ETV Bharat / sitara

ಕನ್ನಡಕ್ಕೂ ಡಬ್​ ಆಗಲಿ 'ದಿ ಲಯನ್ ಕಿಂಗ್'...ಶುರುವಾಯಿತು 'ನಿಮ್ಮ ಧ್ವನಿ ಕನ್ನಡಕ್ಕೆ ಹೆಮ್ಮೆ' ಅಭಿಯಾನ - ಅಭಿಯಾನ

ಹಾಲಿವುಡ್​ನ 'ದಿ ಲಯನ್ ಕಿಂಗ್' ಸಿನಿಮಾ ಕನ್ನಡಕ್ಕೂ ಡಬ್​​ ಆಗಲಿ ಎಂದು ಕನ್ನಡಿಗರು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸುತ್ತಿದ್ದಾರೆ.

ದಿ ಲಯನ್ ಕಿಂಗ್
author img

By

Published : Jul 9, 2019, 11:09 AM IST

ಈಗಾಗಲೇ ಹಿಂದಿ, ತೆಲುಗು ಹಾಗೂ ತಮಿಳು ಭಾಷೆಗೆ ಈ ಚಿತ್ರ ಡಬ್ ಆಗುತ್ತಿದೆ. ಇವುಗಳಿಗೆ ಆಯಾ ಭಾಷೆಯ ಹೆಸರಾಂತ ನಟ-ನಟಿಯರು ಧ್ವನಿ ನೀಡಿದ್ದಾರೆ. ಹಿಂದಿ ಆವತರಣಿಕೆಯ ಬಾಲಿವುಡ್ ಬಾದ್​ಷಾ ಶಾರುಖ್ ಖಾನ್ ಹಾಗೂ ಅವರ ಪುತ್ರ ಆರ್ಯನ್ ಖಾನ್​ ಡಬ್ ಮಾಡಿದ್ದಾರೆ. ಟಾಲಿವುಡ್​ನಲ್ಲಿ ನಟ ನಾಣಿ, ಜಗಪತಿ ಬಾಬು, ಆರ್ಮುಗಂ ಖ್ಯಾತಿಯ ರವಿಶಂಕರ್ ಕಂಠದಾನ ಮಾಡಿದ್ದಾರೆ. ಅದರಂತೆ ಕನ್ನಡದ ನಟರು ಈ ಚಿತ್ರಕ್ಕೆ ಡಬ್ ಮಾಡಲಿ ಎಂದು ಕನ್ನಡ ಪರ ಸಂಘಟನೆಗಳು, ಡಬ್ಬಿಂಗ್ ಪರ ಹೋರಾಟಗಾರರು ಒಕ್ಕೂರಲಿನಿಂದ ಒತ್ತಾಯಿಸಿ ಇಂದು ಸಂಜೆ 6.30ಕ್ಕೆ ಟ್ವಿಟರ್​ಲ್ಲಿ 'ನಿಮ್ಮ ಧ್ವನಿ ಕನ್ನಡಕ್ಕೆ ಹೆಮ್ಮೆ' ಹ್ಯಾಷ್​ ಟ್ಯಾಗ್​ನಡಿ ಅಭಿಯಾನ ಪ್ರಾರಂಭಿಸುತ್ತಿದ್ದಾರೆ.

The Lion King
ಚಿತ್ರಕೃಪೆ : ಟ್ವಿಟರ್

ಇನ್ನು 'ದಿ ಲಯನ್ ಕಿಂಗ್' ಸಿನಿಮಾ ಕನ್ನಡಕ್ಕೆ ಡಬ್ ಆಗಬೇಕೆಂದು ಒತ್ತಾಯಿಸುತ್ತಿರುವ ಕನ್ನಡ ಸಿನಿಪ್ರೇಮಿಗಳು, ಅಭಿನಯ ಚಕ್ರವರ್ತಿ ಸುದೀಪ್​, ನಟ ಆದಿತ್ಯಾ, ಆರ್ಮುಗಂ ಖ್ಯಾತಿಯ ರವಿಶಂಕರ್, ಚಿಕ್ಕಣ್ಣ, ಸಾಧು ಕೋಕಿಲಾ ಹಾಗೂ ರಾಧಿಕಾ ಪಂಡಿತ್ ಧ್ವನಿ ನೀಡಲಿ ಎಂದು ಸಲಹೆ ನೀಡುತ್ತಿದ್ದಾರೆ.

The Lion King
ಚಿತ್ರಕೃಪೆ : ಟ್ವಿಟರ್

ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಕಾಲಿಟ್ಟಿದೆ. ಈಗಾಗಲೇ ತಮಿಳು ಹಾಗು ಮಲಯಾಳಂನ ಕೆಲ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿವೆ. ಹಾಲಿವುಡ್​ನ ಫಾಸ್ಟ್​ ಆ್ಯಂಡ್ ಪ್ಯೂರಿಯಸ್​ ಹೊಸ ಸರಣಿ ಕೂಡ ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗುತ್ತಿದೆ. ಇದೀಗ ದಿ ಲಿಯನ್ ಕಿಂಗ್ ಸಿನಿಮಾವನ್ನೂ ಮಾತೃ ಭಾಷೆಯಲ್ಲೇ ಕಣ್ತುಂಬಿಕೊಳ್ಳಬೇಕೆಂಬುದು ಕನ್ನಡಿಗರ ಆಶಯವಾಗಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.