ಮುಂಬೈ: ಕಾರ್ತಿಕ್ ಆರ್ಯನ್ ತಮ್ಮ ಮುಂಬರುವ ಆಕ್ಷನ್ ಥ್ರಿಲ್ಲರ್ 'ಧಮಾಕಾ' (Dhamaka hindi film) ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ 'ಬಿಗ್ ಬಾಸ್ 15' ಸೆಟ್‌ಗೆ (Big boss 15) ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್ ನಾನು (Salman khan) ನಿಮ್ಮ ಅಭಿಮಾನಿ ಎಂದು ಹೇಳುವ ಮೂಲಕ ಕಾರ್ತಿಕ್ಗೆ ಆಚ್ಚರಿ ಹುಟ್ಟಿಸಿದರು.
ಕಾರ್ತಿಕ್ ಚಿತ್ರಗಳ ಆಯ್ಕೆ ಮಾಡ್ತೀರಿ, ಮೊದಲು ಉತ್ತಮ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಿರಿ, ಸದ್ಯ ಇಂಟ್ರೆಸ್ಟಿಂಗ್ ಸ್ಟೋರಿ ಆಯ್ಕೆ ಮಾಡುತ್ತಿದ್ದೀರಿ ಎಂದು ಸಲ್ಮಾನ್ ಶ್ಲಾಘನೆ ವ್ಯಕ್ತಪಡಿಸಿದರು. ಅಲ್ಲದೇ, ಸೆಟ್ನಲ್ಲಿ ಇಬ್ಬರು ಹಲವಾರು ವಿಷಯಗಳ ಕುರಿತು ಮಾತನಾಡಿದರು. ರ್ಯಾಪಿಡ್ ಫೈರ್, ಇತರ ಆ್ಯಕ್ಟರ್ ಜೊತೆ ರಿಲೇಶನ್ ಹೀಗೆ ಹಲವಾರು ವಿಚಾರಗಳನ್ನು ಹಂಚಿಕೊಂಡರು. ಅಲ್ಲದೇ, ಅಭಿಮಾನಿಗಳ ನಗುವಿಗೂ ಕಾರಣರಾದರು.
ಸದ್ಯ 'ನೀರ್ಜಾ' ಖ್ಯಾತಿಯ ರಾಮ್ ಮಾಧ್ವನಿ ನಿರ್ದೇಶನದ 'ಧಮಾಕಾ' ಚಿತ್ರದಲ್ಲಿ ಕಾರ್ತಿಕ್ ಪತ್ರಕರ್ತನಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ, ಚಿತ್ರತಂಡ 'ಖೋಯಾ ಪಾಯಾ' ಎಂಬ ಹಾಡನ್ನು ಬಿಡುಗಡೆ ಮಾಡಿತ್ತು. ಮೃಣಾಲ್ ಠಾಕೂರ್ ಮತ್ತು ಅಮೃತಾ ಸುಭಾಷ್ ಸಹ ನಟಿಸಿರುವ ಚಿತ್ರವು ಇದೇ ನವೆಂಬರ್ 19 ರಂದು Netflix ನಲ್ಲಿ ಬಿಡುಗಡೆಗೆಯಾಗಲಿದೆ.