ETV Bharat / sitara

ಕಥಾ ಸಂಗಮ ಟ್ರೇಲರ್​ ನೋಡಿ ಪುಟ್ಟಣ್ಣ ಕಣಗಲ್​ ಪತ್ನಿ ರಿಷಭ್​​ ಶೆಟ್ಟಿಗೆ ಹೇಳಿದ್ದೇನು? - ಕಥಾ ಸಂಗಮ ಚಿತ್ರದ ಟ್ರೇಲರ್​​ ರಿಲೀಸ್​​​

1976ರಲ್ಲಿ ತಾಂತ್ರಿಕ ಬ್ರಹ್ಮ ಎಂದೇ ಕರೆಸಿಕೊಂಡ ಪುಟ್ಟಣ್ಣ ಕಣಗಾಲ್ "ಕಥಾ ಸಂಗಮ" ಚಿತ್ರವನ್ನು ನಿರ್ದೇಶನ ಮಾಡಿ, ಹೊಸ ಇತಿಹಾಸ ಸೃಷ್ಟಿಸಿದ್ದರು. ಅಲ್ಲದೆ ಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಿಸಿದ್ರು. ಇದೇ ಟೈಟಲ್​​​​ ಮತ್ತೆ ಬಳಸಿಕೊಂಡು ನಿರ್ದೇಶಕ ರಿಷಭ್​​ ಶೆಟ್ಟಿ ಸಿನಿಮಾ ನಿರ್ಮಾಣ ಮಾಡಿದ್ದು, ಸಿನಿಮಾದ ಟ್ರೇಲರ್​ ಲಾಂಚ್​ ಮಾಡಿದ್ದಾರೆ.

ನಾಗಲಕ್ಮ್ನಿ ಮತ್ತು ರಿಷಬ್​ ಶೆಟ್ಟಿ
author img

By

Published : Nov 5, 2019, 8:29 AM IST

1976ರಲ್ಲಿ ತಾಂತ್ರಿಕ ಬ್ರಹ್ಮ ಎಂದೇ ಕರೆಸಿಕೊಂಡ ಪುಟ್ಟಣ್ಣ ಕಣಗಾಲ್ "ಕಥಾ ಸಂಗಮ" ಚಿತ್ರವನ್ನು ನಿರ್ದೇಶನ ಮಾಡಿ, ಹೊಸ ಇತಿಹಾಸ ಸೃಷ್ಟಿಸಿದ್ದರು. ಅಲ್ಲದೆ ಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಿಸಿದ್ರು. ಇದೇ ಟೈಟಲ್​​​​ ಮತ್ತೆ ಬಳಸಿಕೊಂಡು ನಿರ್ದೇಶಕ ರಿಷಭ್​ ಶೆಟ್ಟಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರವನ್ನು ಚಿತ್ರತಂಡ ಪುಟ್ಟಣ್ಣ ಕಣಗಲ್​​ಗೆ ಅರ್ಪಿಸಿದೆ. ಹಾಗೂ ಚಿತ್ರದ ಟ್ರೇಲರ್​ ರಿಲೀಸ್​​ ಮಾಡಿದೆ.

ಕಥಾ ಸಂಗಮ ಚಿತ್ರದ ಟ್ರೇಲರ್​​ ಲಾಂಚ್​​ ಕಾರ್ಯಕ್ರಮಕ್ಕೆ ನಿರ್ದೇಶಕ ಪುಟ್ಟಣ್ಣ ಕಣಗಲ್​ ಪತ್ನಿ ನಾಗಲಕ್ಷ್ಮಿ ಅವರನ್ನು ಆಹ್ವಾನಿಸಲಾಗಿತ್ತು. ಟ್ರೇಲರ್​ ಲಾಂಚ್​ ಮಾಡಿ ಚಿತ್ರತಂಡಕ್ಕೆ ವಿಶ್​​ ಮಾಡಿದ ಪುಟ್ಟಣ್ಣರ ಪತ್ನಿ, ನಿರ್ದೇಶಕ ರಿಷಭ್​​ ಶೆಟ್ಟಿ ಒಳ್ಳೆ ಪ್ರಯತ್ನ ಮಾಡಿದ್ದಾರೆ. ಈ ಚಿತ್ರತಂಡದಲ್ಲಿ ಪ್ರಮುಖರು ಅವರು. ಅವರ ಮಾತನ್ನು ಎಲ್ಲರೂ ಕೇಳಿ. ಮುಂದೆ ಇನ್ನೂ ಒಳ್ಳೆಯ ಸಿನಿಮಾಗಳನ್ನು ಮಾಡಿ. ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದರು.

ಕಥಾ ಸಂಗಮ ಟ್ರೇಲರ್​ ಔಟ್​​

ಇದೇ ವೇಳೆ ಮಾತನಾಡಿದ ನಿರ್ದೇಶಕ ರಿಷಭ್​​​​​ ಶೆಟ್ಟಿ, ಒಂದೇ ಸಿನಿಮಾದಲ್ಲಿ ಹಲವು ಕಥೆಗಳನ್ನು ಹೇಳುವ ಪ್ರಯತ್ನ ಮಾಡಿದ್ದೇವೆ. ಮೊದಲು ಈ ಸಿನಿಮಾ ಮಾಡುವಾಗ ಭಯ ಇತ್ತು. ಯಾಕಂದ್ರೆ ಈ ಹಿಂದೆ ಪುಟ್ಟಣ್ಣ ಕಣಗಲ್​​ ಇದೇ ಹೆಸರಿನ ಸಿನಿಮಾ ಮಾಡಿದ್ರು. ನಮ್ಮಿಂದ ಆ ರೀತಿ ಮಾಡಲು ಸಾಧ್ಯನಾ ಅಂತಾ ಮಾಡಿದೆವು. ಆದ್ರೆ ಚಿತ್ರ ಉತ್ತಮವಾಗಿ ಮೂಡಿಬಂದಿದೆ ಎಂದರು.

ಇನ್ನು ಕಥಾ ಸಂಗಮ ಚಿತ್ರವನ್ನು ಇದೇ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದ್ದು, ಮತ್ತೊಂದು ಹೊಸ ಇತಿಹಾಸ ನಿರ್ಮಾಣ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದೆ.

Intro:ಪುಟ್ಟಣ್ಣ. ಕಣಗಾಲ್ ಕುಟುಂಸ್ಥರಿಂದ " ಕಥಾಸಂಗಮ" ಚಿತ್ರದಟ್ರೈಲರ್ ಲಾಂಚ್ ಮಾಡಿಸಿದ ಚಿತ್ರತಂಡ.

ಸಕ್ಸಸ್ ಫುಲ್ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ, ಸ್ಯಾಂಡಲ್ವುಡ್ನ ಲೆಜೆಂಡ್ ಡೈರೆಕ್ಟರ್ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಸೂಪರ್ ಹಿಟ್ ಚಿತ್ರ "ಕಥಾಸಂಗಮ" ಟೈಟಲನ್ನು ಮತ್ತೆ ಬಳಸಿಕೊಂಡು ಸಿನಿಮಾ ನಿರ್ಮಾಣ ಮಾಡಿದ್ದು.ಈಗಾಗಲೇ" ಕಥಾ ಸಂಗಮ" ಚಿತ್ರವನ್ನು ತಾಂತ್ರಿಕ ಬ್ರಹ್ಮ ಪುಟ್ಟಣ್ಣ ಅವರಿಗೆ ಅರ್ಪಿಸಿದ್ದು.ಇಂದು ಕಥಾ ಸಂಗಮ ಚಿತ್ರತಂಡ ಚಿತ್ರದ ಟ್ರೈಲರ್ ಲಾಂಚ್ ಮಾಡಿದ್ದು.ಟ್ರೈಲರ್ ಅನ್ನು ಪುಟ್ಟಣ್ಣ ಕಣಗಾಲ್ ಅವರ ಪತ್ನಿ ಕೈಲಿ ಲಾಂಚ್ ಮಾಡಿಸುವ ಮೂಲಕ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಗೆ ಗೌರವ ಅರ್ಪಿಸಿದ್ದಾರೆ. ಕಲಾವಿದರ ಸಂಘದಲ್ಲಿ ನಡೆದ ಕಥಾಸಂಗಮ ಚಿತ್ರದ ಟೈಲರ್ ಲಾಂಚ್ ಕಾರ್ಯಕ್ರಮಕ್ಕೆ ಪುಟ್ಟಣ್ಣ ಕಣಗಾಲ್ ಅವರ ಕುಟುಂಬ ಆಗಮಿಸಿದ್ದರುBody:ಚಿತ್ರದ ಟ್ರೈಲರನ್ನು
ಲಾಂಚ್ ಮಾಡಿ ಮಾತನಾಡಿದ ಪುಟ್ಟಣ್ಣ ಅವರ ಪತ್ನಿ ರಿಷಬ್ ಶೆಟ್ಟಿ ಒಳ್ಳೆ ಪ್ರಯತ್ನಮಾಡಿದ್ದಾರೆ.ಈತಂಡಕ್ಕೆ
ಒಳ್ಳೆಯದಾಗಲಿ ಎಂದು "ಕಥಾ ಸಂಗಮ" ಚಿತ್ರದ ಪ್ರಯತ್ನಕ್ಕೆ ರಿಷಬ್ ಶೆಟ್ಟಿಗೆ ಬೆನ್ನು ತಟ್ಟಿದ್ದರು. ಇನ್ನು ಕಥಾಸಂಗಮ ಚಿತ್ರದಲ್ಲಿ 7ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಂಡು,7 ಜನ ನವ ನಿರ್ದೇಶಕರಿಂದ ಕಥಾಸಂಗಮ ಚಿತ್ರವನ್ನು ನಿರ್ದೇಶನ ಮಾಡಿಸಿರುವ ರಿಷಬ್ ಶೆಟ್ಟಿ 7 ನಿರ್ದೇಶಕರಿಗೆ ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣ ಮಾಡಿ ಒಂದು ಕತೆಯಲ್ಲಿ ಭಿಕ್ಷುಕನ ಪಾತ್ರದಲ್ಲಿ ಕಾಣಿಸಿದ್ದಾರೆ. ಈ ಚಿತ್ರವನ್ನು ತುಂಬಾ ವರ್ಷಗಳ ಹಿಂದೆಯೇ ಪುಟ್ಟಣ್ಣ ಕಣಗಾಲ್ ಅವರು ಮೂರು ವಿಭಿನ್ನ ಕಥೆಗಳನ್ನು ಇಟ್ಟುಕೊಂಡು ನಿರ್ದೇಶನ ಮಾಡಿ ಸಕ್ಸಸ್ ಕಂಡಿದ್ದು. ಒಬ್ಬ ನಿರ್ದೇಶಕರಿಂದಲೂ ಸಿನಿಮಾ ಸಕ್ಸಸ್ ಆಗುತ್ತದೆ ಎಂಬುದನ್ನು ಪ್ರೂವ್ ಮಾಡಿದ್ದಾರೆ. ಹಾಗಾಗಿ ಅವರ ಹೆಸರಿಗೆ ಚ್ಯುತಿ ಬಾರದ ರೀತಿಯಲ್ಲಿ ಈ ಚಿತ್ರಕ್ಕೆ ತುಂಬಾ ವಿಶೇಷವಾದ ಕಥೆಗಳನ್ನು ಆಯ್ಕೆ ಮಾಡಿಕೊಂಡು ಚಿತ್ರ ಕಥಾಸಂಗಮ ಚಿತ್ರ ಮಾಡಿದ್ದೇವೆ ಎಂದು ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದರು. ಕಥಾಸಂಗಮ ಚಿತ್ರದಲ್ಲಿ ಕರ್ನಾಟಕದ ಎಲ್ಲ ಜಿಲ್ಲೆಯ ಭಾಷೆಯ ವೈವಿಧ್ಯತೆಯನ್ನು ಈ ಚಿತ್ರದಲ್ಲಿ ತೋರಿಸುವುದರ ಜೊತೆಗೆ ಜೀವನದ ನೀತಿಯನ್ನು ಹೇಳುವ ಪ್ರಯತ್ನ ಪಟ್ಟಿರುವುದಾಗಿ ರಿಷಬ್ ತಿಳಿಸಿದರು.ಸದ್ಯಸೆನ್ಸಾರ್ ಮಂಡಳಿಯಅಂಗಳದಲ್ಲಿರುವ
" ಕಥಾಸಂಗಮ" ಚಿತ್ರವನ್ನು ಇದೇ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದ್ದು. ಮತ್ತೊಂದು ಹೊಸ ಇತಿಹಾಸ ನಿರ್ಮಾಣ ಮಾಡುವುದಕ್ಕೆ ಕಥಾಸಂಗಮ ಚಿತ್ರತಂಡ ತುದಿಗಾಲಲ್ಲಿ ನಿಂತಿದೆ.

ಸತೀಶ ಎಂಬಿ.

( ವಿಸ್ಯುವಲ್ಸ್ ಮೊಜೊದಲ್ಲಿ ಕೊಡಲಾಗಿದೆ)Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.