂದಿರಗಳು?

ಇದೀಗ ಬಂದ ಸುದ್ದಿಯ ಪ್ರಕಾರ ಕೋಮಲ್ ಕುಮಾರ್ ಅವರ ಕೆಂಪೆ ಗೌಡ 2 ಹೆಚ್ಚು ಚಿತ್ರಮಂದಿರಗಳನ್ನು ಪಡೆಯುತ್ತಿದ್ದು ಡಿ ಬಾಸ್ ದರ್ಶನ್ ಮುನಿರತ್ನ ಕುರುಕ್ಷೇತ್ರ ಸಿನಿಮಾಕ್ಕೆ ಆಗಸ್ಟ್ 9 ರಂದು ಕಡಿಮೆ ಚಿತ್ರಮಂದಿರ ಲಭ್ಯ ಆಗುತ್ತಿದೆ.

ಮುನಿರತ್ನ ಕುರುಕ್ಷೇತ್ರ ದೇಶಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ ನಿಜ. ಆದರೆ ಕರ್ನಾಟಕದಲ್ಲಿ ಬಹು ತಾರಗಣದ ಪೌರಾಣಿಕ ಸಿನಿಮಾಕ್ಕೆ ಕಡಿಮೆ ಚಿತ್ರಮಂದಿರಗಳು ಕೋಮಲ್ ಕುಮಾರ್ ಕೆಂಪೆ ಗೌಡ 2 ಚಿತ್ರಕ್ಕೆ ಹೊಲಿಸಿದರೆ.

ಇದಕ್ಕೆ ಕಾರಣ ಏನು? ಮುನಿರತ್ನ ಕುರುಕ್ಷೇತ್ರ ತಂಡದ ವ್ಯಾಪಾರದ ನೀತಿ ಅನ್ನುತ್ತದೆ ಒಂದು ವರ್ಗ. ಕರ್ನಾಟಕದಲ್ಲಿ 300 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 3 ಡಿ ಹಾಗೂ 2 ಡಿ ಬಿಡುಗಡೆ ಆಗುತ್ತದೆ ಎಂಬ ಲೆಕ್ಕಾಚಾರ ಈಗ ತಲೆಕೆಳಕಾಗುತ್ತಿದೆ. ಚಿತ್ರಮಂದಿರಗಳು ಮುನಿರತ್ನ ಕುರುಕ್ಷೇತ್ರ ಪಡೆಯ ಬೇಕಾದರೆ ಎಂದಿಗಿಂತ 3 ಪಟ್ಟು ಹೆಚ್ಚು ಹಣ ಕೊಟ್ಟು ಪಡೆಯಬೇಕು ಎಂಬ ನೀತಿ. ಅಂದರೆ ಒಂದು ಚಿತ್ರ ಮಂದಿರ 5 ಲಕ್ಷ ನೀಡುವ ಬದಲು 15 ಲಕ್ಷ ಮೊದಲೇ ನೀಡಿ ಚಿತ್ರವನ್ನು ಪಡೆಯಬೇಕು.

ಮುನಿರತ್ನ ನಾಯ್ಡು ನಿರ್ಮಾಪಕ ಹಾಗೂ ರಾಕ್ಲೈನ್ ವೆಂಕಟೇಶ್ ವಿತರಕರಾಗಿ ಅನುಸರಿಸಿರುವ ನೀತಿ ಪ್ರದರ್ಶಕ ವಲಯಕ್ಕೆ ಕಷ್ಟ ಎನಿಸಿದೆ. ಒಂದು ವಾರಕ್ಕೆ 5 ಲಕ್ಷ ಬದಲು 15 ಲಕ್ಷ ನೀಡುವುದು ಅದು ಭಾರವಾಗಿದೆ. ಹಾಗಾಗಿ ಅನೇಕ ಚಿತ್ರಮಂದಿರಗಳು ಮುನಿರತ್ನ ಕುರುಕ್ಷೇತ್ರ ಬಿಡುಗಡೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ.

ಇಂತಹ ಸಂದರ್ಭದಲ್ಲಿ 200 ಕ್ಕೂ ಹೆಚ್ಚು ಚಿತ್ರಮಂದಿರಗಳು ಸಲೀಸಾಗಿ ಕೋಮಲ್ ಕುಮಾರ್ ಅವರ ಕೆಂಪೆ ಗೌಡ 2 ಚಿತ್ರಕ್ಕೆ ಸಿಕ್ಕಿದೆ.

ಅಂದಹಾಗೆ ಮುನಿರತ್ನ ಕುರುಕ್ಷೇತ್ರ 3 ಡಿ ಸಿನಿಮಾ 3 ಘಂಟೆ 2 ನಿಮಿಷ, 2 ಡಿ ಸಿನಿಮಾ 3 ಘಂಟೆ 16 ನಿಮಿಷ, ಮತ್ತೆ ಈ ಚಿತ್ರಕ್ಕೆ 164 ಕಡೆ ಕತ್ತರಿ ಪ್ರಯೋಗ ಎಂದು ಸೆನ್ಸಾರ್ ಹೇಳಿರುವುದು ಬಹಳ ಆಶ್ಚರ್ಯಕರ ಸಂಗತಿ.

ಮುಂದಿನ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬ. ಅಂದು ಲಕ್ಷ್ಮಿ ಯಾರಿಗೆ ಒಲಿಯುತ್ತದೆ ಎಂಬುದು ಕಾದು ನೋಡಬೇಕು. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.