ETV Bharat / sitara

ಮೂರು ವರ್ಷ ಬೆಳೆಸಿದ್ದ ಸುಂದರ ಕೂದಲನ್ನು ಕತ್ತರಿಸಿದ್ರು ಕಾರುಣ್ಯ! - ಕಾರುಣ್ಯ ರಾಮ್​ ಕೂದಲು

ನಟಿ ಕಾರುಣ್ಯ ರಾಮ್‌ ತಮ್ಮ ಕೂದಲನ್ನು ಕ್ಯಾನ್ಸರ್​​ ರೋಗಿಗಳಿಗೆ ದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಬಗ್ಗೆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸುದೀರ್ಘ ಬರಹವನ್ನು ಪೋಸ್ಟ್​​ ಮಾಡಿದ್ದಾರೆ.

ಮೂರು ವರ್ಷ ಬೆಳೆಸಿದ್ದ ಸುಂದರ ಕೂದಲನ್ನು ಕತ್ತರಿಸಿದ್ರು ಕಾರುಣ್ಯ..!

author img

By

Published : Jan 5, 2021, 4:09 PM IST

ಸ್ಯಾಂಡಲ್‌ವುಡ್‌ ನಟಿ ಕಾರುಣ್ಯ ರಾಮ್‌ ತಮ್ಮ ಕೂದಲನ್ನು ಕ್ಯಾನ್ಸರ್​​ ರೋಗಿಗಳಿಗೆ ದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಬಗ್ಗೆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸುದೀರ್ಘ ಬರಹವನ್ನು ಪೋಸ್ಟ್​​ ಮಾಡಿದ್ದಾರೆ.

karunya ram donat  hair
ನಟಿ ಕಾರುಣ್ಯ ರಾಮ್

ಕತ್ತರಿಸಿದ ಕೂದಲನ್ನು ಕೈಯಲ್ಲಿ ಹಿಡಿದಿರುವ ಫೋಟೋಗಳನ್ನು ಶೇರ್​​ ಮಾಡಿರುವ ನಟಿ, ಭಾರತೀಯ ಹೆಣ್ಣು ಮಕ್ಕಳು ತಮ್ಮ ಸೌಂದರ್ಯಕ್ಕಾಗಿ ಉದ್ದದ ಕೂಲದನ್ನು ಬೆಳೆಸುತ್ತಾರೆ. ಅಲ್ಲದೆ ತಮ್ಮ ಸುಂದರ ಕೂದಲನ್ನು ಬೆಳೆಸಲು ತುಂಬಾ ಕಷ್ಟ ಪಡುತ್ತಾರೆ ಎಂದು ನನಗೆ ಗೊತ್ತಿದೆ. ನಾನು ನನ್ನ ಕೂಲದನ್ನು ಬೆಳೆಸಲು ಮೂರು ವರ್ಷ ಕಷ್ಟ ಪಟ್ಟಿದ್ದೇನೆ. ಆದ್ರೆ 2021ರಿಂದ ಕಷ್ಟದಲ್ಲಿರುವವರಿಗೆ ಏನನ್ನಾದರೂ ಮಾಡಬೇಕೆಂದು ಬಯಸಿದ್ದೇನೆ. ಆದ್ರಿಂದ ನನ್ನ ಕೂದಲನ್ನು ಕ್ಯಾನ್ಸರ್ ಪೀಡಿತರಿಗೆ ದಾನ ಮಾಡಲು ನಿರ್ಧರಿಸಿದ್ದೇನೆ ಎಂದಿದ್ದಾರೆ.

karunya ram donat  hair
ನಟಿ ಕಾರುಣ್ಯ ರಾಮ್

ಈ ಹಿಂದೆ ನಟ ಧ್ರುವ ಸರ್ಜಾ ಕೂಡ ತಮ್ಮ ಕೂದಲನ್ನು ಕ್ಯಾನ್ಸರ್​ ಪೀಡಿತರಿಗೆ ದಾನ ಮಾಡಿ ಮಾನವೀಯತೆ ಮೆರೆದಿದ್ರು. ಇದೀಗ ಕಾರುಣ್ಯ ಕೂಡ ಕೂದಲು ದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

karunya ram donat  hair
ಧ್ರುವ ಸರ್ಜಾ

ಇದನ್ನೂ ಓದಿ : ಧ್ರುವ ಸರ್ಜಾ ಕೂದಲಿಗೆ ಬಿತ್ತು ಕತ್ತರಿ: ದಾನ ಮಾಡಿದ 'ಪೊಗರು'

ಕಾರುಣ್ಯ ‘ವಜ್ರಕಾಯ’ ಸಿನಿಮಾದ ಮೂಲಕ ಖ್ಯಾತಿ ಗಳಿಸಿದರು. ನಂತ್ರ ‘ಮತ್ತೊಂದು ಮದುವೆನಾ, ನರಸಿಂಹ, ಎರಡು ಕನಸು, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಮನೆ ಮಾರಾಟಕ್ಕಿದೆ, ಕಿರಗೂರಿನ ಗಯ್ಯಾಳಿಗಳು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.