ETV Bharat / sitara

'ಜೆಹ್​'ಗೆ 6 ತಿಂಗಳ ಹುಟ್ಟುಹಬ್ಬದ ಸಂಭ್ರಮ: 'Happy 6 months my life'ಎಂದ ಕರೀನಾ - ಸೈಫ್ ಅಲಿ ಖಾನ್

ನಟಿ ಕರೀನಾ ಕಪೂರ್ ಖಾನ್ ತನ್ನ ಕಿರಿಯ ಮಗ ಜೆಹ್ ಅಲಿ ಖಾನ್ ಅವರ ಅರ್ಧ ವರ್ಷದ ಹುಟ್ಟುಹಬ್ಬವನ್ನು ಮಾಲ್ಡೀವ್ಸ್​​ನಲ್ಲಿ ಆಚರಿಸಿದ್ದು, ಮುದ್ದು ಮಗನೊಂದಿಗಿನ ಫೋಟೋವೊಂದನ್ನು ಇನ್​​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

http://10.10.50.80:6060//finalout3/odisha-nle/thumbnail/21-August-2021/12836438_715_12836438_1629532303253.png
ಜೆಹ್ ಜೊತೆ ಕರೀನಾ ಕಪೂರ್​ ಖಾನ್​
author img

By

Published : Aug 21, 2021, 3:38 PM IST

ಹೈದರಾಬಾದ್​: ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್​ ಅಂಡ್​ ಫ್ಯಾಮಿಲಿ ಸದ್ಯ ಮಾಲ್ಡೀವ್ಸ್​ನಲ್ಲಿ ರಜಾ ದಿನಗಳನ್ನು ಕಳೆಯುತ್ತಿದೆ. ಎರಡನೇ ಮಗ ಜೆಹ್​ಗೆ ಆರು ತಿಂಗಳು ತುಂಬಿದ ಸಂಭ್ರಮದಲ್ಲಿದ್ದಾರೆ ಕರೀನಾ ಹಾಗೂ ಸೈಫ್​.

ಈ ಕುರಿತು ಕರೀನಾ ಪೋಸ್ಟೊಂದನ್ನು ಹಂಚಿಕೊಂಡಿದ್ದು, ಮಗನಿಗೆ ಶುಭ ಹಾರೈಸಿದ್ದಾರೆ. ‘ಪ್ರೀತಿ, ಖುಷಿ ಮತ್ತು ಧೈರ್ಯ ಎಂದೆಂದಿಗೂ ನಿನ್ನಲ್ಲಿರಲಿ, ನನ್ನ ಜೀವಕ್ಕೆ 6 ತಿಂಗಳ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.

ಕರೀನಾ ಮಾಲ್ಡೀವ್ಸ್‌ಗೆ ತನ್ನ ಹಿರಿಯ ಮಗ ತೈಮೂರ್ ಮತ್ತು ನಟ - ಪತಿ ಸೈಫ್ ಅಲಿ ಖಾನ್ ಅವರ 51 ನೇ ಹುಟ್ಟುಹಬ್ಬದ ಹಿನ್ನೆಲೆ ಆ ಸಂತೋಷವನ್ನು ಸಂಭ್ರಮಿಸಲು ತೆರಳಿದ್ದಾರೆ. ವಶನಿವಾರ, ಬೆಬೊ ಇನ್‌ಸ್ಟಾಗ್ರಾಮ್​ನಲ್ಲಿ ಕಿರಿಯ ಮುದ್ದು ಮಗ ಜೆಹ್ ಜೊತೆಗಿನ ತನ್ನ ಫೋಟೋವನ್ನು ಹಂಚಿಕೊಂಡಿದ್ದಾರೆ.

Happy 6 months my life
ಜೆಹ್ ಜೊತೆ ಕರೀನಾ ಕಪೂರ್​ ಖಾನ್​

ಸೈಫ್ ಮತ್ತು ಕರೀನಾ ಅವರನ್ನು ತಮ್ಮ ಅಭಿಮಾನಿಗಳು ಪ್ರೀತಿಯಿಂದ 'ಸೈಫೀನಾ' ಎಂದೇ ಕರೆಯುತ್ತಾರೆ. 2012 ರಲ್ಲಿ ವಿವಾಹವಾದ ಈ ದಂಪತಿಗೆ ತೈಮೂರ್​ ಮತ್ತು ಜೆಹ್ ಎಂಬ ಇಬ್ಬರು ಮುದ್ದಾದ ಗಂಡು ಮಕ್ಕಳಿದ್ದಾರೆ. ಕರೀನಾ ಮತ್ತು ಸೈಫ್ ಅವರ ಎರಡನೇ ಮಗನಿಗೆ ಜಹಾಂಗೀರ್ ಎಂದು ಹೆಸರಿಸಲಾಯಿತು ಎಂದು ವರದಿಗಳು ಪ್ರಸಾರವಾದಾಗ ಈ ದಂಪತಿ ಸಾಕಷ್ಟು ಅಹಿತಕರ ಟ್ರೋಲ್​​ಗೆ ಒಳಗಾಗಬೇಕಾಯ್ತು. ಆದರೆ, ಬಾಲಿವುಡ್​ ನ ಈ ಕಪಲ್​ ಇದ್ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಂಡಿಲ್ಲ.

ಕರೀನಾ ‘ಲಾಲ್ ಸಿಂಗ್ ಛಡ್ಡಾ’ ಚಿತ್ರದಲ್ಲಿ ಅಮೀರ್ ಖಾನ್ ಜೊತೆ ನಟಿಸಲಿದ್ದಾರೆ. ಪತಿ ಸೈಫ್ ಅಲಿ ಖಾನ್ ಅವರು ವೆಬ್ ಸಿರೀಸ್, ಅನೇಕ ಸಿನಿಮಾಗಳು ಸೇರಿದಂತೆ ಹಲವಾರು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.