ಮುಂಬೈ: ಒಬ್ಬರ ಹಿಂದೊಬ್ಬರಂತೆ ಸಿನಿಮಾ ರಂಗದ ನಟ-ನಟಿಯರಿಗೆ ಕೊರೊನಾ ಸೋಂಕು ಬಾಧಿಸುತ್ತಿದೆ. ಇದೀಗ ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ಗೂ ಸೋಂಕು ದೃಢಪಟ್ಟಿದೆ.
- — Keerthy Suresh (@KeerthyOfficial) January 11, 2022 " class="align-text-top noRightClick twitterSection" data="
— Keerthy Suresh (@KeerthyOfficial) January 11, 2022
">— Keerthy Suresh (@KeerthyOfficial) January 11, 2022
'ನನಗೆ ಕೊರೊನಾ ಕಾಣಿಸಿಕೊಂಡಿದ್ದು, ಸೌಮ್ಯ ಲಕ್ಷಣಗಳಿವೆ. ದೇಶದಲ್ಲಿ ಕೋವಿಡ್ ಮೂರನೇ ಅಲೆ ತೀವ್ರವಾಗಿದ್ದು, ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೂ ಸಹ ಸೋಂಕು ದೃಢಪಟ್ಟಿದೆ' ಎಂದಿದ್ದಾರೆ.
'ಯಾವುದೇ ಕಾರಣಕ್ಕೂ ಕೊರೊನಾ ಸೋಂಕು ನಿರ್ಲಕ್ಷಿಸಬೇಡಿ. ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ. ಲಸಿಕೆ ಪಡೆದುಕೊಂಡಿಲ್ಲವೆಂದರೆ ಆದಷ್ಟು ಬೇಗ ತೆಗೆದುಕೊಳ್ಳಿ' ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ನಟ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ, ಪುತ್ರ ಅಕಿರ್ ನಂದನ್ಗೆ ಕೋವಿಡ್
ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಕೀರ್ತಿ ಸುರೇಶ್ ಕಳೆದ ಕೆಲ ದಿನಗಳ ಹಿಂದೆ ರಜನಿಕಾಂತ್ ಅವರೊಂದಿಗೆ 'ಅಣ್ಣಾಥೆ'ಯಲ್ಲಿ ಕಾಣಿಸಿಕೊಂಡಿದ್ದರು.